ಇಂಗ್ಲೆಂಡ್​, ಆಸೀಸ್​ ವಿರುದ್ಧ ಸರಣಿಗೆ ಭಾರತ ಮಹಿಳಾ ತಂಡ ಪ್ರಕಟ; ರಾಜ್ಯದ ಮೂವರಿಗೆ ಸ್ಥಾನ

womens web
Published on

ನವದೆಹಲಿ: ಮುಂಬರುವ ಪ್ರವಾಸಿ ಇಂಗ್ಲೆಂಡ್​ ವಿರುದ್ಧದ ಮಹಿಳೆಯರ ಟಿ20 ಮತ್ತು ಟೆಸ್ಟ್​ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ರಾಜ್ಯದ ಯುವ ಆಲ್ರೌಂಡರ್​ ಶ್ರೇಯಾಂಕ ಪಾಟೀಲ್​ ಟಿ20 ತಂಡ ಮತ್ತು ಎಡಗೈ ಬ್ಯಾಟರ್​ ಶುಭಾ ಸತೀಶ್​ ಹಾಗೂ ಅನುಭವಿ ಸ್ಪಿನ್ನರ್​ ರಾಜೇಶ್ವರಿ ಗಾಯಕ್ವಾಡ್​ ಟೆಸ್ಟ್​ ತಂಡದಲ್ಲಿ ಸ್ಥಾನ ಸಂಪಾದಿಸಿದ್ದಾರೆ.

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಡಿಸೆಂಬರ್​ 6, 9, 10ರಂದು 3 ಟಿ20 ಪಂದ್ಯಗಳು ನಡೆಯಲಿದ್ದರೆ, ನವಿ ಮುಂಬೈನ ಡಿವೈ ಪಾಟೀಲ್​ ಕ್ರೀಡಾಂಗಣದಲ್ಲಿ ಡಿಸೆಂಬರ್​ 14ರಿಂದ 17ರವರೆಗೆ ಏಕೈಕ ಟೆಸ್ಟ್​ ಪಂದ್ಯ ನಡೆಯಲಿದೆ. ಬಳಿಕ ಡಿಸೆಂಬರ್​ 21ರಿಂದ 24ರವರೆಗೆ ವಾಂಖೆಡೆ ಕ್ರೀಡಾಂಗಣದಲ್ಲಿ ಆಸ್ಟ್ರೆಲಿಯಾ ವಿರುದ್ಧ ಏಕೈಕ ಟೆಸ್ಟ್​ ಪಂದ್ಯದಲ್ಲೂ ಇದೇ ತಂಡ ಆಡಲಿದೆ.

ಟಿ20 ತಂಡ: ಹರ್ಮಾನ್​ಪ್ರೀತ್​ ಕೌರ್​ (ನಾಯಕ), ಸ್ಮೃತಿ ಮಂದನಾ, ಜೆಮೀಮಾ ರೋಡ್ರಿಗಸ್​, ಶೆಫಾಲಿ ವರ್ಮ, ದೀಪ್ತಿ ಶರ್ಮ, ಯಸ್ತಿಕಾ ಭಾಟಿಯಾ, ರಿಚಾ ಘೋಷ್​, ಅಮನ್​ಜೋತ್​ ಕೌರ್​, ಶ್ರೇಯಾಂಕ ಪಾಟೀಲ್​, ಮನ್ನತ್​ ಕಶ್ಯಪ್​, ಶೇಕಾ ಇಶಾಕಿ, ರೇಣುಕಾ ಸಿಂಗ್​, ಟಿಟಾಸ್​ ಸಾಧು, ಪೂಜಾ ವಸ್ತ್ರಾಕರ್​, ಕನಿಕಾ ಅಹುಜಾ, ಮಿನ್ನು ರಾಣಿ.

ಟೆಸ್ಟ್​ ತಂಡ: ಹರ್ಮಾನ್​ಪ್ರೀತ್​, ಸ್ಮೃತಿ, ಜೆಮೀಮಾ, ಶೆಫಾಲಿ, ದೀಪ್ತಿ ಶರ್ಮ, ಯಸ್ತಿಕಾ, ರಿಚಾ, ಸ್ನೇಹಾ ರಾಣಾ, ಶುಭಾ ಸತೀಶ್​, ಹರ್ಲೀನ್​, ಶೇಕಾ ಇಶಾಕಿ, ರೇಣುಕಾ, ಟಿಟಾಸ್​, ಮೇಘಾ ಸಿಂಗ್​, ರಾಜೇಶ್ವರಿ, ಪೂಜಾ ವಸ್ತ್ರಾಕರ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net