ಇಂಡಿಯನ್ ರೇಸಿಂಗ್ ಫೆಸ್ಟಿವಲ್​​ ಡ್ರೈವರ್​ ಡ್ರಾಫ್ಟ್​; ಕಿಚ್ಚಾಸ್ ಕಿಂಗ್ಸ್​ ಬೆಂಗಳೂರು ತಂಡಕ್ಕೆ ಕನ್ನಡಿಗ ರುಹಾನ್ ಆಳ್ವಾ

web race
Published on

ಮುಂಬೈ: ಇಂಡಿಯನ್ ರೇಸಿಂಗ್ ಲೀಗ್ 2025ರ ಋತುವಿಗೆ ವಿನೂತನ ಬಗೆಯ ಡ್ರೈವರ್ ಡ್ರಾಫ್ಟ್ ಮೂಲಕ ಸಂಪೂರ್ಣ ತಂಡಗಳ ಲೈನಪ್ ಪ್ರಕಟಿಸಿದ್ದು ಇದರಲ್ಲಿ ಐದು ಫ್ರಾಂಚೈಸಿಗಳ 24 ಚಾಲಕರಿದ್ದಾರೆ. ಅದರಲ್ಲಿ ಅಂತಾರಾಷ್ಟ್ರೀಯ ಚಾಂಪಿಯನ್ ಗಳು, ಭಾರತೀಯ ಪ್ರತಿಭೆಗಳು ಮತ್ತು ಮಹಿಳಾ ರೇಸರ್ ಗಳಿದ್ದಾರೆ. ಇಂಡಿಯನ್ ರೇಸಿಂಗ್ ಫೆಸ್ಟಿವಲ್ (ಐ.ಆರ್.ಎಫ್.)ನ 2025ನೇ ಋತುವಿನಲ್ಲಿ ತನ್ನ ಪ್ರಯಾಣಕ್ಕೆ ಮತ್ತೊಂದು ಮಹತ್ವದ ಮೈಲಿಗಲ್ಲು ಬುಧವಾರ ಸೇರ್ಪಡೆಯಾಗಿದ್ದು, ಐ.ಆರ್.ಎಲ್.ನ ಮೊಟ್ಟಮೊದಲ ಅಧಿಕೃತ ಡ್ರೈವರ್ ಡ್ರಾಫ್ಟ್ ನಡೆದಿದೆ. ಸ್ಯಾಂಡಲ್​ವುಡ್​ ನಟ ಕಿಚ್ಚ ಸುದೀಪ್​ ಒಡೆತನದ ಕಿಚ್ಚಾಸ್​ ಕಿಂಗ್ಸ್​ ಬೆಂಗಳೂರು ತಂಡಕ್ಕೆ ಕನ್ನಡಿಗ ರುಹಾನ್​ ಆಳ್ವಾ ಸೇರ್ಪಡೆಗೊಂಡರು.

ಮುಂಬೈನ ತಾಜ್ ಲ್ಯಾಂಡ್ಸ್ ಎಂಡ್ ನಲ್ಲಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮವು ಫ್ರಾಂಚೈಸಿ ಮಾಲೀಕರು, ಲೀಗ್ ಅಧಿಕಾರಿಗಳು ಮತ್ತು ಮಾಧ್ಯಮವನ್ನು ಒಟ್ಟಿಗೆ ತಂದಿದ್ದು ಈ ಋತುವಿನ ಅಧಿಕೃತ ಪ್ರಾರಂಭದ ಗುರುತಾಗಿದೆ. ಇದರಲ್ಲಿ ಬೃಹತ್ ಪಾಲಿನ ಸ್ಪರ್ಧೆ, ಜಾಗತಿಕ ಪ್ರತಿಭೆ ಮತ್ತು ತೀವ್ರವಾದ ಅಭಿಮಾನಿಗಳ ಸಕ್ರಿಯತೆ ಒಳಗೊಂಡಿದೆ. ಈ ಕಾರ್ಯಕ್ರಮವನ್ನು ತಂಡಗಳನ್ನು ನಿರ್ಮಿಸುವಲ್ಲಿ ಮಹತ್ತರ ರಚನೆ ಮತ್ತು ಪಾರದರ್ಶಕತೆ ತರಲು ವಿನ್ಯಾಸಗೊಳಿಸಲಾಗಿದ್ದು ಭಾರತೀಯ ಮೋಟಾರ್ ಸ್ಪೋರ್ಟ್ ಗೆ ಇದು ಪ್ರಪ್ರಥಮವಾಗಿದೆ ಮತ್ತು ಒಳಗೊಳ್ಳುವ ಮತ್ತು ಸಾಧನೆ ಪ್ರೇರಿತ ಲೀಗ್ ಸೃಷ್ಟಿಸುವ ಐ.ಆರ್.ಎಫ್. ಧ್ಯೇಯವನ್ನು ಮರು ದೃಢೀಕರಿಸುತ್ತಿದೆ.

