ಚೆಪಾಕ್​ ಕ್ರೀಡಾಂಗಣದಲ್ಲಿ ಧೋನಿ ಎದುರು ಪ್ರತಿಧ್ವನಿಸಿದ RCB.. RCB..; ವಿಡಿಯೋ ವೈರಲ್​!

dk - 2025-03-29T071501.452
Published on

RCB vs CSK: ಚೈನ್ನೈನ ಚೆಪಾಕ್​ ಕ್ರೀಡಾಂಗಣದಲ್ಲಿ ಶುಕ್ರವಾರ(ಮಾ.28) ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 50 ರನ್‌ಗಳಿಂದ ಸೋಲಿಸಿತು.

ಆರ್​ಸಿಬಿ ನೀಡಿದ್ದ 197 ಗುರಿಯನ್ನು ಬೆನ್ನಟ್ಟಿದ ಸಿಎಸ್​ಕೆ, ಆರಂಭಿಕ ಹಂತದಲ್ಲೇ ವಿಕೆಟ್​ ಕಳೆದುಕೊಂಡು ಗುರಿಯನ್ನು ತಲುಪುವಲ್ಲಿ ಎಡವಿತು. ಅಂತಿಮವಾಗಿ ತವರಿನಲ್ಲೇ ಎರಡನೇ ಪಂದ್ಯ ಸೋತ ಚೆನ್ನೈ ಪಡೆಗೆ ಭಾರೀ ಮುಖಭಂಗ ಉಂಟಾಯಿತು.

ಚೆಪಾಕ್‌ನಲ್ಲಿ ನಡೆಯುವ ಪ್ರತಿಯೊಂದು ಪಂದ್ಯದಲ್ಲೂ ಇಡೀ ಕ್ರೀಡಾಂಗಣ ಹಳದಿ ಬಣ್ಣದಲ್ಲಿ ಕಾಣುತ್ತದೆ. ಕ್ರೀಡಾಂಗಣವು 'CSK, CSK' ಘೋಷಣೆಗಳ ನಡುವೆ ಎಂಎಸ್ ಧೋನಿ ಮುಂದೆ ಕ್ರೀಡಾಂಗಣದಲ್ಲಿ 'ಆರ್‌ಸಿಬಿ, ಆರ್‌ಸಿಬಿ' ಎಂಬ ಘೋಷಣೆಗಳು ಮೊಳಗುತ್ತಿದ್ದವು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ವೈರಲ್ ಆಗುತ್ತಿದೆ.

197 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಚೆನ್ನೈ ತಂಡದ ಇನ್ನಿಂಗ್ಸ್ ತುಂಬಾ ನಿಧಾನವಾಗಿತ್ತು. ನಾಯಕ ಸೇರಿದಂತೆ ತಂಡದ ಅಗ್ರ ಬ್ಯಾಟ್ಸ್‌ಮನ್‌ಗಳು ಬೇಗನೆ ಔಟಾದರು. ಅಂತಹ ಪರಿಸ್ಥಿತಿಯಲ್ಲಿ, ಆರ್‌ಸಿಬಿ ಗೆಲುವಿನತ್ತ ಸಾಗುತ್ತಿತ್ತು ಮತ್ತು ಚೆಪಾಕ್‌ನಲ್ಲಿ ಸಿಎಸ್‌ಕೆ ಅಭಿಮಾನಿಗಳು ನಿರಾಶೆಗೊಂಡರು. ಆದರೆ ಅಲ್ಲಿದ್ದ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು 'RCB RCB' ಎಂಬ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು. ಅಭಿಮಾನಿಗಳು ಮಾಡಿದ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.

50 ರನ್​​ಗಳ ಅಂತದಲ್ಲಿ ಸಿಎಸ್​ಕೆಯನ್ನು ಬಗ್ಗುಬಡಿದ ಆರ್​ಸಿಬಿ, ಪ್ರಸ್ತುತ ಐಪಿಎಲ್​ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿದೆ. ಆರ್​ಸಿಬಿ ನಂತರದಲ್ಲಿ ಲಖನೌ ಸೂಪರ್ ಜೈಂಟ್ಸ್​, ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳಿವೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net