

Abhishek Sharma : ನಿನ್ನೆ (ಏ. 12) ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ಆರಂಭಿಕ ಆಟಗಾರ ಅಭಿಷೇಕ್ ಶರ್ಮ ವೀರೋಚಿತ ಪ್ರದರ್ಶನ ನೀಡಿದರು. ಅಕ್ಷರಶಃ ರನ್ಗಳ ಸುನಾಮಿಯನ್ನೇ ಸೃಷ್ಟಿಸಿದರು. ತಮ್ಮ ಬ್ಯಾಟಿಂಗ್ನಲ್ಲಿ ಅಬ್ಬರಿಸಿ ಬಿಬ್ಬಿರಿದ ಅಭಿಶೇಕ್, ಸಿಕ್ಸರ್ ಮತ್ತು ಬೌಂಡರಿಗಳ ಸುರಿಮಳೆಗೈದರು. ಶತಕ ಸಿಡಿಸುವ ಮೂಲಕ ಸಂಭ್ರಮಾಚರಣೆ ಮಾಡಿದರು.
ಅಭಿಷೇಕ್ ಅವರು ಆರಂಭದಿಂದಲೇ ಭರ್ಜರಿ ಬ್ಯಾಟಿಂಗ್ ಮಾಡಿದರು. ಪಂಜಾಬ್ ಬೌಲರ್ಗಳ ಬೆವರಿಳಿಸಿದರು. ಬೌಲರ್ ಯಾರೇ ಆಗಿರಲಿ, ಯಾವುದೇ ರೀತಿಯ ಚೆಂಡನ್ನು ಎಸೆಯಲಿ, ಫಲಿತಾಂಶ ಮಾತ್ರ ಬೌಂಡರಿಯಾಗಿತ್ತು. ಅಭಿಷೇಕ್ ಕೇವಲ 40 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರ್ಣಗೊಳಿಸಿದರು. ಅವರ ಇನ್ನಿಂಗ್ಸ್ನಲ್ಲಿ 10 ಸಿಕ್ಸರ್ಗಳು ಮತ್ತು 14 ಬೌಂಡರಿಗಳು ಬಂದವು. ಈ ಐಪಿಎಲ್ನಲ್ಲಿ ತಮ್ಮ ಮೊದಲ ಶತಕವನ್ನು ಗಳಿಸಿದ ನಂತರ, ಅಭಿಷೇಕ್ ಶರ್ಮ ಇಡೀ ಮೈದಾನಕ್ಕೆ ಒಂದು ಕಾಗದವನ್ನು ತೋರಿಸಿದರು. ಆ ಕಾಗದದಲ್ಲಿ, "ಇದು ಆರೆಂಜ್ ಆರ್ಮಿಗಾಗಿ" ಎಂದು ಬರೆಯಲಾಗಿತ್ತು.
ಇನ್ನು ಪಂದ್ಯದ ವಿಚಾರಕ್ಕೆ ಬಂದರೆ, ಇಲ್ಲಿನ ರಾಜೀವ್ ಗಾಂಧಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂಜಾಬ್ ತಂಡದ ವಿರುದ್ಧ ನಿನ್ನೆ (ಏ.12) ನಡೆದ ಪ್ರಸಕ್ತ ಟೂರ್ನಿಯ 27ನೇ ಐಪಿಎಲ್ ಪಂದ್ಯದಲ್ಲಿ ಸನ್ ರೈಸಸ್ ಹೈದರಾಬಾದ್ 8 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಂಜಾಬ್ ಇಲೆವನ್ ಕಿಂಗ್ಸ್ ನಿಗದಿತ 20 ಒವರ್ನಲ್ಲಿ 6 ವಿಕೆಟ್ ನಷ್ಟಕ್ಕೆ 254 ಬೃಹತ್ ರನ್ ಪೇರಿಸಿತು. ನಾಯಕ ಶ್ರೇಯಸ್ ಆಯ್ಯರ್ 36 ಎಸೆತಗಳಲ್ಲಿ ಆರು ಸಿಕ್ಸರ್ ಹಾಗೂ 6 ಬೌಂಡರಿ ಬಾರಿಸುವ ಮೂಲಕ 82 ರನ್ ಗಳಿಸಿ ಅಬ್ಬರಿಸಿದರು.
245 ಬೃಹತ್ ರನ್ಗಳ ಗುರಿ ಬೆನ್ನಟ್ಟಿದ SRH ತಂಡ, ಓಪನರ್ಗಳಾದ ಟ್ರಾವಿಸ್ ಹೆಡ್ 66 ರನ್(37 ಎಸೆತ, 9 ಫೋರ್, 3 ಸಿಕ್ಸ್)ಗೆ ಔಟ್ ಆದರು. ಅಬ್ಬರದ ಬ್ಯಾಟಿಂಗ್ ಮುಂದುವರೆಸಿದ ಅಭಿಷೇಕ್ ಶರ್ಮ, 40 ಎಸೆತಗಳಲ್ಲಿ ಶತಕ ಪೂರೈಸಿ ಸಂಭ್ರಮಿಸಿದರು. 54 ಎಸೆತಗಳಲ್ಲಿ 141 ರನ್ಗಳಿಸಿ ಔಟ್ ಆದ ಶರ್ಮ ಗೇಮ್ ಚೇಂಜರ್ ಆದರು. (ಏಜೆನ್ಸೀಸ್)