ಈ ಉತ್ತರದಿಂದ ಆಶ್ಚರ್ಯಚಕಿತರಾದ ವಾನ್, ಹಾಗಾದರೆ ನೀವು ಕಠಿಣ ತರಬೇತಿ ಮಾಡುವುದಿಲ್ಲವೇ? ಎಂದು ಕೇಳಿದಾಗ ವೈಭವ್, ಇಲ್ಲ ಎಂದಿದ್ದರಂತೆ. ಮುಂದುವರಿದು, ನೀವು ದಿನನಿತ್ಯ ಏನು ಆಹಾರ ಸೇವಿಸುತ್ತೀರಿ? ಎಂದು ಕೇಳಿದ್ದಕ್ಕೆ, ಸಿಕ್ಕಿದ್ದನ್ನೆಲ್ಲ ತಿನ್ನುತ್ತೇನೆ ಎಂದು ಉತ್ತರಿಸಿದ್ದಾರೆ. ಇದನ್ನು ಕೇಳಿ ಅಚ್ಚರಿಪಟ್ಟ ಮೈಕಲ್ ವಾನ್, ಇವರೇ ಇಂದಿನ ಆಧುನಿಕ ಯುಗದ ಆಟಗಾರ! ಆರಾಮವಾಗಿ ಕಾರ್ಟೂನ್ ನೋಡಿ, ಇಷ್ಟ ಬಂದಿದ್ದನ್ನು ತಿಂದು, ಮೈದಾನಕ್ಕಿಳಿದು ಚೆಂಡನ್ನು ಸಿಕ್ಸರ್ಗೆ ಅಟ್ಟುತ್ತಾರೆ ಎಂದು ವೈಭವ್ ಅವರ ಬಿಂದಾಸ್ ಶೈಲಿಯನ್ನು ಹೊಗಳಿದ್ದಾರೆ.