More

    ಜಮ್ಮು-ಕಾಶ್ಮೀರ; ದಾಳಿಗೆ ಸಂಚು ರೂಪಿಸಿದ್ದ LETಯ ಐವರು ಉಗ್ರರ ಬಂಧನ

    ಶ್ರೀನಗರ: ದೇಶದಲ್ಲಿ ವಿದ್ವಂಸಕ ಕೃತ್ಯ ಎಸಗಲು ಹೊಂಚು ಹಾಕಿದ್ದ ಐವರು ಹೈಬ್ರಿಡ್​ ಉಗ್ರರನ್ನು ಜಮ್ಮು-ಕಾಶ್ಮೀರದ ಕುಲ್ಗಾಮದಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರ ಬಳಿ ಇದ್ದ ಶಸ್ರ್ತಾಸ್ತ್ರ ಹಾಗೂ ಬಾಂಬ್​ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    26 ಅಸ್ಸಾಂ ರೈಫಲ್ಸ್​, ಸೆಂಟ್ರಲ್​ ರಿಸರ್ವ್​ ಪೊಲೀಸ್​ ಫೋರ್ಸ್​ (CRPF) ನಡಸಿದ ಜಂಟಿ ಕಾರ್ಯಾಚರಣೆಯಲ್ಲಿ ಉಗ್ರರನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರು ಲಷ್ಕರ್​-ಇ-ತೋಯ್ಬಾ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದರು ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಕೈಮೋಹ ಪೊಲೀಸ್​ ಠಾಣೆಯಲ್ಲಿ FIR ದಾಖಲಾಗಿದೆ.

    ಇದನ್ನೂ ಓದಿ: ರಾಜಸ್ಥಾನ ಸಿಎಂ ಅಶೋಕ್​ ಗಹ್ಲೋಟ್​ ಭೇಟಿಯಾದ ಬಿಜೆಪಿ ನಾಯಕಿ ವಸುಂಧರಾ ರಾಜೇ; ಫೋಟೋ ವೈರಲ್

    ಬಂಧಿತರನ್ನು ಆದಿಲ್​ ಹುಸೇನ್​ ವಾನಿ, ಸುಹೇಲ್​ ಅಹ್ಮದ್​ ದಾರ್, ಐತ್ಮದ್​ ಅಹ್ಮದ್​ ಲಾವೆ, ಮೆಹರಾಜ್​ ಅಹ್ಮದ್ ಲೋನ್, ಸಬ್ಜರ್ ಅಹ್ಮದ್ ಎಂದು ಗುರುತಿಸಲಾಗಿದೆ. ಬಂಧಿತರಿಂದ ಎರಡು ಪಿಸ್ತೂಲ್​, ಮೂರು ಹ್ಯಾಂಡ್​ ಗ್ರೆನೇಡ್, ಯುಬಿಜಿಎಲ್ ಸೇರಿದಂತೆ ಅನೇಕ ಸ್ಪೋಟಕಗಳನ್ನು ವಶಕ್ಕೆ ಪಡೆಯಲಾಗಿದೆ.

    ಕಳೆದ ತಿಂಗಳು ಜಮ್ಮು-ಕಾಶ್ಮೀರದ ಬಂಡಿಪೋರಾದಲ್ಲಿ ಪೊಲೀಸರು ಟೆರರ್​ ಮಾಡ್ಯೂಲ್​ಅನ್ನು ಭೇದಿಸಿ ಇಬ್ಬರನ್ನು ವಶಕ್ಕೆ ಪಡೆದಿದ್ದರು. ಬಂಧಿತರು ನೀಡಿದ ಮಾಹಿತಿ ಆಧರಿಸಿ ಪೊಲೀಸರು ಕುಲ್ಗಾಮದಲ್ಲಿ ಐವರು ಹೈಬ್ರಿಡ್​ ಉಗ್ರರನ್ನು ವಶಕ್ಕೆ ಪಡೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts