ಅನುಮತಿ ಕೊಡದಿದ್ರೆ ಡಿವೋರ್ಸ್​... ಮದ್ವೆಗೂ ಮುನ್ನ ಭಾವಿ ಪತ್ನಿ ಬಳಿ ಒಪ್ಪಂದ ಮಾಡಿಕೊಂಡ ಧೋನಿ ಅಭಿಮಾನಿ! MS Dhoni

ಮದ್ವೆಗೂ ಮುನ್ನ ಭಾವಿ ಪತ್ನಿ ಬಳಿ ಒಪ್ಪಂದ ಮಾಡಿಕೊಂಡ ಧೋನಿ ಅಭಿಮಾನಿ
ಮದ್ವೆಗೂ ಮುನ್ನ ಭಾವಿ ಪತ್ನಿ ಬಳಿ ಒಪ್ಪಂದ ಮಾಡಿಕೊಂಡ ಧೋನಿ ಅಭಿಮಾನಿ
Published on

ಪ್ರಮುಖ ಮುಖ್ಯಾಂಶಗಳು

  • ಮಹೇಂದ್ರ ಸಿಂಗ್ ಧೋನಿ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ
  • ಬ್ಯಾಟರ್​ ಕಂ ವಿಕೆಟ್ ಕೀಪರ್ ಆಗಿ ತಮ್ಮ ಪ್ರಯಾಣ ಪ್ರಾರಂಭಿಸಿದ ಧೋನಿ
  • ಭಾರತಕ್ಕೆ ಅನೇಕ ಐಸಿಸಿ ಟ್ರೋಫಿಗಳನ್ನು ಗೆದ್ದು ಕೊಟ್ಟಿದ್ದಾರೆ ಕೂಲ್​ ಕ್ಯಾಪ್ಟನ್​
  • ಎಂ.ಎಸ್​. ಧೋನಿ ಅವರಿಗೆ ವಿಶ್ವದಾದ್ಯಂತ ಅಪಾರ ಅಭಿಮಾನಿ ಬಳಗವೇ ಇದೆ
ನವದೆಹಲಿ: ಮಹೇಂದ್ರ ಸಿಂಗ್ ಧೋನಿ ( MS Dhoni ) ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಬ್ಯಾಟರ್​ ಕಂ ವಿಕೆಟ್ ಕೀಪರ್ ಆಗಿ ತಮ್ಮ ಪ್ರಯಾಣ ಪ್ರಾರಂಭಿಸಿದ ಧೋನಿ, ಭಾರತಕ್ಕೆ ಅನೇಕ ಐಸಿಸಿ ಟ್ರೋಫಿಗಳನ್ನು ಗೆದ್ದು ಕೊಟ್ಟಿದ್ದಾರೆ. ಸುಮಾರು 15 ವರ್ಷಗಳ ಕಾಲ ಟೀಮ್ ಇಂಡಿಯಾ ಕ್ರಿಕೆಟ್‌ನಲ್ಲಿ ಪ್ರಾಬಲ್ಯ ಸಾಧಿಸಿದ ಧೋನಿಗೆ ಅಪಾರ ಅಭಿಮಾನಿ ಬಳಗವಿದೆ.
ಧೋನಿ ಅವರು 44 ವರ್ಷ ಪೂರೈಸಿದ ಬಳಿಕವೂ ಅವರ ಅಭಿಮಾನಿಗಳು ಅವರ ಬ್ಯಾಟಿಂಗ್ ಅನ್ನು ಅಷ್ಟೇ ಉತ್ಸಾಹದಿಂದ ನೋಡುತ್ತಾರೆ. ಪ್ರಸ್ತುತ ಐಪಿಎಲ್​ನಲ್ಲಿ ಧೋನಿ ಅವರು ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಈ ವರ್ಷವೂ ಧೋನಿ ಐಪಿಎಲ್​ ಆಡಲಿದ್ದಾರೆ. ಅವರ ಬ್ಯಾಟಿಂಗ್​ ನೋಡಲೆಂದೇ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಕ್ರೀಡಾಂಗಣಕ್ಕೆ ಜಮಾಯಿಸುತ್ತಾರೆ. ಅಷ್ಟರ ಮಟ್ಟಿಗೆ ಧೋನಿ ಅವರ ಅಭಿಮಾನಿ ಬಳಗವಿದೆ.
