

IPL 2025: ಪ್ರಸಕ್ತ ಭಾರತದಲ್ಲಿ ನಡೆಯುತ್ತಿರುವ ಐಪಿಎಲ್ 18ನೇ ಆವೃತ್ತಿಯಲ್ಲಿ 10 ತಂಡಗಳು ಉತ್ತಮ ಪೈಪೋಟಿ ನೀಡುತ್ತಿವೆ. ಕಳೆದ ವರ್ಷಗಳಲ್ಲಿ ಚಾಂಪಿಯನ್ಸ್ ಆಗಿ ಮೆರೆದ ಫ್ರಾಂಚೈಸಿಗಳೇ ಈ ವರ್ಷ ಅತ್ಯಂತ ಕಳಪೆ ಪ್ರದರ್ಶನ ನೀಡಿ, ಅಂಕಪಟ್ಟಿಯಲ್ಲಿ ಕೆಳ ಸ್ಥಾನದಲ್ಲಿವೆ. ಇದು ಕ್ರಿಕೆಟ್ ಪ್ರಿಯರನ್ನು ಅಚ್ಚರಿಗೆ ದೂಡಿದೆ. ಐಪಿಎಲ್‌ನಲ್ಲಿ ಅತ್ಯಂತ ದುಬಾರಿ ಮೊತ್ತದ ಸಂಭಾವನೆ ಪಡೆಯುವುದು ಕೇವಲ ಸ್ಟಾರ್ ಆಟಗಾರರು ಮಾತ್ರವಲ್ಲ. ಅವರ ಆಟದ ವೈಖರಿ, ಮೈದಾನದಲ್ಲಿ ಮಾಡುವ ತಪ್ಪುಗಳನ್ನು ಎತ್ತಿ ಹಿಡಿಯುವ ಕಮೆಂಟೇಟರ್ಸ್ಗಳಿಗೂ ದುಬಾರಿ ಮೊತ್ತದ ಸಂಬಳವನ್ನು ನೀಡಲಾಗುತ್ತಿದೆ. ಅಸಲಿಗೆ ಯಾರು ಈ ಪಟ್ಟಿಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ತಿಳಿದರೆ ನಿಮ್ಮ ಹುಬ್ಬೇರೋದು ಖಚಿತ.
ಐಪಿಎಲ್‌ನಲ್ಲಿ ಕೇವಲ ಬೌಂಡರಿ ಮತ್ತು ಸಿಕ್ಸರ್‌ಗಳು ಮಾತ್ರ ಗಮನ ಸೆಳೆಯಲು ಸಾಧ್ಯವಿಲ್ಲ. ಆಟಗಾರರು ಆಡುವ ರೀತಿ, ಬಾರಿಸುವ ಸಿಕ್ಸರ್, ಬೌಂಡರಿಗಳ ವಿಶ್ಲೇಷಣೆ ನೋಡುಗರನ್ನು ಇನ್ನೂ ಹೆಚ್ಚು ಹೊತ್ತು ಕುಳಿತು ಪಂದ್ಯ ವೀಕ್ಷಿಸುವಂತೆ ಮಾಡುತ್ತದೆ. ಕಮೆಂಟರಿ ಮಾಡುವವರು ತಮ್ಮ ಅದ್ಭುತ ಧ್ವನಿಯ ಮೂಲಕ ಆಟದ ಪರಿಯನ್ನು ಎಳೆ ಎಳೆಯಾಗಿ ವಿವರಿಸುವುದು ಕ್ರಿಕೆಟ್ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ವೀಕ್ಷಕರಿಗೆ ತಿಳಿಸಿಕೊಟ್ಟಂತಾಗುತ್ತದೆ. ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ನ ಅನೇಕ ದಿಗ್ಗಜ ಕ್ರಿಕೆಟಿಗರು ಐಪಿಎಲ್‌ನಲ್ಲಿ ಉತ್ತಮ ಕಾಮೆಂಟರಿ ಮಾಡುತ್ತಿದ್ದಾರೆ. ಇವರಲ್ಲಿ ಬಹುತೇಕರನ್ನು ನಾವೆಲ್ಲರೂ ಗಮನಿಸಿದ್ದೇವೆ.
