

IPL 2025: ಭಾರತ-ಪಾಕಿಸ್ತಾನ ಉದ್ವಿಗ್ನತೆ ಹಿನ್ನೆಲೆ ಒಂದು ವಾರದ ಸ್ಥಗಿತಗೊಂಡಿದ್ದ ಇಂಡಿಯನ್ ಪ್ರಿಮಿಯರ್ ಲೀಗ್ 2025(IPL) ಇದೇ ಮೇ.16 ರಂದು ಪುನಾರಂಭಗೊಳ್ಳಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ತಿಳಿಸಿದೆ ಎಂದು ಇಂಡಿಯಾ ಟುಡೇ ಭಾನುವಾರ ವರದಿ ಮಾಡಿದೆ.
ಐಪಿಎಲ್‌ನ ಉಳಿದ ಪಂದ್ಯಗಳು ಬೇರೆ ಬೇರೆ ಸ್ಥಳಗಳಲ್ಲಿ ನಡೆಯಲಿವೆ - ಹೆಚ್ಚಾಗಿ ನಾಲ್ಕು ಪಂದ್ಯಗಳು ನಡೆಯಲಿವೆ. ಟೂರ್ನಮೆಂಟ್ ಲಕ್ನೋ ಸೂಪರ್ ಜೈಂಟ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯದೊಂದಿಗೆ ಪ್ರಾರಂಭವಾಗಲಿದೆ. ಫೈನಲ್ ಮೇ.30 ಅಥವಾ ಜೂನ್ 1 ರಂದು ನಡೆಯಲಿದೆ ಎಂದು ವರದಿ ಉಲ್ಲೇಖಿಸಿದೆ.
ಕ್ವಾಲಿಫೈಯರ್ 1 ಮತ್ತು ಎಲಿಮಿನೇಟರ್ ಪಂದ್ಯಗಳನ್ನು ಹೈದರಾಬಾದ್ನಲ್ಲಿ ಆಯೋಜಿಸುವ ಸಾಧ್ಯತೆಯಿದೆ. ಕ್ವಾಲಿಫೈಯರ್ 2 ಮತ್ತು ಮೇ.30 ಅಥವಾ ಜೂನ್ 1 ರಂದು ನಡೆಯುವ ಫೈನಲ್ ಪಂದ್ಯವನ್ನು ಕೋಲ್ಕತ್ತಾದಲ್ಲಿ ಆಯೋಜಿಸುವ ಸಾಧ್ಯತೆಯಿದೆ ಬಿಸಿಸಿಐ ಅಧಿಕಾರಿಯೊಬ್ಬರು ಎಂದು ತಿಳಿಸಿದ್ದಾರೆ.
ಪಂದ್ಯಗಳ ಮೇಲೆ ಮಳೆ ಪರಿಣಾಮ ಬೀರುವ ನಿರೀಕ್ಷೆಯಿದ್ದರೆ, ಫೈನಲ್ ಪಂದ್ಯವನ್ನು ಅಹಮದಾಬಾದ್‌ಗೆ ಸ್ಥಳಾಂತರಿಸಲಾಗುತ್ತದೆ. ಬಿಸಿಸಿಐ ಶೀಘ್ರದಲ್ಲೇ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸುವ ಸಾಧ್ಯತೆಯಿದೆ.(ಏಜೆನ್ಸೀಸ್)