ಅವರೇನು ಇಂಟರ್ನೆಟ್​ ಪ್ರತಿಭೆ ಅಲ್ಲಾ, ನಮ್ಮ ಪಾಲಿನ ಸೂಪರ್​ಸ್ಟಾರ್​; ಆರ್​. ಅಶ್ವಿನ್​ ಹೀಗಂದಿದ್ದು ಯಾರ ಬಗ್ಗೆ ಗೊತ್ತಾ?

R Ashwin
Published on

ಚೆನ್ನೈ: ಇಲ್ಲಿನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಟೆಸ್ಟ್​ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯರು 280 ರನ್​ಗಳ ಭರ್ಜರಿ ಜಯ ಸಾಧಿಸಿದ್ದು, ಪ್ರವಾಸಿ ತಂಡವನ್ನು ಎಲ್ಲಾ ವಿಭಾಗಗಳಲ್ಲೂ ಬಗ್ಗು ಬಡಿಯುವಲ್ಲಿ ಯಶಸ್ವಿಯಾಗಿದೆ. ಟೀಮ್​ ಇಂಡಿಯಾದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆರ್. ಅಶ್ವಿನ್ ಹಾಗೂ ರಿಷಭ್​​ ಪಂತ್​​ ತಂಡದ ಪಾಲಿಗೆ ಸೂಪರ್​ಸ್ಟಾರ್​ಗಳಾಗಿದ್ದರು ಎಂದರೆ ತಪ್ಪಾಗಲಾರದು. ಸೆಪ್ಟೆಂಬರ್​ 27ರಿಂದ ಕಾನ್ಪುರದಲ್ಲಿ ಆರಂಭವಾಗಲಿದ್ದು, ಆಟಗಾರರು ಈಗಾಗಲೇ ತಯಾರಿ ಆರಂಭಿಸಿದ್ದಾರೆ.

ಭಾರತದ ಗೆಲುವಿನಲ್ಲಿ ಫೀಲ್ಡಿಂಗ್​ ಪ್ರಮುಖ ಪಾತ್ರ ವಹಿಸಿತ್ತು. ಆಟಗಾರರು ಚೆಂಡನ್ನು ರಕ್ಷಿಸಿದ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು, ಇದೀಗ ಪೋಸ್ಟ್​ಮ್ಯಾಚ್ ಪ್ರೆಸೆಂಟೇಷನ್​ನಲ್ಲಿ ಈ ಕುರಿತು ಆರ್​. ಅಶ್ವಿನ್​ ಮಾತನಾಡಿದ್ದು, ಫೀಲ್ಡಿಂಗ್​ ಕೋಚ್​ ಟಿ. ದಿಲೀಪ್​ ಅವರನ್ನು ಹಾಡಿ ಹೊಗಳಿದ್ದಾರೆ.

ಪೋಸ್ಟ್​ಮ್ಯಾಚ್​ ಪ್ರಸೆಂಟೇಷನ್​ನಲ್ಲಿ ಈ ಕುರಿತು ಮಾತನಾಡಿದ ಅಶ್ವಿನ್​, ಫೀಲ್ಡಿಂಗ್​ ಬಗ್ಗೆ ಮಾತನಾಡುವುದಾದರೆ ಮೊದಲಿಗೆ ನಾವು ದಿಲೀಪ್​ ಸರ್​ ಬಗ್ಗೆ ಮಾತನಾಡೋಣ. ವಾಸ್ತವವಾಗಿ ನಾವು ಮೊದಲಿಗೆ ಇಂಟರ್​ನೆಟ್​ನಲ್ಲಿ ಅವರಿಗಾಗಿ ಹುಡುಕಾಟ ನಡೆಸಿದೆವು. ಅವರು ಇಂಟರ್​ನೆಟ್​ನ ಅತ್ಯುತ್ತಮ ಪ್ರತಿಭೆಯಾಗಿ ಹೊರಹೊಮ್ಮಿದರು. ಆದರೆ, ಅವರು ಇಂಟರ್​ನೆಟ್​ ಪ್ರತಿಭೆಯಲ್ಲ ನಮ್ಮ ಸೆಲೆಬ್ರಿಟಿ ಫೀಲ್ಡಿಂಗ್​ ಕೋಚ್ ನಮ್ಮ ಪಾಲಿನ ಸೂಪರ್​ಸ್ಟಾರ್​​ ಎಂದು ಹೇಳಲು ನಾನು ಇಷ್ಟಪಡುತ್ತೇನೆ.

ಯುವ ಪ್ರತಿಭೆಗಳಾದಂತಹ ಯಶಸ್ವಿ ಜೈಸ್ವಾಲ್​ ಹಾಗೂ ಸರ್ಫರಾಜ್​ ಖಾನ್​ ಅವರನ್ನು ಕ್ಲೋಸ್​ ಇನ್​ ಫೀಲ್ಡರ್​ಗಳಾಗಿ ರೂಪಿಸುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದಾರೆ. ಬಾಂಗ್ಲಾ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ನಮ್ಮ ಆಟಗಾರರು ಹಿಡಿದ ಕ್ಲೋಸ್​ ಇನ್​ ಕ್ಯಾಚ್​ಗಳೇ ಇದಕ್ಕೆ ಜೀವಂತ ಉದಾಹರಣೆಯಾಗಿದ್ದು, ದಿಲೀಪ್​ ಅವರು ಈ ಇಬ್ಬರನ್ನು ತಯಾರು ಮಾಡಿದ ರೀತಿಯೇ ಇದಕ್ಕೆ ಉತ್ತಮ ನಿದರ್ಶನವಾಗಿದೆ ಎಂದು ಆರ್​. ಅಶ್ವಿನ್​ ಟೀಮ್​ ಇಂಡಿಯಾದ ಫೀಲ್ಡಿಂಗ್​ ಕೋಚ್​ಅನ್ನು ಹಾಡಿ ಹೊಗಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net