ಸಂಜೆ ನಡೆದ ರೋಮಾಂಚಕ ಕಾರ್ಯಕ್ರಮದಲ್ಲಿ ಮುಂದಿನ ಐ.ಆರ್.ಎಲ್. ಋತುವಿಗೆ ಆರು ನಗರ ಆಧರಿತ ಫ್ರಾಂಚೈಸಿಗಳಿಂದ 24 ಚಾಲಕರನ್ನು ಆಯ್ಕೆ ಮಾಡಲಾಯಿತು. ಪ್ರತಿ ತಂಡವೂ ನಾಲ್ಕು ಚಾಲಕರನ್ನು ಆಯ್ಕೆ ಮಾಡಿಕೊಂಡಿದ್ದು ಸಮತೋಲನದ ಮತ್ತು ಸ್ಪರ್ಧಾತ್ಮಕ ಸರಣಿಯನ್ನು ಸೃಷ್ಟಿಸಿದ್ದು ಅದರಲ್ಲಿ ಅನುಭವಿ ಅಂತಾರಾಷ್ಟ್ರೀಯ ಚಾಲಕ, ಉದಯೋನ್ಮುಖ ಅಂತಾರಾಷ್ಟ್ರೀಯ ಮತ್ತು ಭಾರತೀಯ ಮೂಲದ ಪ್ರತಿಭೆ, ಸ್ಥಳೀಯ ಭಾರತೀಯ ಚಾಲಕ ಮತ್ತು ಮಹಿಳಾ ಚಾಲಕಿಯನ್ನು ಒಳಗೊಂಡಿದೆ. ಈ ಆಯ್ಕೆಯು ಸಾಂಕೇತಿಕ ಮಾತ್ರವಲ್ಲದೆ ಕಾರ್ಯತಂತ್ರೀಯವೂ ಆಗಿದ್ದು ತಂಡಗಳು ಚಾಲನೆಯ ಶೈಲಿಗಳು, ಟ್ರ್ಯಾಕ್ ಅನುಭವ ಮತ್ತು ಡೇಟಾ- ಬೆಂಬಲಿತ ಪರ್ಫಾರ್ಮೆನ್ಸ್ ಇಂಡಿಕೇಟರ್ ಸುತ್ತಲೂ ಅವರ ರೋಸ್ಟರ್ ಗಳ ನಿರ್ಮಾಣ ಮಾಡಿಕೊಳ್ಳುತ್ತವೆ.

