ದಕ್ಷಿಣ ಆಫ್ರಿಕಾ ವಿರುದ್ಧ 2ನೇ ಟೆಸ್ಟ್​ಗೆ ರವೀಂದ್ರ ಜಡೇಜಾ ಫಿಟ್​ ನಿರೀಕ್ಷೆ

jadeja web
Published on

ಸೆಂಚುರಿಯನ್​: ಬೆನ್ನುನೋವಿನಿಂದಾಗಿ ಮೊದಲ ಟೆಸ್ಟ್​ ತಪ್ಪಿಸಿಕೊಂಡಿರುವ ಸ್ಪಿನ್​ ಬೌಲಿಂಗ್​ ಆಲ್ರೌಂಡರ್​ ರವೀಂದ್ರ ಜಡೇಜಾ ಕೇಪ್​ಟೌನ್​ನಲ್ಲಿ ನಡೆಯಲಿರುವ ಎರಡನೇ ಹಾಗೂ ಅಂತಿಮ ಟೆಸ್ಟ್​ ಪಂದ್ಯಕ್ಕೆ ಫಿಟ್​ ಆಗುವ ನಿರೀಕ್ಷೆ ಇದೆ.

ಸೆಂಚುರಿಯನ್​ ಟೆಸ್ಟ್​ ಪಂದ್ಯ ಆರಂಭಕ್ಕೆ ಮುನ್ನ ಬೆಳಗ್ಗೆ ಜಡೇಜಾಗೆ ಬೆನ್ನುನೋವಿನ ಸಮಸ್ಯೆ ಕಾಣಿಸಿಕೊಂಡಿತ್ತು. ಇದರಿಂದ ಅನುಭವಿ ಸ್ಪಿನ್ನರ್​ ಆರ್​. ಅಶ್ವಿನ್​ಗೆ ಆಡುವ ಅವಕಾಶ ಲಭಿಸಿತ್ತು. ಇದೀಗ ಫಿಟ್ನೆಸ್​ ಡ್ರಿಲ್​ನಲ್ಲಿ ಪಾಲ್ಗೊಂಡಿರುವ ಜಡೇಜಾ, ಯಾವುದೇ ತೊಂದರೆ ಇಲ್ಲದೆ 30-40 ಮೀಟರ್​ ಓಟದ ಅಭ್ಯಾಸ ನಡೆಸಿದ್ದಾರೆ.

20 ನಿಮಿಷ ಬೌಲಿಂಗ್​ ಕೂಡ ಮಾಡಿದ್ದಾರೆ. ಅಶ್ವಿನ್​ 19 ಓವರ್​ ಎಸೆದು 40 ರನ್​ಗೆ 1 ವಿಕೆಟ್​ ಕಬಳಿಸಿದ್ದರು. ಜಡೇಜಾ ಬೌಲಿಂಗ್​ನಲ್ಲಿ ಇದಕ್ಕಿಂತ ಪರಿಣಾಮಕಾರಿ ಆಗುವ ನಿರೀಕ್ಷೆ ಇಲ್ಲದಿದ್ದರೂ, 6 ಅಥವಾ 7ನೇ ಕ್ರಮಾಂಕದಲ್ಲಿ ಬ್ಯಾಟರ್​ ಆಗಿ ಹೆಚ್ಚು ಉಪಯುಕ್ತರಾಗಬಲ್ಲರು. ಕೇಪ್​ಟೌನ್​ ಟೆಸ್ಟ್​ ಪಂದ್ಯ ಜನವರಿ 3ರಿಂದ 7ರವರೆಗೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net