

ಮುಂಬೈ: ಪತ್ನಿ ಸಾಗರಿಕಾ ಘಾಟ್ಗೆ ಜತೆಗೂಡಿ ಹಿಂದುಗಳ ಹೊಸ ವರ್ಷವಾದ ಯುಗಾದಿ ಹಬ್ಬದ (ಮಹಾರಾಷ್ಟ್ರದಲ್ಲಿ ಗುಧಿ ಪಾಡ್ವಾ) ಆಚರಣೆ ಮಾಡಿದ್ದಕ್ಕಾಗಿ ಟೀಮ್ ಇಂಡಿಯಾದ ಮಾಜಿ ವೇಗಿ ಜಹೀರ್ ಖಾನ್ ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಂ ಮೂಲಭೂತವಾದಿಗಳಿಂದ ತೀವ್ರ ನಿಂದನೆಗಳಿಗೆ ಗುರಿಯಾಗಿದ್ದಾರೆ.
ಅಂತರ್ ಧಮೀರ್ಯ ವಿವಾಹವಾಗಿರುವ ಜಹೀರ್-ಸಾಗರಿಕಾ, ಮನೆಯಲ್ಲಿ ಯುಗಾದಿ ಹಬ್ಬ ಆಚರಿಸಿದ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದಕ್ಕೆ ಪ್ರತಿಯಾಗಿ ಜಹೀರ್ ವಿರುದ್ಧ ದ್ವೇಷಪೂರಿತ ಕಾಮೆಂಟ್ಗಳು ಬಂದಿವೆ. ಈ ಹಿಂದೆ ದೀಪಾವಳಿ ಹಬ್ಬವನ್ನು ಆಚರಿಸಿದಾಗಲೂ ಜಹೀರ್ ಇಂಥದ್ದೇ ನಿಂದನೆಗಳಿಗೆ ಗುರಿಯಾಗಿದ್ದರು.