ಅಂತಿಮ ಗ್ರಿಡ್ ನಲ್ಲಿ ಮಾಜಿ ಫಾರ್ಮುಲಾ 1 ಟೆಸ್ಟ್ ಡ್ರೈವರ್ ನೀಲ್ ಜಾನಿ ಮತ್ತು ಲೆ ಮ್ಯಾನ್ಸ್ ವಿಜೇತ, ಜಿಪಿ2 ಹಿನ್ನೆಲೆಯ ಮತ್ತು ಎಂಡುರೆನ್ಸ್ ರೇಸಿಂಗ್ ನ ಜಾನ್ ಲಂಕಾಸ್ಟರ್ ಮತ್ತು ಭಾರತೀಯ ಮೂಲದ ಅಪಾರ ಅಭಿಮಾನಿಗಳ ಬೆಂಬಲದಿಂದ ಹಿಂದಿರುಗಿದ ಎರಡು ಬಾರಿ ಐ.ಆರ್.ಎಲ್. ಚಾಂಪಿಯನ್ ರೌಲ್ ಹೈಮನ್ ಇದ್ದಾರೆ. ಭಾರತದ ಬದಿಯಲ್ಲಿ ಯುವ ಪ್ರತಿಭೆಗಳಾದ ರುಹಾನ್ ಆಳ್ವಾ, ಸೊಹಿಲ್ ಶಾ, ಸಾಯಿ ಸಂಜಯ್ ಮತ್ತು ಅಕ್ಷಯ್ ಬೊಹ್ರಾ ತಮ್ಮ ವೇಗ ಮತ್ತು ತೀಕ್ಷ್ಣ ರೇಸ್ ಕ್ರಾಫ್ಟ್ ತರಲಿದ್ದು, ಮಹಿಳಾ ರೇಸರ್ ಗಳಾದ ಫ್ಯಾಬಿಯೆನ್ನೆ ವೊಹ್ಲ್ ವೆಂಡ್, ಗೇಬ್ರಿಯೆಲಾ ಜಿಲ್ಕೋವಾ ಮತ್ತು ಕೈಟ್ಲಿನ್ ವುಡ್ ಡಬ್ಲ್ಯೂ ಸೀರೀಸ್, ಎಫ್3 ಮತ್ತು ಜಿಟಿ ಮಾದರಿಗಳಲ್ಲಿ ಅಂತಾರಾಷ್ಟ್ರೀಯ ಅನುಭವವನ್ನು ತೋರಲಿದ್ದಾರೆ.

ಈ ಡ್ರಾಫ್ಟ್ ನಂತರ ಭಾರತೀಯ ಸಿನಿಮಾ ಮತ್ತು ಕ್ರೀಡೆಯ ಸಾರ್ವಜನಿಕ ವ್ಯಕ್ತಿಗಳಿಂದ ಎಲ್ಲ ಆರು ತಂಡಗಳ ಮಾಲೀಕರು ವೇದಿಕೆಗೆ ಆಗಮಿಸಿ ಅವರ ತಂಡಗಳನ್ನು ಪ್ರಕಟಿಸಿದರು ಮತ್ತು ಲೀಗ್ ಗೆ ಅವರ ಧ್ಯೇಯೋದ್ದೇಶ ಚರ್ಚಿಸಿದರು. ತಂಡದ ಮಾಲೀಕರು ಮತ್ತು ಫ್ರಾಂಚೈಸಿಗಳ ಪ್ರಮುಖರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ತಂಡಗಳು ಅವರ ಆಯ್ಕೆಗಳನ್ನು ಅಂತಿಮಗೊಳಿಸಿದವು. ಪ್ರತಿ ಮಾಲೀಕರು ಅವರ ತಾಂತ್ರಿಕ ತಂಡಗಳೊಂದಿಗೆ ಸ್ಪರ್ಧಾತ್ಮಕ ಗುರಿಗಳು ಮತ್ತು ಪ್ರಾದೇಶಿಕ ಗುರುತಿಗೆ ಹೊಂದುವಂತಹ ರೋಸ್ಟರ್ ನಿರ್ಮಿಸಲು ಒಟ್ಟಿಗೆ ಶ್ರಮಿಸಿದವು. ಉನ್ನತ ಮಟ್ಟದ ಸಕ್ರಿಯತೆಯ ವಿಧಾನವು ಈ ಕ್ರೀಡೆಯಲ್ಲಿ ಮಾತ್ರವಲ್ಲ, ಅವರ ತಂಡಗಳ ಸುತ್ತಲೂ ನೆರೇಟಿವ್ ರೂಪಿಸಲು ಹೊಸಮಟ್ಟದ ಬದ್ಧತೆ ಮತ್ತು ಹೂಡಿಕೆಯನ್ನು ಫ್ರಾಂಚೈಸಿ ಮಾಲೀಕರಿಂದ ಪಡೆಯುವ ಸೂಚನೆ ನೀಡಿದೆ.

“ಇಂಡಿಯನ್ ರೇಸಿಂಗ್ ಫೆಸ್ಟಿವಲ್ 2025ಕ್ಕೆ ಸಂಬಂಧಿಸಿದಂತೆ ಇದು ನಮ್ಮ ಒಗ್ಗಟ್ಟಿನ ಧ್ಯೇಯವನ್ನು ತಂದಿದೆ” ಎಂದು ಐ.ಆರ್.ಎಫ್. ಆಯೋಜಿಸುತ್ತಿರುವ ಸಂಸ್ಥೆ ರೇಸಿಂಗ್ ಪ್ರೊಮೋಷನ್ಸ್ ಪ್ರೈ.ಲಿ. (ಆರ್.ಪಿ.ಪಿ.ಎಲ್.)ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಶ್ರೀ ಅಖಿಲೇಶ್ ರೆಡ್ಡಿ ಹೇಳಿದರು. “ಈ ಡ್ರೈವರ್ ಡ್ರಾಫ್ಟ್ ಮೂಲಕ ನಾವು ಭಾರತದಲ್ಲಿ ಮೋಟಾರ್ ಸ್ಪೋರ್ಟ್ ಗೆ ಹೊಸ ತಳಹದಿ ನಿರ್ಮಿಸುತ್ತಿದ್ದೇವೆ- ಅದು ಎಲ್ಲರನ್ನೂ ಒಳಗೊಳ್ಳುವ, ರಚನಾತ್ಮಕ ಮತ್ತು ಅತ್ಯಂತ ಸ್ಪರ್ಧಾತ್ಮಕವಾಗಿದೆ. ಐ.ಆರ್.ಎಲ್. 2025ಕ್ಕೆ ಡ್ರೈವರ್ ಡ್ರಾಫ್ಟ್ ಪ್ರತಿಭೆಯನ್ನು ಸಂಭ್ರಮಿಸುತ್ತದೆ, ಸ್ಪರ್ಧಾತ್ಮಕತೆ ಉತ್ತೇಜಿಸುತ್ತದೆ ಮತ್ತು ರೇಸಿಂಗ್ ಋತುವಿಗೆ ಗಂಭೀರ ನಿರೀಕ್ಷೆ ಬೆಳೆಸುತ್ತದೆ. ನಾವು ಇಲ್ಲಿ ಮಾಡುತ್ತಿರುವುದು ಭಾರತಕ್ಕೆ, ಭಾರತದಿಂದ ವಿಶ್ವವು ವೀಕ್ಷಿಸುವ ಕ್ರೀಡೆಯನ್ನು ನಿರ್ಮಿಸುವುದು” ಎಂದರು.

ಡೆಲ್ಹೀಸ್ ಸ್ಪೀಡ್ ಡೆಮೊನ್ಸ್ ನಿಂದ ಹೊಚ್ಚಹೊಸ ಪ್ರವೇಶ ಪಡೆದ ಕಿಚ್ಚಾಸ್ ಕಿಂಗ್ಸ್ ಬೆಂಗಳೂರು ಈಗ ರೇಸ್-ಸನ್ನದ್ಧ ಸರಣಿಯೊಂದಿಗೆ ಈ ಋತುವಿನತ್ತ ಮುನ್ನಡೆಯುತ್ತಿದ್ದಾರೆ. 2025ರ ಋತುವು ಆಗಸ್ಟ್ ತಿಂಗಳಲ್ಲಿ ಪ್ರಾರಂಭವಾಗುತ್ತದೆ ಮತ್ತು ಭಾರತದಾದ್ಯಂತ ಶಾಶ್ವತ ಸರ್ಕ್ಯೂಟ್ ಗಳು ಮತ್ತು ಅರ್ಬನ್ ಸ್ಟ್ರೀಟ್ ಟ್ರ್ಯಾಕ್ ಗಳನ್ನು ಒಳಗೊಂಡು ಹಲವು ನಗರಗಳಲ್ಲಿ ರೇಸ್ ಗಳನ್ನು ಹೊಂದಿದೆ. ಸಂಜೆಯು ಮ್ಯಾನೇಜ್ಮೆಂಟ್, ಮಾಲೀಕರು ಮತ್ತು ಪತ್ರಕರ್ತರೊಂದಿಗೆ ಸಂವಹನದೊಂದಿಗೆ ಸಮಾರೋಪಗೊಂಡಿದ್ದು ಭಾರತದ ಮೋಟಾರ್ ಸ್ಪೋರ್ಟ್ ನಲ್ಲಿ ಮಹತ್ತರ ಹಾಗೂ ಅವಿಸ್ಮರಣೀಯ ಅಧ್ಯಾಯದ ಪ್ರಾರಂಭಕ್ಕೆ ನಾಂದಿ ಹಾಡಿತು.

ಐ.ಆರ್.ಎಲ್. 2025 ಡ್ರೈವರ್ ಡ್ರಾಫ್ಟ್- ಅಂತಿಮ ತಂಡಗಳು

ಸ್ಪೀಡ್ ಡೆಮೊನ್ಸ್ ದೆಹಲಿ (ಮಾಲೀಕರು: ಅರ್ಜುನ್ ಕಪೂರ್)

● ಆಲಿಸ್ಟರ್ ಯೂಂಗ್ (ಮಲೇಷಿಯಾ)- ಏಷ್ಯನ್ ಸಿಂಗಲ್-ಸೀಟರ್ಸ್ ನಲ್ಲಿ ನಿಯಮಿತವಾಗಿ ಇರುತ್ತಾರೆ, ಮಾಜಿ ಎಫ್1 ಡ್ರೈವರ್ ಅಲೆಕ್ಸ್ ಯೂಂಗ್ ಅವರ ಪುತ್ರ

● ಸಾಯಿ ಸಂಜಯ್ (ಭಾರತ) – ಭಾರತದಾದ್ಯಂತ ಸರ್ಕ್ಯೂಟ್ ಚಾಂಪಿಯನ್ ಶಿಪ್ ಗಳಲ್ಲಿ ಸತತ ಸ್ಥಳೀಯ ಸಾಧಕರು

● ಶಹಾನ್ ಅಲಿ ಮೊಹ್ಸಿನ್ (ಭಾರತ)- ಮಾಜಿ ಎಫ್4 ಎಸ್.ಇ.ಎ. ಚಾಂಪಿಯನ್ ಮತ್ತು ಭಾರತದ ಮುಂಚೂಣಿಯ ಕಾರ್ಟಿಂಗ್ ಪದವೀಧರರಲ್ಲಿ ಒಬ್ಬರು.

● ಕೈಟ್ಲಿನ್ ವುಡ್ (ಆಸ್ಟ್ರೇಲಿಯಾ)- ಡಬ್ಲ್ಯೂ ಸೀರೀಸ್ ಮತ್ತು ಜಿಟಿ ವರ್ಲ್ಡ್ ಚಾಲೆಂಜ್ ನಲ್ಲಿ ಅನುಭವಿ

ಹೈದರಾಬಾದ್ ಬ್ಲಾಕ್ ಬರ್ಡ್ಸ್ (ಮಾಲೀಕರು: ನಾಗ ಚೈತನ್ಯ)

