IPL-2026: ಫೈನಲ್​ನಲ್ಲಿ ಆರ್​ಸಿಬಿ ಅಥವಾ ಗುಜರಾತ್​ ಗೆದ್ದರೆ ಬರೆಯುವ ದಾಖಲೆಗಳು ಹೀಗಿವೆ...

IPL-2026: ಫೈನಲ್​ನಲ್ಲಿ ಆರ್​ಸಿಬಿ ಅಥವಾ ಗುಜರಾತ್​ ಗೆದ್ದರೆ ಬರೆಯುವ ದಾಖಲೆಗಳು ಹೀಗಿವೆ...
IPL-2026: ಫೈನಲ್​ನಲ್ಲಿ ಆರ್​ಸಿಬಿ ಅಥವಾ ಗುಜರಾತ್​ ಗೆದ್ದರೆ ಬರೆಯುವ ದಾಖಲೆಗಳು ಹೀಗಿವೆ...
Published on
ಅಹಮದಾಬಾದ್: ಭಾನುವಾರ ನಡೆಯಲಿರುವ ಆರ್​ಸಿಬಿ-ಗುಜರಾತ್ ತಂಡಗಳ ನಡುವಿನ ಐಪಿಎಲ್​ (IPL) 19ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಯಾವುದೇ ತಂಡ ಗೆದ್ದರೂ, 2ನೇ ಬಾರಿ ಐಪಿಎಲ್​ ಟ್ರೋಫಿ ಗೆದ್ದ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಅಲ್ಲದೆ ಐಪಿಎಲ್​ನಲ್ಲಿ ಒಂದಕ್ಕಿಂತ ಹೆಚ್ಚು ಟ್ರೋಫಿ ಗೆದ್ದ 4ನೇ ತಂಡವೆನಿಸಲಿದೆ. ಸಿಎಸ್​ಕೆ, ಮುಂಬೈ (ತಲಾ 5), ಕೆಕೆಆರ್​ (3) ಹಿಂದಿನ ತಂಡಗಳಾಗಿವೆ. 
ಸತತ 2ನೇ ಕಪ್​ ದಾಖಲೆ ಚಾನ್ಸ್​
ಆರ್​ಸಿಬಿ (RCB) ಗೆದ್ದರೆ ಐಪಿಎಲ್​ನಲ್ಲಿ ಸತತ 2 ಬಾರಿ ಕಪ್​ ಗೆದ್ದ 3ನೇ ತಂಡವೆನಿಸಲಿದೆ. ಈ ಹಿಂದೆ ಸಿಎಸ್​ಕೆ (2010, 2011) ಮತ್ತು ಮುಂಬೈ ಇಂಡಿಯನ್ಸ್​ (2019, 2020) ತಂಡಗಳಷ್ಟೇ ಈ ಸಾಧನೆ ಮಾಡಿವೆ. ಜತೆಗೆ ರಜತ್​ ಪಾಟೀದಾರ್​ ಅವರು ಎಂಎಸ್​ ಧೋನಿ, ರೋಹಿತ್​ ಶರ್ಮ ಬಳಿಕ ಸತತ 2 ಐಪಿಎಲ್​ ಟ್ರೋಫಿ ಗೆದ್ದ 3ನೇ ನಾಯಕ ಎನಿಸಲಿದ್ದಾರೆ. 
20: ಐಪಿಎಲ್​-19ರ ಚಾಂಪಿಯನ್​ ತಂಡ 20 ಕೋಟಿ ರೂ. ಬಹುಮಾನ ಪಡೆಯಲಿದೆ. ರನ್ನರ್​ಅಪ್​ ತಂಡ 12.5 ಕೋಟಿ ರೂ. ಗಳಿಸಲಿದೆ. 
*5: ಆರ್​ಸಿಬಿ ಮತ್ತು ವಿರಾಟ್​ ಕೊಹ್ಲಿಗೆ ಇದು 5ನೇ ಐಪಿಎಲ್ ಫೈನಲ್​. 2009, 2011, 2016ರಲ್ಲಿ ರನ್ನರ್​ಅಪ್​ ಆಗಿದ್ದರೆ, 2025ರಲ್ಲಿ ಚಾಂಪಿಯನ್​ ಎನಿಸಿತ್ತು.
3: ಗುಜರಾತ್​ ಟೈಟಾನ್ಸ್​ ತಂಡ ಐಪಿಎಲ್​ಗೆ ಪದಾರ್ಪಣೆ ಮಾಡಿದ 5 ವರ್ಷಗಳಲ್ಲೇ 3ನೇ ಫೈನಲ್​ ಆಡಲಿದೆ. ಈ ಮುನ್ನ 2022ರ ಪದಾರ್ಪಣೆ ಆವೃತ್ತಿಯಲ್ಲೇ ಚಾಂಪಿಯನ್​ ಮತ್ತು 2023ರಲ್ಲಿ ರನ್ನರ್​ಅಪ್​ ಆಗಿತ್ತು. 
*12: ಐಪಿಎಲ್​ನಲ್ಲಿ 2011ರಲ್ಲಿ ಪ್ಲೇಆಫ್​ ಪದ್ಧತಿ ಶುರುವಾದ ನಂತರದ 15 ಆವೃತ್ತಿಗಳಲ್ಲಿ 12ರಲ್ಲಿ ಕ್ವಾಲಿಫೈಯರ್​-1ರಲ್ಲಿ ಗೆದ್ದ ತಂಡವೇ ಪ್ರಶಸ್ತಿ ಜಯಿಸಿದೆ. 3 ಬಾರಿ ಮಾತ್ರ (2013, 2016, 2017) ಕ್ವಾಲಿಫೈಯರ್​-2ರಲ್ಲಿ ಗೆದ್ದ ತಂಡ ಪ್ರಶಸ್ತಿ ಒಲಿಸಿಕೊಂಡಿದೆ. ಅದಲ್ಲೂ ಕೊನೇ 8 ಆವೃತ್ತಿಗಳಲ್ಲಿ ಕ್ವಾಲಿಫೈಯರ್​-1ರಲ್ಲಿ ಗೆದ್ದ ತಂಡವೇ ಚಾಂಪಿಯನ್​ ಆಗಿದೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net