More

    ಏಷ್ಯಾಡ್​ನಲ್ಲಿ ಟೀಮ್​ ಇಂಡಿಯಾ ಕ್ರಿಕೆಟಿಗರ ಪತ್ನಿಯರಿಂದ ಪದಕ ಸಾಧನೆ!

    ಹಾಂಗ್​ರೆೌ: ಭಾರತದ ಕ್ರಿಕೆಟಿಗರು ಇತ್ತ ವಿಶ್ವಕಪ್​ಗೆ ಸಜ್ಜಾಗುತ್ತಿರುವ ನಡುವೆ ಅತ್ತ ಏಷ್ಯಾಡ್​ನಲ್ಲಿ ಭಾರತ ಭರ್ಜರಿ ಪದಕ ಬೇಟೆಯಾಡುತ್ತಿದೆ. ಈ ಪೈಕಿ ಇಬ್ಬರು ಕ್ರಿಕೆಟಿಗರ ಪತ್ನಿಯರೂ ಪದಕ ಗೆಲುವಿನ ಸಾಧನೆ ಮೆರೆದಿರುವುದು ವಿಶೇಷವಾಗಿದೆ. ಟೀಮ್​ ಇಂಡಿಯಾದ ವಿಕೆಟ್​ ಕೀಪರ್​-ಬ್ಯಾಟರ್​ ದಿನೇಶ್​ ಕಾರ್ತಿಕ್​ ಅವರ ಪತ್ನಿ ದೀಪಿಕಾ ಪಲ್ಲಿಕಲ್​ ಮಹಿಳೆಯರ ಸ್ಕ್ವಾಷ್​ ತಂಡ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದರೆ, 2021ರಲ್ಲಿ ಟೀಮ್​ ಇಂಡಿಯಾ ಪರ ಏಕೈಕ ಟಿ20 ಪಂದ್ಯ ಆಡಿರುವ ವೇಗಿ ಸಂದೀಪ್​ ವಾರಿಯರ್​ ಪತ್ನಿ ಆರತಿ ಕಸ್ತೂರಿರಾಜ್​ ಸ್ಕೇಟಿಂಗ್​ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿದ್ದಾರೆ.

    ಅವಳಿ ಮಕ್ಕಳ ತಾಯಿಯಾಗಿರುವ ದೀಪಿಕಾ ಪಲ್ಲಿಕಲ್​ ಈ ಹಿಂದೆ 2014ರ ಏಷ್ಯಾಡ್​ನಲ್ಲಿ ಬೆಳ್ಳಿ, ಕಂಚು ಮತ್ತು 2010, 2018ರ ಏಷ್ಯಾಡ್​ನಲ್ಲೂ ಕಂಚು ಗೆದ್ದಿದ್ದರು. ಕಾಮನ್ವೆಲ್ತ್​ ಗೇಮ್ಸ್​ನಲ್ಲೂ ಅವರು 1 ಚಿನ್ನ, 2 ಬೆಳ್ಳಿ, 1 ಕಂಚು ಜಯಿಸಿದ್ದಾರೆ. ಏಷ್ಯಾಡ್​ನಲ್ಲಿ ಇನ್ನು ಅವರು ಮಿಶ್ರ ಡಬಲ್ಸ್ ವಿಭಾಗದಲ್ಲೂ ಸ್ಪರ್ಧಿಸಲಿದ್ದಾರೆ.

    29 ವರ್ಷದ ಆರತಿ ಈ ಹಿಂದೆಯೂ ಅಂತಾರಾಷ್ಟ್ರೀಯ ಸ್ಕೇಟಿಂಗ್​ನಲ್ಲಿ ಹಲವು ಪದಕ ಗೆದ್ದಿದ್ದು, ವೃತ್ತಿಯಲ್ಲಿ ವೈದ್ಯೆ ಕೂಡ ಆಗಿದ್ದಾರೆ. ಕಳೆದ ಮೇನಲ್ಲಿ ಸ್ಕೇಟಿಂಗ್​ ವೇಳೆ ಬಿದ್ದು, 20 ಗಾಯಗಳಿಗೆ 26 ಸ್ಟಿಚ್​ ಹಾಕಿಸಿಕೊಂಡಿದ್ದ ಆರತಿ, ವೈದ್ಯೆಯಾಗಿರುವ ತಾಯಿಯ ಆರೈಕೆಯಿಂದ ಬೇಗನೆ ಚೇತರಿಸಿಕೊಂಡು ಏಷ್ಯಾಡ್​ಗೆ ಸಿದ್ಧಗೊಂಡಿದ್ದರು. 32 ವರ್ಷದ ಸಂದೀಪ್​ ವಾರಿಯರ್​ ದೇಶೀಯ ಕ್ರಿಕೆಟ್​ನಲ್ಲಿ ಕೇರಳ-ತಮಿಳುನಾಡು ಮತ್ತು ಐಪಿಎಲ್​ನಲ್ಲಿ ಆರ್​ಸಿಬಿ, ಕೆಕೆಆರ್​ ತಂಡಗಳ ಪರ ಆಡಿದ್ದಾರೆ.

    VIDEO: ಇಶ್​ ಸೋಧಿ ರನೌಟ್​ ಮಾಡಿ ವಾಪಸ್​ ಕರೆದ ಬಾಂಗ್ಲಾ; ಹೃದಯ ಗೆದ್ದ ಕ್ರೀಡಾಸ್ಫೂರ್ತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts