

ಇಂಡಿಯನ್ ಪ್ರೀಮಿಯರ್ ಲೀಗ್ 2025ರ(IPL2025) ವೇಳಾಪಟ್ಟಿಯನ್ನು ಇಂದು(ಫೆ.16) ಇದೀಗ ಪ್ರಕಟಿಸಿದ್ದಾರೆ.
ಪಂದ್ಯಾವಳಿಯ ಉದ್ಘಾಟನಾ ಪಂದ್ಯ ಇದೇ ಮಾ.22ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್(KKR) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ಮಧ್ಯೆ ನಡೆಯಲಿದೆ.
ಲೀಗ್ ಹಂತವು ಮಾ.22 ರಿಂದ ಮೇ.18 ರವರೆಗೆ ನಡೆಯಲಿದ್ದು, ಫೈನಲ್ ಮ್ಯಾಚ್ ಮೇ.25 ರಂದು ನಡೆಯಲಿದೆ. ಒಟ್ಟು 13 ಸ್ಥಳಗಳಲ್ಲಿ ಐಪಿಎಲ್ ಸೀಸನ್ 18, 65 ದಿನಗಳಲ್ಲಿ 74 ಪಂದ್ಯಗಳು ನಡೆಯಲಿವೆ. ಪ್ಲೇಆಫ್ ಪಂದ್ಯಗಳು ಮೇ.20ರಿಂದ ಮೇ.25ರವರೆಗೆ ಜರುಗಲಿವೆ ಎಂದು ವರದಿಯಾಗಿದೆ.
ಇನ್ನು ಈ ಸೀಸನ್ನಲ್ಲಿ ಗಮನಾರ್ಹವಾಗಿ, ಮುಂಬೈ ಇಂಡಿಯನ್ಸ್ ಏ.7 ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕೇವಲ ಒಂದು ಬಾರಿ ಮಾತ್ರ ಆಡಲಿದೆ. ಮತ್ತೊಂದೆಡೆ, ಚೆನ್ನೈ ಸೂಪರ್ ಕಿಂಗ್ಸ್ ಚೆನ್ನೈನಲ್ಲಿ (ಮಾರ್ಚ್ 28) ಮತ್ತು ಬೆಂಗಳೂರಿನಲ್ಲಿ (ಮೇ 3) ಎರಡು ಬಾರಿ ಆರ್‌ಸಿಬಿ ವಿರುದ್ಧ ಸೆಣಸಲಿದೆ.(ಎಜೆನ್ಸೀಸ್)