ಅಫ್ಘಾನಿಸ್ತಾನಕ್ಕೆ 2028ರ ಲಾಸ್​ ಏಂಜಲಿಸ್​ ಒಲಿಂಪಿಕ್ಸ್​ ಟಿಕೆಟ್​ ಡೌಟ್​

afghan web
Published on

ಲಂಡನ್​: ಅಫ್ಘಾನಿಸ್ತಾನ ತಂಡ ವಿಶ್ವಕಪ್​ನಲ್ಲಿ ತೋರಿದ ಅಮೋಘ ನಿರ್ವಹಣೆಯಿಂದ 2025ರ ಚಾಂಪಿಯನ್ಸ್​ ಟ್ರೋಫಿಗೆ ಮೊದಲ ಬಾರಿ ಅರ್ಹತೆ ಗಿಟ್ಟಿಸಿಕೊಂಡಿದೆ. ಆದರೆ 2028ರ ಲಾಸ್​ ಏಂಜಲಿಸ್​ ಒಲಿಂಪಿಕ್ಸ್​ಗೆ ಈಗಾಗಲೆ ಟಿ20 ಕ್ರಿಕೆಟ್​ ಸೇರ್ಪಡೆಗೊಂಡಿರುವ ನಡುವೆ, ಅಫ್ಘಾನಿಸ್ತಾನಕ್ಕೆ ಅದರಲ್ಲಿ ಸ್ಪರ್ಧಿಸುವ ಅವಕಾಶ ಲಭಿಸುವುದು ಅನುಮಾನವೆನಿಸಿದೆ.

ಆಫ್ಘನ್​​ ತಾಲಿಬಾನ್​ ಆಡಳಿತಕ್ಕೆ ಒಳಪಟ್ಟ ಬಳಿಕ ಮಹಿಳೆಯರಿಗೆ ಕ್ರೀಡೆಯಲ್ಲಿ ತೊಡಗಿಕೊಳ್ಳಲು ನಿರ್ಬಂಧ ಹೇರಲಾಗಿದೆ. ಇದು ಅಂತಾರಾಷ್ಟ್ರೀಯ ಒಲಿಂಪಿಕ್ಸ್​ ಸಮಿತಿಯ (ಐಒಸಿ) ಲಿಂಗ ಸಮಾನತೆಯ ಧ್ಯೇಯದ ಉಲ್ಲಂನೆಯಾಗಿದೆ. ಆದರೆ ಈ ಸಂಬಂಧ ಆಫ್ಘನ್​ಗೆ ಒಲಿಂಪಿಕ್ಸ್​ನಿಂದ ನಿಷೇಧ ಹೇರುವಲ್ಲಿ ಐಸಿಸಿಗೆ ಯಾವುದೇ ಪಾತ್ರ ಇರುವುದಿಲ್ಲ. ಒಲಿಂಪಿಕ್ಸ್​ನಿಂದ ಅಫ್ಘಾನಿಸ್ತಾನವನ್ನು ದೂರವಿಡುವ ಬಗ್ಗೆ ಐಒಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಐಸಿಸಿ ಸಿಇಒ ಜೆಫ್​ ಅಲ್ಲಾರ್ಡೈಸ್​ ತಿಳಿಸಿದ್ದಾರೆ.

2028ಕ್ಕೆ ಮುನ್ನ 2024ರ ಪ್ಯಾರಿಸ್​ ಒಲಿಂಪಿಕ್ಸ್​ನಿಂದಲೂ ಅಫ್ಘಾನಿಸ್ತಾನಕ್ಕೆ ಐಒಸಿ ನಿಷೇಧ ಹೇರುವ ಸಾಧ್ಯತೆಗಳಿವೆ. ಮಹಿಳೆಯರನ್ನು ಕ್ರೀಡೆಯಿಂದ ರ್ನಿಬಂಧಿಸಿರುವುದನ್ನು ವಿರೋಧಿಸಿ ಆಸ್ಟ್ರೆಲಿಯಾವೂ ಸದ್ಯ ಆಫ್ಘನ್​ ವಿರುದ್ಧ ದ್ವಿಪಕ್ಷೀಯ ಸರಣಿ ಆಡುತ್ತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net