18 ಎಸೆತಗಳಲ್ಲಿ ಅರ್ಧಶತಕ: ಚರಿತ್ರೆ ಸೃಷ್ಟಿಸಿದ ಟೀಮ್​​ ಇಂಡಿಯಾ ಬ್ಯಾಟ್ಸ್​ವು​ಮನ್ ರಿಚಾ ಘೋಷ್!​ Richa Ghosh

Richa Ghosh
Published on

Richa Ghosh : ಟೀಮ್​​ ಇಂಡಿಯಾದ ವಿಕೆಟ್ ಕೀಪರ್ ಕಂ ಬ್ಯಾಟ್ಸ್​ವು​ಮನ್ ರಿಚಾ ಘೋಷ್​ ಅವರು ಅಪರೂಪದ ಸಾಧನೆ ಮಾಡಿದ್ದಾರೆ. ಮಹಿಳಾ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿವೇಗವಾಗಿ ಅರ್ಧಶತಕ ಬಾರಿಸಿದ ಬ್ಯಾಟ್ಸ್​ವುಮನ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇದೇ ವೇಳೆ ರಿಚಾ ಘೋಷ್​, ವಿಶ್ವ ದಾಖಲೆಯನ್ನೂ ಸರಿಗಟ್ಟಿದ್ದಾರೆ. ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೂರನೇ ಟಿ20 ಪಂದ್ಯದಲ್ಲಿ ರಿಚಾ ಅವರು ಈ ವಿಶೇಷ ಸಾಧನೆಯನ್ನು ಮಾಡಿದ್ದಾರೆ.

ರಿಚಾ ಅವರು ಕೇವಲ 18 ಎಸೆತಗಳಲ್ಲಿ 50 ರನ್ ಗಳಿಸಿದರು. ಒಟ್ಟಾರೆ ಈ ಪಂದ್ಯದಲ್ಲಿ 21 ಎಸೆತಗಳನ್ನು ಎದುರಿಸಿದ ರಿಚಾ ಮೂರು ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ 54 ರನ್ ಗಳಿಸಿದರು.

ವೇಗವಾಗಿ ಅರ್ಧಶತಕ ಬಾರಿಸಿದ ಮಹಿಳಾ ಕ್ರಿಕೆಟರ್ಸ್​

* ರಿಚಾ ಘೋಷ್ (ಭಾರತ) : ವೆಸ್ಟ್ ಇಂಡೀಸ್ ವಿರುದ್ಧ 18 ಎಸೆತಗಳಲ್ಲಿ ಅರ್ಧಶತಕ (2024)

* ಸೋಫಿ ಡಿವೈನ್ (ನ್ಯೂಜಿಲೆಂಡ್) : ಭಾರತ ವಿರುದ್ಧ 18 ಎಸೆತಗಳಲ್ಲಿ (2015)

* ಫೋಬೆ ಲಿಚ್‌ಫೀಲ್ಡ್ (ಆಸ್ಟ್ರೇಲಿಯಾ) : ವೆಸ್ಟ್ ಇಂಡೀಸ್ ವಿರುದ್ಧ 18 ಎಸೆತಗಳಲ್ಲಿ (2023)

* ನಿದಾ ದಾರ್ (ಪಾಕಿಸ್ತಾನ) : ದಕ್ಷಿಣ ಆಫ್ರಿಕಾ ವಿರುದ್ಧ 20 ಎಸೆತಗಳಲ್ಲಿ (2019)

* ಅಲಿಸ್ಸಾ ಹೀಲಿ (ಆಸ್ಟ್ರೇಲಿಯಾ) : ಐರ್ಲೆಂಡ್​ ವಿರುದ್ಧ 21 ಎಸೆತಗಳಲ್ಲಿ (2018)

* ಸೋಫಿ ಡಿವೈನ್ (ನ್ಯೂಜಿಲೆಂಡ್) : ಐರ್ಲೆಂಡ್​ ವಿರುದ್ಧ 21 ಎಸೆತಗಳಲ್ಲಿ (2018)

* ಆಲಿಸ್ ಕ್ಯಾಪ್ಸೆ (ಇಂಗ್ಲೆಂಡ್) : ಐರ್ಲೆಂಡ್​ 21 ಎಸೆತಗಳಲ್ಲಿ (2023)

ಪಂದ್ಯದ ವಿಚಾರಕ್ಕೆ ಬರುವುದಾದರೆ ಟೀಮ್​ ಇಂಡಿಯಾದ ಮೊದಲು ಬ್ಯಾಟಿಂಗ್ ಮಾಡಿತು. ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 217 ರನ್ ಗಳಿಸಿತು. ಭಾರತದ ಬ್ಯಾಟ್ಸ್​ವುಮೆನ್‌ಗಳ ಪೈಕಿ ಸ್ಮೃತಿ ಮಂಧಾನ (77 ರನ್​ 47 ಎಸೆತ, 13 ಬೌಂಡರಿ, 1 ಸಿಕ್ಸರ್) ಮತ್ತು ರಿಚಾ ಘೋಷ್ (54 ರನ್​ 21 ಎಸೆತ 3 ಬೌಂಡರಿ, 5 ಸಿಕ್ಸರ್) ಅರ್ಧಶತಕ ಗಳಿಸಿದರು. ಜೆಮಿಮಾ ರೋಡ್ರಿಗಸ್ (31) ಮತ್ತು ರಾಘವಿ ಬಿಷ್ಟ್ (ಅಜೇಯ 31) ಮಿಂಚಿದರು.

ನಂತರ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 157 ರನ್‌ಗಳಿಗೆ ಸೀಮಿತವಾಯಿತು. ಭಾರತದ ಬೌಲರ್‌ಗಳ ಪರ ರಾಧಾ ಯಾದವ್ ನಾಲ್ಕು ವಿಕೆಟ್ ಪಡೆದರು. ಈ ಪಂದ್ಯದ ಗೆಲುವಿನೊಂದಿಗೆ ಭಾರತ ತಂಡ ಮೂರು ಪಂದ್ಯಗಳ ಟಿ20 ಸರಣಿಯನ್ನು 2-1 ಅಂತರದಲ್ಲಿ ವಶಪಡಿಸಿಕೊಂಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net