IPL 2024: ಗುಜರಾತ್ ವಿರುದ್ಧ ಟಾಸ್ ಗೆದ್ದ ಆರ್​ಸಿಬಿ ಬೌಲಿಂಗ್​ ಆಯ್ಕೆ!

rcb
Published on

ಬೆಂಗಳೂರು: ಐಪಿಎಲ್-17ರ 52ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ಈ ಸೀಸನ್​ನಲ್ಲಿ ಎರಡನೇ ಬಾರಿಗೆ ಮುಖಾಮುಖಿಯಾಗಿವೆ.

ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದ ಟಾಸ್ ಗೆದ್ದ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಟಾಸ್ ಜೊತೆಗೆ ಎರಡು ತಂಡಗಳ ಆಡುವ ಹನ್ನೊಂದರ ಬಳಗವೂ ಹೊರಬಿದ್ದಿದೆ.

ಕಳೆದ ಭಾನುವಾರವಷ್ಟೇ ಉಭಯ ತಂಡಗಳ ನಡುವೆ ಅಹಮದಾಬಾದ್‌ನಲ್ಲಿ ನಡೆದ, ಪಂದ್ಯದಲ್ಲಿ ಗೆದ್ದ ವಿಶ್ವಾಸದಲ್ಲಿರುವ ಫಾಫ್ ಡು ಪ್ಲೆಸಿಸ್ ಪಡೆ ಅದೇ ಫಲಿತಾಂಶ ಪುನರಾವರ್ತಿಸುವ ಹುರುಪಿನಲ್ಲಿದ್ದರೆ, ಪ್ರವಾಸಿ ಗುಜರಾತ್ ಟೈಟಾನ್ಸ್ ತಂಡ ಸೇಡು ತೀರಿಸಿಕೊಳ್ಳುವ ಹಂಬಲದಲ್ಲಿದೆ.

ಆರಂಭಿಕ 8 ಪಂದ್ಯಗಳಲ್ಲಿ 7ರಲ್ಲಿ ಸೋತು ಪ್ಲೇಆಫ್ ಆಸೆಯನ್ನು ಬಹುತೇಕ ಕೈಚೆಲ್ಲಿರುವ ಆರ್‌ಸಿಬಿ ಕಳೆದೆರಡು ಪಂದ್ಯಗಳಲ್ಲಿ ಗೆದ್ದು ಟೂರ್ನಿಯಿಂದ ತನ್ನ ಅಧಿಕೃತ ನಿರ್ಗಮನವನ್ನು ಇನ್ನೂ ಕೆಲ ದಿನಗಳ ಕಾಲ ಮುಂದೂಡಿದಂತಿದೆ.

ಇದೀಗ ಗೆಲುವಿನ ಹ್ಯಾಟ್ರಿಕ್ ಸಾಧಿಸುವುದು ಆರ್‌ಸಿಬಿ ಭಲವಾಗಿದೆ. ಈ ಬಾರಿ ತವರಿನ ಅನುಕೂಲವನ್ನೂ ಹೊಂದಿದೆ. ಆದರೆ ತವರಿನಲ್ಲಿ ಆಡಿದ ಆರಂಭಿಕ 4 ಪಂದ್ಯಗಳಲ್ಲಿ ಪ್ಲೆಸಿಸ್ ಪಡೆ 1ರಲ್ಲಿ ಮಾತ್ರ ಗೆದ್ದಿತ್ತು. ಗುಜರಾತ್ ಟೈಟಾನ್ಸ್ ಆಡಿದ 10 ಪಂದ್ಯಗಳಲ್ಲಿ 4 ಜಯ, 6 ಸೋಲಿನೊಂದಿಗೆ ಪ್ಲೇಆಫ್ ರೇಸ್‌ನಲ್ಲಿ ತೂಗುಯ್ಯಾಲೆಯಲ್ಲಿ ನಿಂತಿದೆ. ಬೌಲಿಂಗ್ ವಿಭಾಗದಲ್ಲಿ ರಶೀದ್ ಖಾನ್ ಸಹಿತ ಎಲ್ಲರ ನಿರ್ವಹಣೆ ನೀರಸವೆನಿಸಿರುವುದು ಹಿನ್ನಡೆ ತಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net