

ಕೋಲ್ಕತ: ಅಸ್ಥಿರ ನಿರ್ವಹಣೆಯೊಂದಿಗೆ ಐಪಿಎಲ್ 18ನೇ ಆವೃತ್ತಿಯ ಅಂಕಪಟ್ಟಿಯಲ್ಲಿ ನೆಲೆಸಿರುವ ತಂಡಗಳಾದ ಹಾಲಿ ಚಾಂಪಿಯನ್ ಕೋಲ್ಕತ ನೈಟ್ರೈಡರ್ಸ್ ಮತ್ತು ಲಖನೌ ಸೂಪರ್ಜೈಂಟ್ಸ್ ತಂಡಗಳು ಮಂಗಳವಾರ ಮುಖಾಮುಖಿ ಆಗಲಿವೆ. ಈಡನ್ ಗಾರ್ಡನ್ಸ್ನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಉಭಯ ತಂಡಗಳು ಗೆಲುವಿನ ಲಯ ಕಾಯ್ದುಕೊಳ್ಳಲು ಹೋರಾಡಲಿವೆ.
ಕೆಕೆಆರ್, ಲಖನೌ ತಂಡಗಳು ಟೂರ್ನಿಯಲ್ಲಿ ಇದುವರೆಗೆ ಆಡಿರುವ 4 ಪಂದ್ಯಗಳಲ್ಲಿ ಒಂದೇ ರೀತಿಯ ಲಿತಾಂಶ ಕಂಡಿವೆ. ಅಂದರೆ ತಲಾ 2ರಲ್ಲಿ ಗೆದ್ದು, ತಲಾ 2ರಲ್ಲಿ ಸೋತಿವೆ. ಸೋಲಿನೊಂದಿಗೆ ಟೂರ್ನಿ ಆರಂಭಿಸಿದ್ದ ಉಭಯ ತಂಡಗಳು ಕೊನೇ ಪಂದ್ಯದಲ್ಲಿ ಗೆದ್ದ ವಿಶ್ವಾಸದಲ್ಲಿವೆ. ಕೆಕೆಆರ್ ಕಳೆದ ಪಂದ್ಯದಲ್ಲಿ ಈಡನ್ನಲ್ಲೇ ಸನ್ರೈಸರ್ಸ್ ಎದುರು 80 ರನ್ಗಳ ಭಾರಿ ಅಂತರದಿಂದ ಗೆದ್ದು ಬೀಗಿದ್ದರೆ, ಎಲ್ಎಸ್ಜಿ ತಂಡ ಮುಂಬೈ ಇಂಡಿಯನ್ಸ್ ಎದುರು 12 ರನ್ಗಳಿಂದ ರೋಚಕ ಗೆಲುವು ಸಾಧಿಸಿತ್ತು.
ಕಳೆದ ಭಾನುವಾರವೇ ನಡೆಯಬೇಕಾಗಿದ್ದ ಈ ಪಂದ್ಯ, ಭದ್ರತಾ ಕಾರಣಗಳಿಂದಾಗಿ ಮುಂದೂಡಲ್ಪಟ್ಟಿತ್ತು. ರಾಮನವಮಿ ಹಬ್ಬದ ಹಿನ್ನೆಲೆಯಲ್ಲಿ ಕೋಲ್ಕತ ಪೊಲೀಸರು ಭಾನುವಾರ ನಿಗದಿಯಾಗಿದ್ದ ಪಂದ್ಯಕ್ಕೆ ಸೂಕ್ತ ಭದ್ರತೆ ಒದಗಿಸಲು ಅಸಹಾಯಕತೆ ವ್ಯಕ್ತಪಡಿಸಿದ್ದರು. ಹೀಗಾಗಿ ಬಿಸಿಸಿಐ ಪಂದ್ಯದ ಸ್ಥಳ ಬದಲಾವಣೆಯ ಬದಲಾಗಿ 2 ದಿನಗಳ ಮಟ್ಟಿಗೆ ಮುಂದೂಡಿತ್ತು.
