ತಂದೆಯಾದ ಬಳಿಕ ಬದಲಾಯಿತು ವಿರಾಟ್ ಕೊಹ್ಲಿ ಟ್ವಿಟರ್ ಬಯೋ!

kohli web
Published on

ಬೆಂಗಳೂರು: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪಿತೃತ್ವ ರಜೆಯ ಮೇರೆಗೆ ಆಸ್ಟ್ರೇಲಿಯಾ ಪ್ರವಾಸವನ್ನು ಮೊಟಕುಗೊಳಿಸಿ ತವರಿಗೆ ಮರಳಿದ್ದರು. ಅವರ ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮ ಇತ್ತೀಚೆಗೆ ಹೆಣ್ಣು ಮಗುವಿಗೆ ಜನ್ಮವನ್ನೂ ನೀಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ವಿರಾಟ್ ಕೊಹ್ಲಿ ಅವರ ಟ್ವಿಟರ್ ಖಾತೆಯಲ್ಲಿ ಅವರ ಬಯೋ ಬದಲಾಗಿದೆ.

ಹೆಣ್ಣು ಮಗುವಿನ ಆಗಮನದಿಂದ ವಿರಾಟ್ ಕೊಹ್ಲಿ ಇದೀಗ ಅಪಾರ ಸಂತಸದಲ್ಲಿದ್ದು, ಟ್ವಿಟರ್ ಬಯೋದಲ್ಲಿ ‘ಇಂಡಿಯನ್ ಕ್ರಿಕೆಟರ್’ ಎಂಬುದೇ ಮಾಯವಾಗಿದೆ! ಇದೀಗ ಅವರು ‘ಹೆಮ್ಮೆಯ ಪತಿ ಹಾಗೂ ತಂದೆ’ ಎಂದು ಟ್ವಿಟರ್ ಬಯೋ ಬದಲಾಯಿಸಿಕೊಂಡಿದ್ದಾರೆ.

ಮಗುವಿನ ಚಿತ್ರವನ್ನು ಇನ್ನೂ ಬಿಡುಗಡೆಗೊಳಿಸದ ವಿರಾಟ್ ಕೊಹ್ಲಿ, ತಾಯಿ-ಮಗು ಆಸ್ಪತ್ರೆಯಿಂದ ನಿರ್ಗಮಿಸುವ ವೇಳೆ ದಯವಿಟ್ಟು ಚಿತ್ರಗಳನ್ನು ಕ್ಲಿಕ್ಕಿಸಬೇಡಿ ಎಂದು ಪತ್ರಕರ್ತರಿಗೂ ಮನವಿ ಮಾಡಿಕೊಂಡಿದ್ದರು. ಅದರಂತೆ ಪತ್ರಕರ್ತರು ಅವರ ಖಾಸಗಿತನವನ್ನು ಗೌರವಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net