● ಜಾನ್ ಲಂಕಾಸ್ಟರ್ (ಯು.ಕೆ.)- ಮಾಜಿ ಜಿಪಿ2 ವಿಜೇತರು ಮತ್ತು ಲೆ ಮ್ಯಾನ್ಸ್ ಪೋಡಿಯಂ ಫಿನಿಷರ್

● ಅಕ್ಷಯ್ ಬೊಹ್ರಾ (ಭಾರತ)- ಭರವಸೆಯ ಭಾರತದ ಮೂಲದ ಚಾಲಕ ಯೂರೋಪ್ ಮತ್ತು ಯುಎಇಯಲ್ಲಿ ಎಫ್4 ಅನುಭವಿ

● ಮೊಹಮ್ಮದ್ ರಯಾನ್ (ಭಾರತ)- ಸದೃಢ ಸಿಮ್-ರೇಸಿಂಗ್ ಮತ್ತು ಎಫ್4 ಅನುಭವದ ಯುವ ಪ್ರತಿಭೆ

● ಗೇಬ್ರಿಯೆಲಾ ಜಿಲ್ಕೋವಾ (ಝೆಕ್ ರಿಪಬ್ಲಿಕ್) – ಅಂತಾರಾಷ್ಟ್ರೀಯ ಮಾನ್ಯತೆಯ ಸಿಮ್ ಮತ್ತು ಜಿಟಿ ರೇಸಿಂಗ್ ಅನುಭವಿ

ಗೋವಾ ಏಸಸ್ (ಮಾಲೀಕರು- ಜಾನ್ ಅಬ್ರಹಾಂ)

● ರೌಲ್ ಹೈಮನ್ (ಯು.ಕೆ./ಎಸ್.ಎ)- ಎರಡು ಬಾರಿ ಐ.ಆರ್.ಎಲ್. ಚಾಂಪಿಯನ್ ಮತ್ತು ಎಫ್.3 ಪರಿಣಿತರು

● ಆಕಾಶ್ ಗೌಡ (ಭಾರತ)- ರಾಷ್ಟ್ರೀಯ ಸರಣಿಯಲ್ಲಿ ಹಲವು ಕಡೆ ಭಾಗವಹಿಸಿದ ಪರಿಣಿತ ಭಾರತೀಯ ರೇಸರ್

● ಚೇತನ್ ಸುರಿನೇನಿ (ಭಾರತ)- ಪೇಸ್ ಮತ್ತು ಸ್ಥಿರತೆಗೆ ಖ್ಯಾತಿ ಪಡೆದ ಉದಯೋನ್ಮುಖ ಸ್ಥಳೀಯ ಸ್ಪರ್ಧಿ

● ಫ್ಯಾಬಿಯೆನ್ನ್ ವೊಹ್ಲ್ ವೆಂಡ್ (ಲೀಷ್ಟೆನ್ ಸ್ಟೀನ್)- ಡಬ್ಲ್ಯೂ ಸೀರೀಸ್ ಮತ್ತು ಫೆರಾರಿ ಚಾಲೆಂಜ್ ಸ್ಟಾರ್

ಕೋಲ್ಕತಾ ರಾಯಲ್ ಟೈಗರ್ಸ್ (ಮಾಲೀಕರು: ಸೌರವ್ ಗಂಗೂಲಿ)

