ಐಸಿಸಿ ಮಾಸಿಕ ಪ್ರಶಸ್ತಿ ರೇಸ್​ನಲ್ಲಿ ಭಾರತದ ವರುಣ್​ ಚಕ್ರವರ್ತಿ, ಜಿ. ತ್ರಿಷಾ

web icc award
Published on

ದುಬೈ: ಟೀಮ್​ ಇಂಡಿಯಾದ ಮಿಸ್ಟರಿ ಸ್ಪಿನ್ನರ್​ ವರುಣ್​ ಚಕ್ರವರ್ತಿ ಐಸಿಸಿಯ ಜನವರಿ ತಿಂಗಳ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಮಹಿಳೆಯರ ವಿಭಾಗದಲ್ಲಿ 19 ವಯೋಮಿತಿ ಟಿ20 ವಿಶ್ವಕಪ್​ ವಿಜೇತ ಭಾರತ ತಂಡದ ಆಟಗಾರ್ತಿ ಗೊಂಗಡಿ ತ್ರಿಷಾ ರೇಸ್​ನಲ್ಲಿದ್ದಾರೆ.

ವರುಣ್​ ಚಕ್ರವರ್ತಿ ಕಳೆದ ತಿಂಗಳು ಇಂಗ್ಲೆಂಡ್​ ವಿರುದ್ಧದ ಟಿ20 ಸರಣಿಯಲ್ಲಿ 14 ವಿಕೆಟ್​ ಕಬಳಿಸಿ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ವೆಸ್ಟ್​ ಇಂಡೀಸ್​ ಸ್ಪಿನ್ನರ್​ ಜೊಮೆಲ್​ ವಾರಿಕನ್​ ಮತ್ತು ಪಾಕಿಸ್ತಾನದ ಸ್ಪಿನ್ನರ್​ ನೋಮನ್​ ಅಲಿ ಪ್ರಶಸ್ತಿ ರೇಸ್​ನಲ್ಲಿರುವ ಇನ್ನಿಬ್ಬರು ಆಟಗಾರರಾಗಿದ್ದಾರೆ. ವಾರಿಕನ್​ ಪಾಕ್​ ವಿರುದ್ಧದ ಟೆಸ್ಟ್​ ಸರಣಿಯಲ್ಲಿ 19 ವಿಕೆಟ್​ ಕಬಳಿಸಿ ಮಿಂಚಿದ್ದರೆ, ನೋಮನ್​ ಅಲಿ 16 ವಿಕೆಟ್​ ಗಳಿಸಿದ್ದರು.

ಮಹಿಳಾ ವಿಭಾಗದಲ್ಲಿ ತ್ರಿಷಾ, ವೆಸ್ಟ್​ ಇಂಡೀಸ್​ನ ಕರಿಶ್ಮಾ ರಾಮ್​ಹರಾಕ್​ ಮತ್ತು ಆಸ್ಟ್ರೆಲಿಯಾದ ಬೆತ್​ ಮೂನಿ ಜತೆ ಪೈಪೋಟಿ ನಡೆಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net