ಟೀಮ್ ಇಂಡಿಯಾ ಹಿರಿಯ ಕ್ರಿಕೆಟಿಗರಾದ ಸುನಿಲ್ ಗವಾಸ್ಕರ್, ಅನಿಲ್ ಕುಂಬ್ಳೆ, ರವಿಶಾಸ್ತ್ರಿ, ಆಕಾಶ್ ಚೋಪ್ರಾ, ಹರ್ಷ ಭೋಗ್ಲೆ (ಪತ್ರಕರ್ತರು), ಇಯಾನ್ ಬಿಷಪ್ ಸೇರಿದಂತೆ ಕೆಲವರು ಅತಿ ಹೆಚ್ಚು ಸಂಭಾವನೆ ಪಡೆಯುವ ಕಾಮೆಂಟರಿ ಮಾಡುವವರಲ್ಲಿ ಸೇರಿದ್ದಾರೆ. ಟಾಪ್ 10 ಕಮೆಂಟೇಟರ್ಸ್ಗಳ ಪೈಕಿ ಸುನಿಲ್ ಗವಾಸ್ಕರ್ ಮೊದಲೇ ಸ್ಥಾನದಲ್ಲಿದ್ದು, ಅತಿ ಹೆಚ್ಚು ಸಂಭಾವನೆ ಪಡೆಯುವ ಕಮೆಂಟೇಟರ್ ಆಗಿ ಹೊರಹೊಮ್ಮಿದ್ದಾರೆ. ಇದು ಕಳೆದ ವರ್ಷ ಐಪಿಎಲ್‌ನಲ್ಲಿ ಪಡೆದ ಸಂಭಾವನೆ ಮೊತ್ತ. ಪ್ರಸಕ್ತ ವರ್ಷದ ವರದಿ ಇನ್ನೂ ಲಭ್ಯವಾಗಿಲ್ಲ ಎಂಬುದು ಗಮನಾರ್ಹ.
1. ಸುನಿಲ್ ಗವಾಸ್ಕರ್ (ಭಾರತ) - ಇಂಗ್ಲಿಷ್ - 4.17 ಕೋಟಿ ರೂ.
2. ಮ್ಯಾಥ್ಯೂ ಹೇಡನ್ (ಆಸ್ಟ್ರೇಲಿಯಾ) - ಇಂಗ್ಲಿಷ್ - 4.17 ಕೋಟಿ ರೂ.
3. ಕೆವಿನ್ ಪೀಟರ್ಸನ್ (ಇಂಗ್ಲೆಂಡ್) - ಇಂಗ್ಲಿಷ್ - 4.17 ಕೋಟಿ ರೂ.
4. ಇಯಾನ್ ಬಿಷಪ್ (ವೆಸ್ಟ್ ಇಂಡೀಸ್) - ಇಂಗ್ಲಿಷ್ - 4.17 ಕೋಟಿ ರೂ.
5. ಹರ್ಷ ಭೋಗ್ಲೆ (ಭಾರತ) - ಇಂಗ್ಲಿಷ್ - 4.1 ಕೋಟಿ ರೂ.
6. ರವಿಶಾಸ್ತ್ರಿ (ಭಾರತ) - ಇಂಗ್ಲಿಷ್ - 4 ಕೋಟಿ ರೂ.
7. ಆಕಾಶ್ ಚೋಪ್ರಾ (ಭಾರತ) - ಹಿಂದಿ - 2.92 ಕೋಟಿ ರೂ.
8. ಸಂಜಯ್ ಮಂಜ್ರೇಕರ್ (ಭಾರತ) - ಹಿಂದಿ- 2.8 ಕೋಟಿ ರೂ.
9. ಸುರೇಶ್ ರೈನಾ (ಭಾರತ) - ಹಿಂದಿ- 2.5 ಕೋಟಿ ರೂ.
10. ಹರ್ಭಜನ್ ಸಿಂಗ್ (ಭಾರತ) - ಹಿಂದಿ- 1.5 ಕೋಟಿ ರೂ.
11. ಜತಿನ್ ಸಪ್ರು (ಭಾರತ) - ಹಿಂದಿ- ಪ್ರತಿ ಪಂದ್ಯಕ್ಕೆ 1.5 ಲಕ್ಷ ರೂ.