ಕೊಹ್ಲಿ ಕುಡಿಯೋ ಕಪ್ಪು ನೀರಿನ ಬಗ್ಗೆ ನಿಮಗೆ ಗೊತ್ತಿದೆಯೇ? ಇದರ ಪ್ರಯೋಜನ ತಿಳಿದ್ರೆ ನಿಮ್ಮ ಹುಬ್ಬೇರುತ್ತೆ! Virat Kohli

Virat Kohli
Published on

Virat Kohli : ಟೀಮ್​ ಇಂಡಿಯಾದಲ್ಲಿರುವ ಇತರೆ ಕ್ರಿಕೆಟಿಗರಿಗಿಂತ ದಾಖಲೆಗಳ ಸರದಾರ ಹಾಗೂ ರನ್​ ಮೆಷಿನ್​ ವಿರಾಟ್ ಕೊಹ್ಲಿ ತಮ್ಮ ಫಿಟ್ನೆಸ್​ ಕಡೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಹೀಗಾಗಿಯೇ ಕೊಹ್ಲಿ ವ್ಯಾಯಾಮ ಮಾಡುತ್ತಿರುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೀವು ಆಗಾಗ ನೋಡಿರುತ್ತೀರಿ.

ಅಂದಗಾಗೆ ವಿರಾಟ್ ಕೊಹ್ಲಿ ಅವರ ಡಯಟ್ ತುಂಬಾ ವಿಶೇಷ ಎನ್ನಲಾಗುತ್ತಿದೆ. ತಿನ್ನುವ ಊಟ ಮಾತ್ರವಲ್ಲ ಕುಡಿಯುವ ನೀರು ಕೂಡ ತುಂಬಾ ವಿಶೇಷವಾಗಿದೆ. ಏಕೆಂದರೆ ಕೊಹ್ಲಿ ಅವರು ಮಿನರಲ್ ವಾಟರ್ ಬದಲಿಗೆ ಕಪ್ಪು ಬಣ್ಣದ ವಿಶೇಷ ನೀರು ಕುಡಿಯುತ್ತಾರೆ. ಸಾಮಾನ್ಯ ಮಿನರಲ್ ವಾಟರ್ ಬಾಟಲಿಯ ಬೆಲೆ ಲೀಟರ್‌ಗೆ 20 ರಿಂದ 40 ರೂಪಾಯಿ. ಆದರೆ, ಒಂದು ಲೀಟರ್ ಕಪ್ಪು ನೀರಿನ ಬೆಲೆ ಸುಮಾರು 600 ರಿಂದ 3000 ರೂಪಾಯಿವರೆಗೂ ಇದೆ.

ಈ ಕಪ್ಪು ಬಣ್ಣದ ನೀರನ್ನು ಫ್ರಾನ್ಸ್‌ನಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಕರೊನಾ ಆರಂಭವಾದಾಗಿನಿಂದ ಕೊಹ್ಲಿ ಈ ಕಪ್ಪು ನೀರು ಕುಡಿಯಲು ಆರಂಭಿಸಿದ್ದಾರೆ. ಕೊಹ್ಲಿ ಮಾತ್ರವಲ್ಲ, ಬಾಲಿವುಡ್ ನಾಯಕಿಯರಾದ ಊರ್ವಶಿ ರೌಟೇಲಾ, ಮಲೈಕಾ ಅರೋರಾ ಮತ್ತು ದಕ್ಷಿಣ ಭಾರತದ ತಾರೆ ಶ್ರುತಿ ಹಾಸನ್ ಕೂಡ ಫಿಟ್ ಆಗಿರಲು ಇದನ್ನೇ ಕುಡಿಯುತ್ತಾರೆ.

ಏನಿದು ಕಪ್ಪು ನೀರು?

ನೀರಿಗೆ ಬಣ್ಣ ಅಥವಾ ರುಚಿ ಇಲ್ಲ ಎಂದು ಹೇಳಲಾಗುತ್ತದೆ. ಆದರೆ ಈ ಕಪ್ಪು ನೀರು ಅದು ತಪ್ಪು ಎಂದು ಸಾಬೀತುಪಡಿಸುತ್ತದೆ. ಹೆಸರೇ ಸೂಚಿಸುವಂತೆ ಈ ನೀರು ಕಪ್ಪು ಬಣ್ಣದ್ದಾಗಿದೆ. ಸಾಮಾನ್ಯ ನೀರಿಗಿಂತ ಕಪ್ಪು ನೀರಿನ ಪಿಹೆಚ್ ಮಟ್ಟ ಹೆಚ್ಚಾಗಿದೆ. ಸಾಮಾನ್ಯ ನೀರಿನ pH ಮಟ್ಟ 6 ರಿಂದ 7. ಈ ಕಪ್ಪು ನೀರಿನ pH ಮಟ್ಟ 8.5 ಆಗಿದೆ. ಹೆಚ್ಚಿನ pH ಮಟ್ಟದ ನೀರು ನೈಸರ್ಗಿಕವಾಗಿ ಬರಬಹುದು ಅಥವಾ ಅದನ್ನು ವಿಶೇಷವಾಗಿ ಅಯಾನೀಕರಿಸಬೇಕು. ಈ ಕಪ್ಪು ನೀರಿನಲ್ಲಿ 70ಕ್ಕೂ ಹೆಚ್ಚು ಖನಿಜಗಳಿವೆ. ಇದು ದೀರ್ಘಾವಧಿಯಲ್ಲಿ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.

ಈ ಕಪ್ಪು ನೀರಿನಲ್ಲಿನ ಅಣುಗಳು ಚಿಕ್ಕದಾಗಿದ್ದು, ಈ ಕಾರಣದಿಂದಾಗಿ, ನಮ್ಮ ದೇಹದ ಜೀವಕೋಶಗಳು ಅವುಗಳನ್ನು ಸುಲಭವಾಗಿ ಹೀರಿಕೊಳ್ಳುತ್ತವೆ. ಇದಲ್ಲದೆ, ಈ ಕಪ್ಪು ನೀರಿನ ಅಣುಗಳು ನಮ್ಮ ದೇಹ ವ್ಯವಸ್ಥೆಗೆ ನಾವು ಒದಗಿಸುವ ಪೋಷಕಾಂಶಗಳನ್ನು ಉಳಿಸಿಕೊಳ್ಳುವಲ್ಲಿ ಬಹಳ ವೇಗವಾಗಿ ಕೆಲಸ ಮಾಡುತ್ತವೆ. ಈ ಕಪ್ಪು ನೀರಿನಿಂದ ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಈ ಕಾರಣಕ್ಕಾಗಿಯೇ ಈ ಕಪ್ಪು ನೀರಿಗೆ ಭಾರಿ ಬೇಡಿಕೆ ಇದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net