ಸ್ಪಿನ್ನರ್ಸ್ ಮುಖಾಮುಖಿ ಕುತೂಹಲ
ಕೆಕೆಆರ್ ತಂಡದ ಅನುಭವಿ ಸ್ಪಿನ್ನರ್ ಸುನೀಲ್ ನಾರಾಯಣ್ ಮತ್ತು ಅವರಂತೆಯೇ ಬೌಲಿಂಗ್ ಶೈಲಿ ಹೊಂದಿರುವ ದೆಹಲಿಯ ಯುವ ಸ್ಪಿನ್ನರ್ ದಿಗ್ವೇಶ್ ರಾಥಿ ಮೊದಲ ಬಾರಿ ಒಂದೇ ಪಂದ್ಯದಲ್ಲಿ ಆಡಲಿದ್ದಾರೆ. ನಾರಾಯಣ್ ಅವರನ್ನೇ ಆದರ್ಶವಾಗಿಟ್ಟುಕೊಂಡು ಬೌಲಿಂಗ್ ಮಾಡುತ್ತ ಯಶಸ್ಸು ಕಂಡಿರುವ ದಿಗ್ವೇಶ್ ರಾಥಿ ಇದೀಗ ತನ್ನ ನೆಚ್ಚಿನ ತಾರೆಯ ವಿರುದ್ಧವೂ ಯಶಸ್ಸು ಸಾಧಿಸಿ ಗಮನಸೆಳೆಯುವ ನಿರೀೆಯಲ್ಲಿದ್ದಾರೆ. ಪಂದ್ಯಕ್ಕೆ ಪೂರ್ವಭಾವಿಯಾಗಿ ನಾರಾಯಣ್ರನ್ನು ಭೇಟಿಯಾಗಿ ರಾಥಿ ಸಂಭ್ರಮಿಸಿದ್ದಾರೆ. ನೋಟ್ಬುಕ್ ಸಂಭ್ರಮಾಚರಣೆಯಿಂದ ದಂಡ ಶಿೆಗೆ ಗುರಿಯಾಗುತ್ತಿರುವ ನಡುವೆ ರಾಥಿ, ಕಳೆದ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿ ಗಮನಸೆಳೆದಿದ್ದಾರೆ.
ವಿಶ್ವಾಸದಲ್ಲಿ ಕೆಕೆಆರ್
ಸನ್ರೈಸರ್ಸ್ ವಿರುದ್ಧದ ಕಳೆದ ಪಂದ್ಯದಲ್ಲಿ ಕೆಕೆಆರ್ ಸರ್ವಾಂಗೀಣ ನಿರ್ವಹಣೆ ತೋರಿ ಆತ್ಮವಿಶ್ವಾಸ ವೃದ್ಧಿಸಿಕೊಂಡಿದೆ. ತಂಡದ ದುಬಾರಿ ಆಟಗಾರ ವೆಂಕಟೇಶ್ ಅಯ್ಯರ್ ಬ್ಯಾಟಿಂಗ್ ಲಯ ಕಂಡುಕೊಂಡಿದ್ದರೆ, ರಿಂಕು ಸಿಂಗ್, ನಾಯಕ ಅಜಿಂಕ್ಯ ರಹಾನೆ, ಅಂಗಕೃಷ್ ರುವಂಶಿ ಉಪಯುಕ್ತ ಕೊಡುಗೆ ನೀಡುತ್ತಿದ್ದಾರೆ. ಆರಂಭಿಕರಾಗಿ ಕ್ವಿಂಟನ್ ಡಿಕಾಕ್&ಸುನೀಲ್ ನಾರಾಯಣ್ ಇನ್ನಷ್ಟು ಸ್ಥಿರ ನಿರ್ವಹಣೆ ತೋರಬೇಕಾಗಿದೆ. ಈ ಬಾರಿ ನಾರಾಯಣ್ಗೆ ಹಿಂಬಡ್ತಿ ನೀಡಿ ರುವಂಶಿ ಅವರನ್ನು ಆರಂಭಿಕರಾಗಿ ಆಡಿಸುವ ಸಾಧ್ಯತೆಯೂ ಇದೆ. ಇನ್ನು ಬೌಲಿಂಗ್ನಲ್ಲಿ ಯುವ ವೇಗಿಗಳಾದ ವೈಭವ್ ಅರೋರ, ಹರ್ಷಿತ್ ರಾಣಾ ಜತೆಗೆ ಸ್ಪಿನ್ನರ್ ವರುಣ್ ಚಕ್ರವರ್ತಿ ನಿರೀತ ನಿರ್ವಹಣೆಯನ್ನೇ ತೋರಿಸುತ್ತಿದ್ದಾರೆ. ಜತೆಗೆ ಅನುಭವಿಗಳಾದ ಆಂಡ್ರೆ ರಸೆಲ್ ಮತ್ತು ಸುನೀಲ್ ನಾರಾಯಣ್ ಉತ್ತಮ ಲಯದಲ್ಲಿದ್ದಾರೆ.
