

RCB vs CSK: ಚೈನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಶುಕ್ರವಾರ(ಮಾ.28) ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 50 ರನ್ಗಳಿಂದ ಸೋಲಿಸಿತು. ಬಳಿಕ ಈ ಕುರಿತು ಮಾತನಾಡಿರುವ ಸಿಎಸ್ಕೆ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ವಿಭಿನ್ನ ಹೇಳಿಕೆ ಕೊಟ್ಟಿದ್ದಾರೆ.
ತಮ್ಮ ತಂಡವು ದೊಡ್ಡ ಅಂತರದಿಂದ ಸೋಲಲಿಲ್ಲ ಮತ್ತು ಕೇವಲ 50 ರನ್ಗಳಿಗೆ ತಲುಪಿದೆ ಅದು ಸಂತೋಷವಾಗಿದೆ ಎಂದಿದ್ದಾರೆ.
ಚೆಕಾಪ್ನಲ್ಲಿ ಇಂದು ಬ್ಯಾಟಿಂಗ್ ಮಾಡುವುದು ಅಷ್ಟು ಸುಲಭವಾಗಿರಲಿಲ್ಲ. ಕಳಪೆ ಫೀಲ್ಡಿಂಗ್ ನಮಗೆ ನಷ್ಟವನ್ನುಂಟು ಮಾಡಿತು. 170 ರನ್ಗಳನ್ನು ಬೆನ್ನಟ್ಟುವಾಗ, ನಿಮಗೆ ಸ್ವಲ್ಪ ಹೆಚ್ಚು ಸಮಯವಿರುತ್ತದೆ. ಆದರೆ, ನೀವು 20 ರನ್ಗಳನ್ನು ಹೆಚ್ಚುವರಿಯಾಗಿ ಬೆನ್ನಟ್ಟುವಾಗ ನೀವು ಪವರ್ ಪ್ಲೇನಲ್ಲಿ ವಿಭಿನ್ನವಾಗಿ ಬ್ಯಾಟಿಂಗ್ ಮಾಡಬೇಕಾಗುತ್ತದೆ ಮತ್ತು ಅದು ಇಂದು ಆಗಲಿಲ್ಲ ಎಂದು ಸೋಲಿನ ಬೇಸರ ಹೊರ ಹಾಕಿದರು.
"ಹೊಸ ಚೆಂಡು ಸ್ವಲ್ಪ ಜಿಗುಟಾಗಿತ್ತು. ಹೀಗಾಗಿ, ವಿಕೆಟ್ ಸ್ವಲ್ಪ ನಿಧಾನವಾಯಿತು. ಅದು ಹೇಗೆ ಆಯಿತೋ ಗೊತ್ತಿಲ್ಲ ಎಂದಿರುವ ನಾಯಕ ಗಾಯಕ್ವಾಡ್, ಕೊನೆಯಲ್ಲಿ ನಾವು ದೊಡ್ಡ ಅಂತರದಿಂದ ಸೋತಿಲ್ಲ, ಅದು ಕೇವಲ 50 ರನ್ಗಳು. ತಮ್ಮ ತಂಡಕ್ಕೆ ಫೀಲ್ಡಿಂಗ್ನಲ್ಲಿ ಸಾಕಷ್ಟು ಸುಧಾರಣೆಯ ಅಗತ್ಯವಿದೆ'' ಎಂದು ಹೇಳಿದರು.
ಚೈನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಶುಕ್ರವಾರ(ಮಾ.28) ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ನೀಡಿದ್ದ 197 ಗುರಿಯನ್ನು ಬೆನ್ನಟ್ಟಿದ ಸಿಎಸ್ಕೆ, ಆರಂಭಿಕ ಹಂತದಲ್ಲೇ ವಿಕೆಟ್ ಕಳೆದುಕೊಂಡು ಗುರಿಯನ್ನು ತಲುಪುವಲ್ಲಿ ಎಡವಿತು. ಅಂತಿಮವಾಗಿ ತವರಿನಲ್ಲೇ ಎರಡನೇ ಪಂದ್ಯ ಸೋತ ಚೆನ್ನೈ ಪಡೆಗೆ ಭಾರೀ ಮುಖಭಂಗ ಉಂಟಾಯಿತು.(ಏಜೆನ್ಸೀಸ್).