ಐಪಿಎಲ್​ ಪಂದ್ಯಗಳನ್ನು ಜೂನ್​ಗೆ ವಿಸ್ತರಿಸುವುದು ಅಸಾಧ್ಯ; ಹೀಗಿದೆ ಕಾರಣ...

web ipl cap
Published on

ಬೆಂಗಳೂರು: ಹಿಂದಿನ ವೇಳಾಪಟ್ಟಿ ಪ್ರಕಾರ ಐಪಿಎಲ್ ಫೈನಲ್​ ಪಂದ್ಯ ಮೇ 25ಕ್ಕೆ ಕೋಲ್ಕತದಲ್ಲಿ ನಡೆಯಬೇಕಿತ್ತು. ಇನ್ನು ಒಂದು ವಾರ ಟೂರ್ನಿ ಸ್ಥಗಿತದಿಂದ ಮಾಸಾಂತ್ಯ ಅಥವಾ ಜೂನ್​ 1ರವರೆಗೆ ಟೂರ್ನಿಯನ್ನು ವಿಸ್ತರಿಸಲು ಅವಕಾಶವಿದೆ. ಆದರೆ ನಂತರ ಜೂನ್​ ಮೊದಲ ವಾರಕ್ಕೂ ಟೂರ್ನಿ ವಿಸ್ತರಿಸಲು ಸಾಧ್ಯವಿಲ್ಲ. ಯಾಕೆಂದರೆ ಜೂನ್​ 11ರಿಂದ ಲಾರ್ಡ್ಸ್​ನಲ್ಲಿ ಆಸ್ಟ್ರೆಲಿಯಾ-ದಕ್ಷಿಣ ಆಫ್ರಿಕಾ ನಡುವಿನ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ಫೈನಲ್​ ಪಂದ್ಯ ನಿಗದಿಯಾಗಿದೆ.

ಐಪಿಎಲ್​ನಲ್ಲಿ ಪ್ರಮುಖ ತಂಡಗಳಿಗೆ ಈ ದೇಶಗಳ ಆಟಗಾರರೇ ಪ್ರಮುಖ ಬಲವಾಗಿದ್ದಾರೆ. ಹೀಗಾಗಿ ಅವರಿಲ್ಲದೆ ಐಪಿಎಲ್​ ಆಯೋಜಿಸಲು ಫ್ರಾಂಚೈಸಿಗಳಿಂದ ವಿರೋಧ ವ್ಯಕ್ತವಾಗಬಹುದು. ಪ್ರಮುಖವಾಗಿ ಆರ್​ಸಿಬಿ ತಂಡಕ್ಕೆ ಜೋಶ್​ ಹ್ಯಾಸಲ್​ವುಡ್​, ಡೆಲ್ಲಿ ತಂಡಕ್ಕೆ ಮಿಚೆಲ್​ ಸ್ಟಾರ್ಕ್​ರಂಥ ಆಸೀಸ್​ ವೇಗಿಗಳೇ ಪ್ರಮುಖ ಅಸ್ತ್ರವಾಗಿದ್ದಾರೆ.

ಜೂನ್​ 20ರಿಂದ ಭಾರತ ತಂಡ ಇಂಗ್ಲೆಂಡ್​ ಪ್ರವಾಸದಲ್ಲಿ 5 ಪಂದ್ಯಗಳ ಟೆಸ್ಟ್​ ಸರಣಿಯನ್ನೂ ಆಡಬೇಕಾಗಿದೆ. ಹೀಗಾಗಿ ಮೇನಲ್ಲೇ ಐಪಿಎಲ್​ ಮುಗಿಸಲು ಸಾಧ್ಯವಾಗದಿದ್ದರೆ ಬಿಸಿಸಿಐ ಮತ್ತೆ ಮರುನಿಗದಿಗಾಗಿ ಸೆಪ್ಟೆಂಬರ್​ವರೆಗೆ ಕಾಯಬೇಕಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net