ಧರ್ಮಶಾಲಾದಲ್ಲಿ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯವನ್ನು ಗೆದ್ದ ನಂತರ ಆರ್ಸಿಬಿ ತಂಡವು ಬುಧವಾರವೇ ಅಹಮದಾಬಾದ್ಗೆ ಬಂದಿಳಿದಿದ್ದು, ರಜತ್ ಪಾಟೀದಾರ್ ನೇತೃತ್ವದ ಈ ತಂಡ ಈಗಾಗಲೇ ಎರಡು ಅಭ್ಯಾಸ ಅವಧಿಗಳನ್ನು ಪೂರ್ಣಗೊಳಿಸಿದೆ. ಆರ್ಸಿಬಿ ಸತತ ಎರಡನೇ ಬಾರಿಗೆ ಐಪಿಎಲ್ ಫೈನಲ್ ಪ್ರವೇಶಿಸುತ್ತಿದ್ದು, ನಿನ್ನೆ ಮಾಧ್ಯಮಗಳೊಂದಿಗೆ ಮಾತನಾಡಿದ ನಾಯಕ ರಜತ್ ಪಾಟೀದಾರ್, ಪಂದ್ಯದ ಸ್ಥಳಕ್ಕೆ ಬೇಗನೆ ತಲುಪಿರುವುದು ತಂಡಕ್ಕೆ ಸಾಕಷ್ಟು ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.