ಧೋನಿ ಮತ್ತು ರುತುರಾಜ್ ನಡುವೆ ಯಾವುದೇ ವ್ಯತ್ಯಾಸವಿಲ್ಲ! ಇಬ್ಬರಲ್ಲೂ ಇದೊಂದು ಗುಣವಿದೆ… ಕೋಚ್ ಫ್ಲೆಮಿಂಗ್

WhatsApp-Image-2024-04-19-at-2.02.47-PM
Published on

ಬೆಂಗಳೂರು: ಐಪಿಎಲ್ 2024ರ ಆವೃತ್ತಿ ಆರಂಭಗೊಂಡು ಇಂದಿಗೆ 28 ದಿನಗಳೇ ಕಳೆದಿದೆ. ಪ್ರತಿಯೊಂದು ಪಂದ್ಯಗಳು ಬಲು ರೋಚಕವಾಗಿ ಮೂಡಿಬರುತ್ತಿವೆ. ಇದು ಕ್ರಿಕೆಟ್ ಫ್ಯಾನ್ಸ್​ಗಳಿಗೆ ಭರಪೂರ ಮನರಂಜನೆ ಕೊಡುತ್ತಿದ್ದು, ಎಲ್ಲರ ಕಣ್ಣುಗಳು ಮಾತ್ರ ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಮೇಲಿದೆ. ಇದಕ್ಕೆ ಕಾರಣ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ.

ಐಪಿಎಲ್ ಇತಿಹಾಸದಲ್ಲಿ ಐದು ಬಾರಿ ಸಿಎಸ್​ಕೆ ಟ್ರೋಫಿ ಗೆದ್ದುಕೊಟ್ಟ ಚಾಂಪಿಯನ್​ ನಾಯಕ ಎಂ.ಎಸ್. ಧೋನಿ, ಎಲ್ಲಾ ಕ್ರಿಕೆಟ್ ಫಾರ್ಮೆಟ್​ಗಳಿಗೂ ನಿವೃತ್ತಿ ಘೋಷಿಸಿದ್ದರೂ ಸಹ ವರ್ಷದಲ್ಲಿ ಎರಡೇ ಎರಡು ತಿಂಗಳು ನಡೆಯುವ ಐಪಿಎಲ್​ ಲೀಗ್​ನಲ್ಲಿ ಮೈದಾನಕ್ಕಿಳಿಯುವ ಮೂಲಕ ಅಪಾರ ಸಂಖ್ಯೆಯ ಫ್ಯಾನ್ಸ್​ಗಳ ಮುಖದಲ್ಲಿ ಮಂದಹಾಸ ಮೂಡಿಸುತ್ತಾರೆ. ಇದು ಕ್ರಿಕೆಟ್ ಅಭಿಮಾನಿಗಳಿಗೆ ಒಂದು ರೀತಿ ಹಬ್ಬವಿದ್ದಂತೆ.

