

Champion Tropy 2025:ಇದೇ ಫೆ.19ರಿಂದ ಪಾಕಿಸ್ತಾನದಲ್ಲಿ ಆರಂಭವಾಗಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(BCCI)ಯ ಆಯ್ಕೆ ಸಮತಿ ಮೇಲೆ ಟೀಮ್ ಇಂಡಿಯಾದ ಮಾನಜಿ ಆಟಗಾರ ರವಿಚಂದ್ರನ್ ಅಶ್ವಿನ್ ಬೇಸರ ವ್ಯಕ್ತಪಡಿಸಿದ್ದಾರೆ.
ಹೌದು, ಟ್ರೋಫಿ ಸರಣಿಗೆ ಸರಿಯಾದ ತಂಡವನ್ನು ಆಯ್ಕೆ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ಕಿಡಿಕಾರಿರುವ ಅಶ್ವಿನ್, ತಮ್ಮ ಯೂಟ್ಯೂಬ್ ಚಾನಲ್ ಮೂಲಕ ಟ್ರೋಫಿ ತಂಡದ ಬಗ್ಗೆ ಮಾನಾಡಿದ್ದಾರೆ. ಇದೀಗ ಚಾಂಪಿಯನ್ಸ್ ಟ್ರೋಫಿ ಸರಣಿಗೆ ಆಯ್ಕೆಯಾದ ತಂಡದಲ್ಲಿ ಇಬ್ಬರು ಹೆಚ್ಚುವರಿ ಸ್ಪಿನ್ ಬೌಲರ್ಸ್ಗಳು ಇದ್ದಾರೆ. ಯಶಸ್ವಿ ಜೈಸ್ವಾಲ್ ಅವರನ್ನು ಮಿಸಲು ಪಟ್ಟಿಯನ್ನು ಸೇರಿಸಿದ್ದನ್ನು ಟೀಕಿಸಿದ್ದಾರೆ.
ಸಾಮಾನ್ಯವಾಗಿ ಇತರೆ ಪ್ರವಾಸಗಳಲ್ಲಿ 3 ಅಥವಾ 4 ಸ್ಪೀನ್ನರ್ಸ್ಗಳನ್ನು ಕೊಂಡೊಯ್ಯತ್ತೇವೆ. ಆದರೆ, ಚಾಂಪಿಯನ್ಸ್ ಟ್ರೋಫಿಗೆ 5 ಸ್ಪೀನರ್ಸ್ಗಳನ್ನು ಏಕೆ ಕರೆದೊಯ್ಯುತ್ತಿದ್ದಾರೆ ಎಂಬುವುದು ನನಗೆ ಅರ್ಥವಾಗತ್ತಿಲ್ಲ. ಅಲ್ಲದೆ, ಮೀಸಲು ಪಟ್ಟಿಯಲ್ಲಿ ಯುವ ಆಟಗಾರ ಜೈಸ್ವಾಲ್ ಅವರನ್ನೂ ತಗೆದುಕೊಂಡಿದ್ದಾರೆನ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
''ನಮ್ಮ ಅತ್ಯುತ್ತಮ ಇಬ್ಬರು ಎಡಗೈ ಬೌಲರ್ಗಳಾದ ಅಕ್ಷಯ್, ಜಡೇಜಾ ಜತೆ ಹಾರ್ದಿಕ್ ಪಾಂಡ್ಯ ಇದ್ದಾನೆ. ಅಲ್ಲದೆ, ಕುಲದೀಪ್ ಕೂಡ ಇದ್ದಾರೆ. ಇವೆಲ್ಲರ ನಡುವೆ ಇದೀಗ, ವರಣ್ ಚರ್ಕ್ರವರ್ತಿ ಆಡಲು ಬಯಸಿದರೆ ಇದರಲ್ಲಿ ಒಬ್ಬ ಬೌಲರ್ ಹೊರಗುಳಿಯಬೇಕಾಗತ್ತದೆ. ಹಾರ್ದಿಕ್ ಪಾಂಡ್ಯ ಎರಡನೇ ಸ್ಪೀಡ್ ಬೌಲರ್ ಆಗಿ ಯಶಸ್ವಿ ಪಾತ್ರ ನಿರ್ವಹಿಸುತ್ತಾರೆ. ಇದೆಲ್ಲದರ ನಡುವೆ ಸ್ಪೀನ್ನರ್ಸ್ ಇಳಿಸಿದರೆ ಮಿಕ್ಕಿದವರಿಗೆ ಸ್ಥಾನ ಲಭಿಸಲ್ಲ'' ಎಂದು ಹೇಳಿದ್ದಾರೆ.(ಏಜೆನ್ಸೀಸ್)