ಮರ್ಸಿಡಿಸ್​ ಬೆಂಜ್​ ಕಾರು ಖರೀದಿಸಿದ ಅಜಿಂಕ್ಯ ರಹಾನೆ; ಇದರ ಮೊತ್ತ ಕೇಳಿದರೆ ಶಾಕ್​ ಆಗುವುದಂತು ಖಂಡಿತಾ

Ajinkya Rahane
Published on

ಮುಂಬೈ: ಟೀಂ ಇಂಡಿಯಾದ ಹಿರಿಯ ಆಟಗಾರ ಅಜಿಂಕ್ಯ ರಹಾನೆ ಪ್ರಸ್ತುತ ರಣಜಿ ಟ್ರೋಫಿಯಲ್ಲಿ ಬ್ಯುಸಿ ಇದ್ದು, ಮುಂಬೈ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ರಣಜಿ ಟೂರ್ನಿಯ ಪಂದ್ಯದ ವೇಳೆ ಅಜಿಂಕ್ಯ ರಹಾನೆ ಅಭಿಮಾನಿಗಳಿಗೆ ಸರ್​ಪ್ರೈಸ್​ ನೀಡಿದ್ದು, ಎಲ್ಲರ ಗಮನ ಸೆಳೆದಿದೆ.

ದುಬಾರಿ ಬೆಲೆಯ ಮರ್ಸಿಡಿಸ್ ಬೆಂಜ್ ಮೆಬ್ಯಾಕ್ GLS 600 ಕಾರು ಖರೀದಿಸುವ ಮೂಲಕ ಅಜಿಂಕ್ಯ ರಹಾನೆ ಎಲ್ಲರ ಗಮನ ಸೆಳೆದಿದ್ದಾರೆ. ಅಜಿಂಕ್ಯ ರಹಾನೆ ಖರೀದಿಸಿರುವ ಕಾರಿನ ಎಕ್ಸ್ ಶೋ ರೂಂ ಬೆಲೆ 3.25 ಲಕ್ಷ ರೂಪಾಯಿ ಎಂದು ಹೇಳಲಾಗಿದೆ.

Ajinkya Rahane

ಅಜಿಂಕ್ಯ ರಹಾನೆ ಬಳಿ ಕೆಲ ಐಷಾರಾಮಿ ಕಾರುಗಳಿವೆ. ರಹಾನೆ ಇದುವರೆಗೆ ಹೆಚ್ಚಾಗಿ BMW 6 ಸೀರಿಸ್‌ನ 630i M ಸ್ಪೋರ್ಟ್ಸ್ ಕಾರು ಹೆಚ್ಚಾಗಿ ಬಳಸಿರುವುದನ್ನು ನೋಡಬಹುದಾಗಿದೆ. ಇದರ ಜೊತೆಗೆ ಆಡಿ ಕ್ಯೂ5 ಕಾರನ್ನೂ ಹೊಂದಿದ್ದಾರೆ. ಇಷ್ಟೇ ಅಲ್ಲ ರಹಾನೆ ಖರೀದಿಸಿದ ಮೊದಲ ಕಾರು ಮಾರುತಿ ಸುಜುಕಿ ವ್ಯಾಗನ್ಆರ್ ಕಾರು ಕೂಡ ಇಟ್ಟುಕೊಂಡಿದ್ದಾರೆ.

ಕಳೆದ ವರ್ಷ ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನದ ಹೊರತ್ತಾಗಿಯೂ ಅಜಿಂಕ್ಯ ರಹಾನೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಪ್ರಸ್ತುತ ರಣಜಿ ಟೂರ್ನಿಯಲ್ಲಿ ಮುಂಬೈ ತಂಡವನ್ನು ಮುನ್ನಡೆಸುತ್ತಿರುವ ರಹಾನೆ ರನ್​ ಗಳಿಸಲು ಪರದಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net