ಮಹೇಂದ್ರ ಸಿಂಗ್ ಧೋನಿ ಮೇಲಿನ ಅಭಿಮಾನಕ್ಕೆ ಸಾಕ್ಷಿಯಾಗಿ ಇದೀಗ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಅದೇನೆಂದರೆ, ಮದುವೆಗೂ ಮೊದಲೇ ಯುವಕನೊಬ್ಬ ತನ್ನ ಭಾವಿ ಪತ್ನಿಗೆ ಒಂದು ಷರತ್ತು ಹಾಕಿ, ಬಾಂಡ್ ಪೇಪರ್ ಸಹ ಬರೆಸಿದ್ದಾರೆ. ಷರತ್ತು ಏನೆಂದರೆ, ಮಹೇಂದ್ರ ಸಿಂಗ್ ಧೋನಿ ಅವರ ಪ್ರತಿ ಪಂದ್ಯಗಳನ್ನು ವೀಕ್ಷಿಸಲು ಅನುಮತಿ ನೀಡಬೇಕೆಂಬುದು. ಯಾವುದೇ ಪ್ರಶ್ನೆಗಳನ್ನು ಕೇಳಬಾರದು ಎಂದು ಭಾವಿ ಪತ್ನಿಯಿಂದ ವರ ಬಾಂಡ್​ ಬರೆಸಿಕೊಂಡಿದ್ದಾನೆ.
ಮಹೇಂದ್ರ ಸಿಂಗ್ ಧೋನಿ ಅಭಿಮಾನಿಯಾಗಿರುವ ಧ್ರುವ್ ಮಜೆಥಿಯಾ ಇತ್ತೀಚೆಗೆ ಆಶಿಮಾ ಎಂಬ ಯುವತಿ ಜತೆ ನಿಶ್ಚಿತಾರ್ಥ ಮಾಡಿಕೊಂಡರು. ಈ ವೇಳೆ ವಧು ಒಂದು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಆ ಒಪ್ಪಂದದ ಪ್ರಕಾರ, ಮದುವೆಯ ನಂತರವೂ, ಧ್ರುವ್ ಮಜೆಥಿಯಾ ಅವರಿಗೆ ಅವರ ನೆಚ್ಚಿನ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಆಡುವ ಪ್ರತಿಯೊಂದು ಪಂದ್ಯವನ್ನು ವೀಕ್ಷಿಸಲು ಅನುಮತಿ ನೀಡಬೇಕು. ಅದರಲ್ಲೂ ವಿಶೇಷವಾಗಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯಗಳನ್ನು ವೀಕ್ಷಿಸಲು ಅವಕಾಶ ನೀಡಬೇಕೆಂದು ಬಾಂಡ್​ ಮೂಲಕ ಷರತ್ತು ವಿಧಿಸಲಾಗಿದೆ. ಇದಕ್ಕೆ ವಧು ಕೂಡ ಓಕೆ ಎಂದಿದ್ದಾಳೆ.
ಮದುವೆ ಮಂಟಪದಲ್ಲಿಯೇ ವಧುವಿನ ಕೈಯಿಂದ ವರ ಧ್ರುವ್, ಒಪ್ಪಂದವನ್ನು​ ಓದಿಸಿದರು. ಮದುವೆಯ ನಂತರ ಮಹೇಂದ್ರ ಸಿಂಗ್ ಧೋನಿ ಪಂದ್ಯಗಳನ್ನು ನೋಡಲು ಬಿಡದಿದ್ದರೆ, ವಿಚ್ಛೇದನ ಹಂತಕ್ಕೆ ಹೋಗುವುದಾಗಿ ಧ್ರುವ್​ ಅವರು ಒಪ್ಪಂದ ಪತ್ರದಲ್ಲಿ ಬರೆದಿದ್ದಾರೆ. ಈ ಷರತ್ತಿಗೆ ಒಪ್ಪಿದ ವಧು ಆಶಿಮಾ, ಮದುವೆ ಮಂಟಪದಲ್ಲಿಯೇ ಒಪ್ಪಂದವನ್ನು ಓದಿ ಮದುವೆಯಾದಳು.
ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ವೈರಲ್ ಆಗಿದ್ದು, ಇದನ್ನು ನೋಡಿದ ಕ್ರಿಕೆಟ್ ಅಭಿಮಾನಿಗಳು ತರಹೇವಾರಿ ಕಾಮೆಂಟ್​ಗಳನ್ನು ಹರಿಬಿಡುತ್ತಿದ್ದಾರೆ. ಇದೆಂಥಾ ಹುಚ್ಚು ಒಪ್ಪಂದ? ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರಂತೂ ಮಹೇಂದ್ರ ಸಿಂಗ್ ಧೋನಿ ಅಭಿಮಾನಿಗಳು ಹೀಗೇನಾ? ಎಂದು ವ್ಯಂಗ್ಯವಾಡುತ್ತಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net