

ದೆಹಲಿ: ಕರ್ನಾಟಕ ಮೂಲದ ಟೀಂ ಇಂಡಿಯಾದ ಸ್ಟಾರ್ ಬೌಲರ್ ಪ್ರಸಿದ್ಧ್ ಕೃಷ್ಣ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಬಹುಕಾಲದ ಗೆಳತಿ ರಚನಾ ಜತೆ ಜೂನ್ 6ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ರಚನಾ ಕಂಪ್ಯೂಟರ್ ಸೈನ್ ಇಂಜಿನಿಯರ್ ಆಗಿದ್ದು, ಅಮೇರಿಕಾದ ಟೆಕ್ಸಾಸ್ನಲ್ಲಿ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕ ಮೂಲದ ಪ್ರಸಿದ್ಧ್ ಕೃಷ್ಣ, ರಚನಾಳನ್ನು ದಕ್ಷಿಣ ಭಾರತದ ಸಾಂಪ್ರದಾಯಿಕ ಶೈಲಿಯಲ್ಲಿ ಗುರುವಾರದಂದು ಮದುವೆಯಾಗಿದ್ದಾರೆ. ಇನ್ನು, ಜಸ್ಟೀತ್ ಬುಮ್ರಾ, ಶ್ರೇಯಸ್ ಅಯ್ಯರ್, ದೇವದತ್ ಪಡಿಕ್ಕಲ್, ಮಾಯಂಕ್ ಅಗರ್ವಾಲ್ ಸೇರಿದಂತೆ ಭಾರತ ತಂಡದ ಸಹ ಆಟಗಾರರು ಹಾಗೂ ಅನೇಕ ಗಣ್ಯರು ಮದುವೆಗೆ ಆಗಮಿಸಿದ್ದರು.
2022ರ ಆಗಸ್ಟ್ನಲ್ಲಿ ಭಾರತ-ಜಿಂಬಾಬ್ವೆ ಏಕದಿನ ಪ್ರವಾಸದ ನಂತರ ಕೃಷ್ಣ ಸ್ಪರ್ಧಾತ್ಮಕ ಕ್ರಿಕೆಟ್ನಲ್ಲಿ ಕಾಣಿಸಿಕೊಂಡಿಲ್ಲ. ಕರ್ನಾಟಕ ಮೂಲದ ವೇಗಿ ಶಸ್ತ್ರ ಚಿಕಿತ್ಸೆಯಿಂದ ಇನ್ನೂ ಚೇತರಿಸಿಕೊಳ್ಳುತ್ತಿದ್ದು, 2023ರ ವಿಶ್ವಕಪ್ಗೂ ಮುನ್ನ ತಂಡಕ್ಕೆ ಮರಳಲು ಯತ್ನಿಸುತ್ತಿದ್ದಾರೆ. ಭಾರತ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುವ ಪ್ರಸಿದ್ಧ್ ಕೃಷ್ಣಾ ಬಲಗೈ ವೇಗಿಯಾಗಿದ್ದು, 14 ಏಕದಿನ ಅಂತರಾಷ್ಟ್ರೀಯ ಪಂದ್ಯಗಳಲ್ಲಿ 25 ವಿಕೆಟ್ ಪಡೆದಿದ್ದಾರೆ.(ಏಜೆನ್ಸೀಸ್)