● ಟಾಮ್ ಕ್ಯಾನಿಂಗ್ (ಯು.ಕೆ.)- ಸಹಿಷ್ಣುತೆ ಮತ್ತು ರೇಸಿಂಗ್ ಅನುಭವದ ಬ್ರಿಟಿಷ್ ಜಿಟಿ ಚಾಂಪಿಯನ್

● ಸೊಹಿಲ್ ಶಾ (ಭಾರತ) –ಎಫ್4 ಇಂಡಿಯಾ ಪೋಡಿಯಂ ಫಿನಿಷರ್ ಮತ್ತು ಸ್ಥಿರವಾದ ಐ.ಆರ್.ಎಲ್. ಸಾಧಕರು

● ಸಂದೀಪ್ ಕುಮಾರ್ (ಭಾರತ)- ರಾಷ್ಟ್ರೀಯ ಚಾಂಪಿಯನ್ ಶಿಪ್ ಗೆಲುವು ಕಂಡ ರಿಟರ್ನಿಂಗ್ ಚಾಲಕರು

● ಅಲೆಕ್ಸಾಂಡರ್ ಹರ್ವೆ (ಫ್ರಾನ್ಸ್)- ಸದೃಢ ರೇಸ್ ಕ್ರಾಫ್ಟ್ ಹೊಂದಿರುವ ಎಫ್4 ಮತ್ತು ಯೂರೋಕಪ್ ಸ್ಫರ್ಧಿ

ಕಿಚ್ಚಾಸ್ ಕಿಂಗ್ಸ್ ಬೆಂಗಳೂರು (ಮಾಲೀಕರು: ಸುದೀಪ್ ಕಿಚ್ಚ)

● ನೀಲ್ ಜನಿ (ಸ್ವಿಟ್ಜರ್ ಲೆಂಡ್)- ಲೆ ಮ್ಯಾನ್ಸ್ ವಿಜೇತರು ಮತ್ತು ಮಾಜಿ ಎಫ್1 ಟೆಸ್ಟ್ ಡ್ರೈವರ್

● ರುಹಾನ್ ಆಳ್ವಾ (ಭಾರತ) – ಬೆಂಗಳೂರಿನ ಯುವ ಪ್ರತಿಭೆ ಮತ್ತು ಎಫ್4 ಇಂಡಿಯಾ ಮುಂಚೂಣಿಯ ಪ್ರತಿಭೆ

● ಕೈಲ್ ಕುಮಾರನ್ (ಭಾರತ)- ರಾಷ್ಟ್ರೀಯ ಕಾರ್ಟಿಂಗ್ ಮತ್ತು ಎಫ್4 ಪ್ರತಿಭೆ

● ಜೆಮ್ ಹೆಪ್ ವರ್ಥ್ (ಯು.ಕೆ.)- ಬ್ರಿಟಿಷ್ ಎಂಡುರೆನ್ಸ್ ಮತ್ತು ಜಿಟಿ ರೇಸಿಂಗ್ ಚಾಲಕರು

ಚೆನ್ನೈ ಟರ್ಬೊ ರೈಡರ್ಸ್ (ಮಾಲೀಕರು- ಕೀರ್ತಿವಾಸನ್)

● ಅಕ್ವಿಲ್ ಅಲಿಭಾಯ್ (ಕೀನ್ಯಾ)- ಫಾರ್ಮುಲಾ 4 ಯುಎಇ ರೇಸ್ ವಿಜೇತರಾಗಿದ್ದು ಸದೃಢ ಅಂತಾರಾಷ್ಟ್ರೀಯ ಕುಟುಂಬ

● ಶಿಬಿನ್ ಯೂಸಫ್ (ಭಾರತ)- ಭಾರತದ ಸರ್ಕ್ಯೂಟ್ ರೇಸಿಂಗ್ ಸ್ಥಿರವಾದ ಸಾಧಕರು

● ಟಿಜಿಲ್ ರಾವ್ (ಭಾರತ)- ಭಾರತದ ಹೊಸ ಅಲೆಯ ಸಿಂಗಲ್-ಸೀಟರ್ ಪ್ರತಿಭೆ

● ಲಾರಾ ಕ್ಯಾಂಪ್ಸ್ ಟೊರ್ರಾಸ್ (ಸ್ಪೇನ್)- ಫೆರಾರಿ ಡ್ರೈವರ್ ಅಕಾಡೆಮಿ ಅಲುಮ್ನಾ ಮತ್ತು ವಿಶಿಷ್ಟ ಕಾರ್ಟಿಂಗ್ ಗ್ರಾಜುಯೇಟ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net