ತಾಯಿಯ ಬೆನ್ನಲ್ಲೇ ಕರೊನಾದಿಂದಾಗಿ ಸಹೋದರಿಯನ್ನೂ ಕಳೆದುಕೊಂಡ ಕ್ರಿಕೆಟರ್​ ವೇದಾಕೃಷ್ಣಮೂರ್ತಿ

Veda Krishamurthy
Published on

ಚಿಕ್ಕಮಗಳೂರು: ಮಹಾಮಾರಿ ಕರೊನಾದಿಂದ ತಾಯಿಯನ್ನು ಕಳೆದುಕೊಂಡ ಬೆನ್ನಲ್ಲೇ ಸಹೋದರಿಯನ್ನೂ ಕಳೆದುಕೊಂಡು ಭಾರತೀಯ ಮಹಿಳಾ ಕ್ರಿಕೆಟರ್​ ವೇದಾಕೃಷ್ಣಮೂರ್ತಿ ಶೋಕ ಸಾಗರದಲ್ಲಿ ಮುಳುಗಿದ್ದಾರೆ.

ಚಿಕ್ಕಮಗಳೂರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಸಹೋದರಿ ವತ್ಸಲಾ ಕೃಷ್ಣಮೂರ್ತಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ಕಳೆದ ವಾರ ವೇದಕೃಷ್ಣಮೂರ್ತಿ ತಾಯಿ ಚೆಲುವಾಂಬ (63) ಕೋವಿಡ್ ಗೆ ಬಲಿಯಾಗಿದ್ದರು. ಇದಾದ ಒಂದೇ ವಾರದಲ್ಲಿ ಸಹೋದರಿಯನ್ನು ಕಳೆದುಕೊಂಡಿದ್ದಾರೆ. ಒಂದೇ ಕುಟುಂಬದ ಐವರಲ್ಲಿ ಕರೊನಾ ಸೋಂಕು ದೃಢಪಟ್ಟಿತ್ತು.

ಕಳೆದ ಜನವರಿಯಲ್ಲಿ ವೇದಾ ಅವರ ತಾಯಿ ಚೆಲುವಾಂಬ 63ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಕಳೆದ ವಾರ ಕೋವಿಡ್​ ಪಾಸಿಟಿವ್​ ಆಗಿ ಉಸಿರಾಟದ ತೊಂದರೆಯಿಂದ ಕೋವಿಡ್​ಗೆ ಬಲಿಯಾಗಿದ್ದಾರೆ. ಇದಾದ ಒಂದೇ ವಾರದಲ್ಲಿ ಸಹೋದರಿಯು ಸಹ ಮೃತಪಟ್ಟಿದ್ದಾರೆ.

ಕಡೂರು ತಾಲೂಕಿನ ಬೀರೂರು ರಸ್ತೆ ಬಳಿಯಿ ಇರುವ ವೇದಾ ಕೃಷ್ಣಮೂರ್ತಿ ಅವರ ಜಮೀನಿನಲ್ಲಿ ಕೋವಿಡ್​ ಮಾರ್ಗ ಸೂಚಿಯಂತೆಯೇ ತಾಲೂಕು ಆಡಳಿತ ವತಿಯಿಂದ ಸಹೋದರಿಯ ಅಂತ್ಯಸಂಸ್ಕಾರ ನೆರವೇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net