

ನವದೆಹಲಿ: ಭಾರತ ಮಹಿಳಾ ಕ್ರಿಕೆಟ್ ತಂಡ ದ್ವಿಪಯ ಸರಣಿ ಆಡುವ ಸಲುವಾಗಿ ಮುಂದಿನ ಸೆಪ್ಟೆಂಬರ್ನಲ್ಲಿ ಆಸ್ಟ್ರೆಲಿಯಾ ಪ್ರವಾಸ ಕೈಗೊಳ್ಳುವ ಸಾಧ್ಯತೆಗಳಿವೆ. ಕರೊನಾ ಕಾಲದಲ್ಲಿ ಭಾರತ ತಂಡ ಇದುವರೆಗೆ ಏಕೈಕ ಸರಣಿ ಆಡಿದೆ. ಅದು ಲಖನೌದಲ್ಲಿ ಪ್ರವಾಸಿ ದಣ ಆಫ್ರಿಕಾ ವಿರುದ್ಧ ನಡೆದ ನಿಗದಿತ ಓವರ್ಗಳ ಸರಣಿಯಾಗಿದೆ.
ಮುಂದಿನ ತಿಂಗಳು ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡ, ಏಕೈಕ ಟೆಸ್ಟ್, ತಲಾ 3 ಏಕದಿನ ಹಾಗೂ ಟಿ20 ಪಂದ್ಯಗಳನ್ನಾಡಲಿದೆ. ಬಳಿಕ ಸೆಪ್ಟೆಂಬರ್ ಮಧ್ಯ ಭಾಗದಲ್ಲಿ ಭಾರತ ತಂಡ ಆಸೀಸ್ ಪ್ರವಾಸ ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಸಂವಾದ ಕಾರ್ಯಕ್ರಮವೊಂದರಲ್ಲಿ ಆಸ್ಟ್ರೆಲಿಯಾದ ವೇಗದ ಬೌಲರ್ ಮೆಗನ್ ಸ್ಕಟ್ ತಿಳಿಸಿದ್ದಾರೆ.
ಪೂರ್ವನಿಗದಿಯಂತೆ ಭಾರತ ಮಹಿಳಾ ತಂಡ ಜನವರಿಯಲ್ಲೇ ಆಸೀಸ್ ಪ್ರವಾಸ ಕೈಗೊಳ್ಳಬೇಕಿತ್ತು. ಆದರೆ, ಕೋವಿಡ್&19ರಿಂದ ವಿಶ್ವಕಪ್ ಮುಂದೂಡಿಕೆಯಾದ ಹಿನ್ನೆಲೆಯಲ್ಲಿ ಭಾರತದ ಆಸೀಸ್ ಪ್ರವಾಸವನ್ನೂ ಮುಂದೂಡಲಾಗಿತ್ತು.