ಕ್ರಿಕೆಟ್ ದಿಗ್ಗಜ, ಮಾಸ್ಟರ್​ಮೈಂಡ್​ ಮಹೇಂದ್ರ ಸಿಂಗ್ ಧೋನಿ ತಮ್ಮ 43ನೇ ವಯಸ್ಸಿನಲ್ಲಿಯೂ ಸಹ ಚಿರ ಯುವಕನಂತೆ ಕ್ರೀಡಾಂಗಣದಲ್ಲಿ ಸಿಕ್ಸರ್​ ಬಾರಿಸುವುದು, ಫಿಟ್ನೆಸ್​ ಕಾಪಾಡಿಕೊಳ್ಳುವುದನ್ನು ನೋಡಿದ್ರೆ ಅವರಂತ ಸ್ಪೂರ್ತಿದಾಯಕ ಆಟಗಾರ ಮತ್ತೊಬ್ಬ ಇಲ್ಲ ಎನ್ನುವಂತೆ ಮಾಡುತ್ತದೆ. ಈ ಎಲ್ಲಾ ವಿಷಯಗಳು ಅವರ ಫ್ಯಾನ್ಸ್​ಗೆ ಅಚ್ಚುಮೆಚ್ಚು. ಇಡೀ ಸ್ಟೇಡಿಯಂ ಪೂರ ಧೋನಿ...ಧೋನಿ ಎಂದು ಚೀರಾಡುವ ಅಭಿಮಾನಿಗಳು ಅವರ ಬ್ಯಾಟಿಂಗ್ ನೋಡಲು ತಮ್ಮ ತಂಡದ ಬ್ಯಾಟ್ಸ್​ಮನ್​ಗಳ ವಿಕೆಟ್​ಗಾಗಿ ಪ್ರಾರ್ಥಿಸುತ್ತಾರೆ. ಅಷ್ಟರ ಮಟ್ಟಿಗೆ ಧೋನಿಯನ್ನು ಪ್ರೀತಿಸಿ, ಬೆಂಬಲಿಸುತ್ತಾರೆ ಈ ಫ್ಯಾನ್ಸ್.

ಇದೀಗ ಈ ಸೀಸನ್​ನಲ್ಲಿ ಧೋನಿ ತಮ್ಮ ನಾಯಕತ್ವವನ್ನು ಯುವ ಆಟಗಾರ ರುತುರಾಜ್ ಗಾಯಕ್ವಾಡ್​ಗೆ ಹಸ್ತಾಂತರಿಸಿದ ಬಳಿಕ ಮಾಹಿ ಫ್ಯಾನ್ಸ್​ಗೆ ಎಲ್ಲಿಲ್ಲದ ಬೇಸರವಿದೆ. ಆದರೂ ಸಹ ಅವರ ನಿರ್ಧಾರವನ್ನು ಮೆಚ್ಚಿ ತಂಡವನ್ನು ಪ್ರೋತ್ಸಾಹಿಸುತ್ತಿದ್ದಾರೆ. ಸದ್ಯ ಗಾಯಕ್ವಾಡ್ ಕ್ಯಾಪ್ಟನ್ಸಿ ನೋಡಿದ ಸಿಎಸ್​ಕೆ ಕೋಚ್ ಫ್ಲೆಮಿಂಗ್ ಮಾತನಾಡಿ, ಧೋನಿ ಮತ್ತು ರುತುರಾಜ್ ನಡುವೆ ಯಾವ ವ್ಯತ್ಯಾಸವೂ ಇಲ್ಲ ಎಂದಿದ್ದಾರೆ. ಇದು ಅಭಿಮಾನಿಗಳಿಗೆ ಕೊಂಚ ಗೊಂದಲ ಮೂಡಿಸಿದೆ.

ಧೋನಿಯಂತೆಯೇ ರುತುರಾಜ್ ಕೂಡ. ಏಕೆಂದರೆ, ಮಾಹಿ ಎಷ್ಟು ಕೂಲ್ ಆಗಿರುತ್ತಾರೋ ಅಷ್ಟೇ ತಾಳ್ಮೆಯಿಂದ ಗಾಯಕ್ವಾಡ್ ಸಹ ಇದ್ದಾರೆ. ಅದೇ ಬಟ್ಟೆಯಿಂದ ಹರಿದ ತುಂಡು ಇವರಾಗಿದ್ದಾರೆ. ಹಾಗಾಗಿ ಕ್ಯಾಪ್ಟನ್ ಕೂಲ್​ನಂತೆ ರುತುರಾಜ್ ಕೂಡ ತಮ್ಮ ನಾಯಕತ್ವವನ್ನು ಜವಾಬ್ದಾರಿಯುತವಾಗಿ ಕೊಂಡೊಯ್ಯುತ್ತಿದ್ದಾರೆ ಎಂದು ಫ್ಲೆಮಿಂಗ್ ಅಭಿಪ್ರಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net