ಏಕದಿನ ವಿಶ್ವಕಪ್​ ಹೊಸ್ತಿಲಲ್ಲಿ ಪ್ರಮುಖ ತಂಡಗಳಿಗೆ ಕಾಡುತ್ತಿದೆ ಗಾಯದ ಕಳವಳ

injury web
Published on

ಬೆಂಗಳೂರು: ಬಹುನಿರೀತ ಏಕದಿನ ವಿಶ್ವಕಪ್​ ಟೂರ್ನಿಗೆ ಇನ್ನು ಎರಡೂವರೆ ವಾರವಷ್ಟೇ ಬಾಕಿ ಉಳಿದಿದೆ. ಆದರೆ ಟೂರ್ನಿಯಲ್ಲಿ ಆಡುತ್ತಿರುವ ಹೆಚ್ಚಿನ ತಂಡಗಳಿಗೆ ಪ್ರಮುಖ ಆಟಗಾರರ ಗಾಯದ ಸಮಸ್ಯೆ ತಲೆನೋವು ತರಲಾರಂಭಿಸಿದೆ.

ಆಸ್ಟ್ರೆಲಿಯಾದ ಬ್ಯಾಟರ್​ ಟ್ರಾವಿಸ್​ ಹೆಡ್​ ದಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಎಡಗೈ ಮೂಳೆಮುರಿತಕ್ಕೀಡಾಗಿದ್ದು, ವಿಶ್ವಕಪ್​ಗೆ ಲಭ್ಯರಾಗುವುದು ಅನುಮಾನವೆನಿಸಿದೆ. ಇನ್ನು ಪ್ಯಾಟ್​ ಕಮ್ಮಿನ್ಸ್​, ಸ್ಟೀವನ್​ ಸ್ಮಿತ್​, ಮಿಚೆಲ್​ ಸ್ಟಾರ್ಕ್​, ಗ್ಲೆನ್​ ಮ್ಯಾಕ್ಸ್​ವೆಲ್​, ಕ್ಯಾಮರಾನ್​ ಗ್ರೀನ್​ ಮೊದಲೇ ಫಿಟ್ನೆಸ್​ ಸಮಸ್ಯೆ ಎದುರಿಸುತ್ತಿದ್ದಾರೆ. ನ್ಯೂಜಿಲೆಂಡ್​ ತಂಡದ ವೇಗಿ ಟಿಮ್​ ಸೌಥಿ ಇಂಗ್ಲೆಂಡ್​ ವಿರುದ್ಧದ ಸರಣಿಯಲ್ಲಿ ಬಲಗೈ ಹೆಬ್ಬೆರಳಿನ ಮೂಳೆ ಮುರಿತದಿಂದಾಗಿ ವಿಶ್ವಕಪ್​ನಿಂದ ಹೊರಬೀಳುವ ಭೀತಿಯಲ್ಲಿದ್ದಾರೆ. ಪಾಕಿಸ್ತಾನ ತಂಡದ ಯುವ ವೇಗಿ ನಸೀಮ್​ ಷಾ ಏಷ್ಯಾಕಪ್​ನಲ್ಲಿ ಭಾರತ ವಿರುದ್ಧದ ಪಂಧ್ಯದ ವೇಳೆ ಬಲಭುಜದ ಸ್ನಾಯು ನೋವು ಎದುರಿಸಿದ್ದು, ವಿಶ್ವಕಪ್​ ಆಡುವ ಅವಕಾಶದಿಂದ ವಂಚಿತರಾಗುವ ಸಾಧ್ಯತೆ ಕಾಣಿಸಿದೆ. ಪಾಕಿಸ್ತಾನದ ಇತರ ಆಟಗಾರರಾದ ಇಮಾಮ್​ ಉಲ್​ ಹಕ್​, ಹ್ಯಾರಿಸ್​ ರೌಫ್​, ಅಘಾ ಸಲ್ಮಾನ್​ ಕೂಡ ಏಷ್ಯಾಕಪ್​ ವೇಳೆ ಗಾಯಗೊಂಡಿದ್ದಾರೆ.

ಶ್ರೀಲಂಕಾ ತಂಡದ ಗಾಯಾಳುಗಳ ಪಟ್ಟಿಗೆ ಮಹೀಶ್​ ತೀಕ್ಷಣ ಹೊಸ ಸೇರ್ಪಡೆಯಾಗಿದ್ದಾರೆ. ಈ ಮುನ್ನ ಲಂಕಾದ ವನಿಂದು ಹಸರಂಗ, ದಿಲ್ಶನ್​ ಮಧುಶಂಕ, ದುಶ್ಮಂತ ಚಮೀರ ಗಾಯಗೊಂಡಿದ್ದರು. ಭಾರತ ತಂಡದಲ್ಲಿ ಶ್ರೇಯಸ್​ ಅಯ್ಯರ್​ ಮತ್ತೆ ಫಿಟ್ನೆಸ್​ ಸಮಸ್ಯೆ ಎದುರಿಸಿದ್ದರೆ, ಅಕ್ಷರ್​ ಪಟೇಲ್​ ಕೂಡ ಅದೇ ಚಿಂತೆ ಹುಟ್ಟುಹಾಕಿದ್ದಾರೆ. ದಣ ಆಫ್ರಿಕಾ ತಂಡದಲ್ಲಿ ನಾಯಕ ಟೆಂಬಾ ಬವುಮಾ, ಅನ್ರಿಚ್​ ನೋಕಿಯ ಮತ್ತು ಸಿಸಾಂಡ ಮಗಲ ಗಾಯದಿಂದ ಬಳಲುತ್ತಿದ್ದು, ಆಸೀಸ್​ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದಾರೆ. ಬಾಂಗ್ಲಾ ತಂಡದಲ್ಲಿ ತಮೀಮ್​ ಇಕ್ಬಾಲ್​, ನಜ್ಮುಲ್​ ಹೊಸೈನ್​ ಶಾಂಟೊ, ಇಬಾದತ್​ ಹುಸೇನ್​ ಗಾಯಾಳುಗಳಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net