ಪಂತ್ ಬ್ಯಾಟಿಂಗ್ ಫಾರ್ಮ್ ಚಿಂತೆ
ಆರಂಭಿಕರಾಗಿ ಮಿಚೆಲ್ ಮಾರ್ಷ್ ಆಡಿದ 4 ಪಂದ್ಯಗಳಲ್ಲಿ 3 ಅರ್ಧಶತಕ ಸಿಡಿಸಿದ್ದರೆ, ನಿಕೋಲಸ್ ಪೂರನ್, ಏಡನ್ ಮಾರ್ಕ್ರಮ್, ಆಯುಷ್ ಬಡೋನಿ, ಡೇವಿಡ್ ಮಿಲ್ಲರ್ ಕೂಡ ಉತ್ತಮ ಕೊಡುಗೆ ನೀಡುತ್ತಿದ್ದಾರೆ. ಆದರೆ ನಾಯಕ ರಿಷಭ್ ಪಂತ್ ಬ್ಯಾಟಿಂಗ್ ಫಾರ್ಮ್ ಒಂದೇ ಲಖನೌಗೆ ಪ್ರಮುಖ ಚಿಂತೆ ಎನಿಸಿದೆ. 27 ಕೋಟಿ ರೂ. ಸಂಭಾವನೆಯೊಂದಿಗೆ ಟೂರ್ನಿಯ ದುಬಾರಿ ಆಟಗಾರ ಎನಿಸಿರುವ ಪಂತ್, ಟೂರ್ನಿಯ ಮೊದಲ 4 ಪಂದ್ಯಗಳಲ್ಲಿ ಕೇವಲ 19 ರನ್ (0, 15, 2, 2) ಗಳಿಸಿದ್ದಾರೆ. ಪಂತ್ ಶ್ರೀ ಲಯಕ್ಕೆ ಮರಳಿದರೆ ಲಖನೌ ಬ್ಯಾಟಿಂಗ್ ವಿಭಾಗ ಇನ್ನಷ್ಟು ಬಲಿಷ್ಠವಾಗಲಿದೆ. ಬೌಲಿಂಗ್ನಲ್ಲಿ ಭಾರತೀಯರನ್ನೇ ನೆಚ್ಚಿಕೊಂಡಿರುವ ಲಖನೌಗೆ ಶಾರ್ದೂಲ್, ದಿಗ್ವೇಶ್, ಬಿಷ್ಣೋಯಿ, ಆವೇಶ್ ಖಾನ್, ಆಕಾಶ್ದೀಪ್ ಬಲ ತುಂಬಿದ್ದಾರೆ.
ಮುಖಾಮುಖಿ: 5
ಕೆಕೆಆರ್: 2
ಲಖನೌ: 3
ಆರಂಭ: ಮಧ್ಯಾಹ್ನ 3.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್ಸ್ಟಾರ್.