ಐಪಿಎಲ್​​ ಮೆಗಾ ಹರಾಜಿಗೆ RCB ಸಜ್ಜು: ಪ್ರಮುಖ ಆಟಗಾರರೇ ಟಾರ್ಗೆಟ್, ರಿಟೇನ್​ ಪಟ್ಟಿ ಹೀಗಿದೆ ನೋಡಿ...

RCB
Published on

RCB retention list : ಇಂಡಿಯನ್ ಪ್ರೀಮಿಯರ್ ಲೀಗ್ ( IPL ) ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ( RCB ) ಇದುವರೆಗೂ ಒಮ್ಮೆಯೂ ಕಪ್ ಗೆದ್ದಿಲ್ಲ. 2016ರಲ್ಲಿ ಫೈನಲ್ ತಲುಪಿದ್ದರಾದರೂ ಸ್ವಲ್ಪದರಲ್ಲೇ ಪ್ರಶಸ್ತಿಯಿಂದ ವಂಚಿತವಾಯಿತು. ಕಳೆದ ಐಪಿಎಲ್-2024 ನಲ್ಲಿ ಎಲಿಮಿನೇಟರ್ ಪಂದ್ಯದಲ್ಲಿ ಸೋತು ಮನೆಗೆ ಹಿಂದಿರುಗಿತು. ಈ ಬಾರಿ ಯಾವುದೇ ಬೆಲೆ ತೆತ್ತಾದರೂ ಕಪ್ ಗೆಲ್ಲುವ ಹಂಬಲದಲ್ಲಿ ಆರ್​ಸಿಬಿ ತಂಡವಿದೆ. ಈ ಹಿನ್ನೆಲೆಯಲ್ಲಿ 2025ರ ಮೆಗಾ ಹರಾಜಿಗೂ ಮುನ್ನ ಪ್ರಮುಖ ಆಟಗಾರರನ್ನು ಉಳಿಸಿಕೊಳ್ಳುವ ಗುರಿಯನ್ನು ಆರ್​ಸಿಬಿ ಹೊಂದಿದೆ.

ಇದೇ ಅಕ್ಟೋಬರ್ 31ರೊಳಗೆ ಐಪಿಎಲ್​ ಫ್ರಾಂಚೈಸಿಗಳು ತಮ್ಮ ರಿಟೇನ್ ಪಟ್ಟಿಯನ್ನು ಐಪಿಎಲ್​ ಆಡಳಿತ ಮಂಡಳಿಯ ಮುಂದೆ ಸಲ್ಲಿಸಬೇಕು. ಈ ಹಿನ್ನಲೆಯಲ್ಲಿ ಆರ್​ಸಿಬಿ ರಿಟೇನ್​ ಪಟ್ಟಿಗೆ ಸಂಬಂಧಿಸಿದ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

RCB

ಮೊದಲಿಗೆ ಆರ್‌ಸಿಬಿ ತನ್ನ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿಯನ್ನು ಉಳಿಸಿಕೊಂಡಿದೆ. ನಂತರದ ಸ್ಥಾನದಲ್ಲಿ ಮೊಹಮ್ಮದ್ ಸಿರಾಜ್ ಮತ್ತು ವಿಲ್ ಜಾಕ್ಸ್ ಇದ್ದಾರೆ. ರಜತ್ ಪಾಟಿದಾರ್ ಮತ್ತು ಕ್ಯಾಮರೂನ್ ಗ್ರೀನ್ ಅವರನ್ನು RTM ಮೂಲಕ ತೆಗೆದುಕೊಳ್ಳಲಿದೆ. ಯಶ್ ದಯಾಳ್ ಅವರನ್ನು ಅನ್‌ಕ್ಯಾಪ್ಡ್ ಆಟಗಾರನಾಗಿ ಉಳಿಸಿಕೊಳ್ಳಲು ಆರ್​ಸಿಬಿ ಮುಂದಾಗಿದೆ ಎನ್ನಲಾಗಿದೆ.

ಕಳೆದ ಐಪಿಎಲ್ ಸೀಸನ್​ನಲ್ಲಿ ಉತ್ತಮ ಪ್ರದರ್ಶನ ನೀಡದ ಗ್ಲೆನ್ ಮ್ಯಾಕ್ಸ್​ವೆಲ್ ಅವರನ್ನು ಆರ್​ಸಿಬಿ ತಂಡದಿಂದ ಹೊರಗಿಟ್ಟಿದೆ. ನಾಯಕ ಫಾಫ್ ಡುಪ್ಲೆಸಿಸ್ ಅವರನ್ನು ಸಹ ಕೈಬಿಡಲಾಗಿದೆ. ಕಳೆದ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡದಿರುವುದು ಮತ್ತು 40 ವರ್ಷ ವಯಸ್ಸನ್ನು ತಲುಪಿರುವುದು ಫಾಫ್ ಅವರನ್ನು ಪಟ್ಟಿಯಿಂದ ಕೈಬಿಡಲು ಕಾರಣವಾಗಿದೆ. ಡುಪ್ಲೆಸಿಸ್​ ಸ್ಥಾನಕ್ಕೆ ಯುವ ಆಟಗಾರನನ್ನು ಬದಲಿಸಲು ಆರ್​ಸಿಬಿ ಬಯಸಿದೆ.

RCB (1)

ಅಂದಹಾಗೆ ಅಕ್ಟೋಬರ್​ 31ರ ಸಂಜೆ 5 ಗಂಟೆಯೊಳಗೆ ಎಲ್ಲ ತಂಡಗಳು ರಿಟೇನ್​ ಆಟಗಾರರ ಪಟ್ಟಿ ಅಂತಿಮಗೊಳಿಸಬೇಕಾಗಿದೆ. ನವೆಂಬರ್ ಮೂರನೇ ವಾರದಲ್ಲಿ ದುಬೈನಲ್ಲಿ ಮೆಗಾ ಹರಾಜು ನಡೆಯುವ ಸಾಧ್ಯತೆ ಇದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net