ಅಂದಹಾಗೆ, ಶ್ವೇತಾ ಪುಂಡೀರ್ ಉತ್ತರಾಖಂಡ ಮೂಲದ ಯುವತಿ. ಈಕೆ ಪ್ರಸ್ತುತ ದೆಹಲಿಯಲ್ಲಿ ವಾಸಿಸುತ್ತಿದ್ದಾರೆ. ಶ್ವೇತಾ ಓರ್ವ ಕಂಟೆಂಟ್ ಕ್ರಿಯೇಟರ್ ಹಾಗೂ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಮಾತ್ರವಲ್ಲ, ಪ್ರಸಾರಕರಾಗಿಯೂ ಕೆಲಸ ಮಾಡುತ್ತಾರೆ. ಶ್ವೇತಾ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಸುಮಾರು 5.87 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ. ಅಲ್ಲದೆ, ಯೂಟ್ಯೂಬ್ನಲ್ಲಿ 50 ಸಾವಿರಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದ್ದಾರೆ. ಇದಲ್ಲದೆ, ಅವರು ಇಂಟರ್ ಕಾಂಟಿನೆಂಟಲ್ ಲೆಜೆಂಡ್ಸ್ ಲೀಗ್‌ನಲ್ಲಿ ಪ್ರಸಾರಕರಾಗಿ ಕೆಲಸ ಮಾಡಿದ ಅನುಭವವನ್ನು ಹೊಂದಿದ್ದಾರೆ. ಆದಾಗ್ಯೂ, ಈ ಇಬ್ಬರೂ ಯಾವಾಗ? ಮತ್ತು ಹೇಗೆ ಭೇಟಿಯಾದರು ಎಂಬುದು ಇನ್ನೂ ತಿಳಿದಿಲ್ಲ.