

ಸೌಥಾಂಪ್ಟನ್: ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲ್ಯುಟಿಎ) ಫೈನಲ್ ಪಂದ್ಯಕ್ಕೆ ದಿನಗಣನೆ ಆರಂಭಗೊಂಡಿದೆ. ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಪ್ರಶಸ್ತಿ ಸುತ್ತಿನ ಕಾದಾಟಕ್ಕೆ ಸೌಥಾಂಪ್ಟನ್‌ನ ರೇಸ್ ಬೌಲ್ ಸ್ಟೇಡಿಯಂ ಸಿದ್ಧವಾಗುತ್ತಿದೆ. ಈಗಾಗಲೇ ಇಂಗ್ಲೆಂಡ್‌ಗೆ ಆಗಮಿಸಿರುವ ಭಾರತ ತಂಡ 3 ದಿನಗಳ ಕಾಲ ಕಠಿಣ ಕ್ವಾರಂಟೈನ್‌ನಲ್ಲಿದೆ. ಇದಾದ ಬಳಿಕ ಬಹು ಸುರಕ್ಷಿತ ವಾತಾವರಣದಲ್ಲಿ ಅಭ್ಯಾಸ ನಡೆಸಲಿದೆ. ಭಾರತ ತಂಡದ ಅಭ್ಯಾಸ ನಡೆಸುವ ಮೈದಾನದ ಚಿತ್ರವನ್ನು ಬಿಸಿಸಿಐ ಟ್ವೀಟ್ ಮಾಡಿದೆ.
ಭಾರತ ಪುರುಷರ ಹಾಗೂ ಮಹಿಳಾ ತಂಡಗಳು ಕಳೆದ ಗುರುವಾರ (ಜೂನ್ 3) ಲಂಡನ್‌ಗೆ ಬಂದಿಳಿದವು. ಬಳಿಕ ಸೌಥಾಂಪ್ಟನ್‌ನಲ್ಲಿ ಕಠಿಣ ಕ್ವಾರಂಟೈನ್‌ನಲ್ಲಿವೆ. ಮೂರು ದಿನ ಕಠಿಣ ಕ್ವಾರಂಟೈನ್ ಬಳಿಕ ಭಾರತ ತಂಡದ ಆಟಗಾರರು ಅಭ್ಯಾಸ ನಡೆಸಲಿದ್ದಾರೆ. ಭಾರತ ಆಟಗಾರರು ಕ್ವಾರಂಟೈನ್ ಅವಧಿಯಲ್ಲಿ ಪರಸ್ಪರ ಮಾತನಾಡಂತೆ ಆದೇಶಿಸಲಾಗಿದೆ. ಪ್ರತಿದಿನ ಕೋವಿಡ್-19 ನಡೆಸಲಾಗುತ್ತಿದೆ.
ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ಜೂನ್ 18 ರಿಂದ ಚೊಚ್ಚಲ ಡಬ್ಲ್ಯುಟಿಸಿ ಫೈನಲ್ ಪಂದ್ಯ ಆರಂಭಗೊಂಡರೆ, ಮಹಿಳಾ ತಂಡ ಆತಿಥೇಯ ಇಂಗ್ಲೆಂಡ್ ಎದುರು ಜೂನ್ 16 ರಿಂದ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಲಿದೆ.