ಏಷ್ಯನ್​ ಗೇಮ್ಸ್​; ವಿಶ್ವದಾಖಲೆಯೊಂದಿಗೆ ಚಿನ್ನ ಗೆದ್ದ ಭಾರತದ ಶೂಟರ್​ಗಳು

Indian Shooters
Published on

ನವದೆಹಲಿ: ಚೀನಾದ ಹ್ಯಾಂಗ್​ಝೌನಲ್ಲಿ ನಡೆಯುತ್ತಿರುವ ಏಷ್ಯನ್​ ಗೇಮ್ಸ್​ ಕ್ರೀಡಾಕೂಟದಲ್ಲಿ ಪುರುಷರ 10 ಮೀಟರ್​ ಏರ್​ರೈಫಲ್​ ಸ್ಪರ್ಧೆಯಲ್ಲಿ ಭಾರತದ ಶೂಟಿಂಗ್​ ಪಟುಗಳು ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.

ವಿಶ್ವ ಚಾಂಪಿಯನ್​ ರುದ್ರಾಂಕ್ಷ್.ಬಿ. ಪಾಟೀಲ್, ದಿವ್ಯಾಂಶ್​ ಸಿಂಗ್​ ಪನ್ವಾರ್, ಐಶ್ವರಿ ಪ್ರತಾಪ್ ಸಿಂಗ್ ತೋಮರ್ ತಂಡವು ಅರ್ಹತಾ ಸುತ್ತಿನಲ್ಲಿ 1893.7 ಅಂಕ ಗಳಿಸುವ ಮೂಲಕ ಚಿನ್ನದ ಪದಕ ಗೆದ್ದಿದ್ದಾರೆ. ದಕ್ಷಿಣ ಕೊರಿಯಾ 1890.1 ಅಂಕ ಗಳಿಸುವ ಮೂಲಕ ಬೆಳ್ಳಿ ಪದಕ ಗೆದ್ದಿದ್ದಾರೆ. 1888.2 ಅಂಕಗಳಿಸುವ ಮೂಲಕ ಕಂಚಿನ ಪದಕಕ್ಕೆ ತೃಪ್ತಿಯಾಯಿತು.

ಭಾರತದ ಪರ ರುದ್ರಾಂಕ್ಷ್ 632.5, ಐಶ್ವರಿ ಪ್ರತಾಪ್ ಸಿಂಗ್ 631.6, ದಿವ್ಯಾಂಶ್ ಸಿಂಗ್ 629.6 ಅಂಕ ಗಳಿಸುವ ಮೂಲಕ ಶೂಟಿಂಗ್​ನಲ್ಲಿ ವಿಶ್ವದಾಖಲೆ ನಿರ್ಮಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net