ಏಕದಿನ ಸರಣಿಯಲ್ಲಿ ಗಾಯಗೊಂಡ ಋತುರಾಜ್​ ಗಾಯಕ್ವಾಡ್​ ಟೆಸ್ಟ್​ ಸರಣಿಯಿಂದ ಔಟ್​!

rutu web
Published on

ಪಾರ್ಲ್​: ಆರಂಭಿಕ ಋತುರಾಜ್​ ಗಾಯಕ್ವಾಡ್​ ಕೈಬೆರಳಿನ ಮೂಳೆ ಮುರಿತದಿಂದಾಗಿ ದಣ ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿಯಿಂದ ಹೊರಬಿದ್ದಿದ್ದಾರೆ. ಈ ವಾರ ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಏಕದಿನ ಪಂದ್ಯದ ವೇಳೆ ಕ್ಯಾಚ್​ ಒಂದನ್ನು ಹಿಡಿಯುವ ಪ್ರಯತ್ನದ ವೇಳೆ ಋತುರಾಜ್​ ಗಾಯಗೊಂಡಿದ್ದರು. ಇದರಿಂದಾಗಿ ಅವರು ಕೊನೇ ಏಕದಿನ ಪಂದ್ಯವನ್ನೂ ತಪ್ಪಿಸಿಕೊಂಡಿದ್ದರು. ಭಾರತ ಎ ತಂಡದಲ್ಲಿರುವ ಅಭಿಮನ್ಯು ಈಶ್ವರನ್​, ಋತುರಾಜ್​ ಸ್ಥಾನವನ್ನು ತುಂಬುವ ನಿರೀಕ್ಷೆ ಇದೆ.

ಅಭ್ಯಾಸ ಪಂದ್ಯದಲ್ಲಿ ಗಿಲ್​, ಸರ್ಫ್ರಾಜ್​ ಶತಕ

ಟೆಸ್ಟ್​ ಸರಣಿಗೆ ಪೂರ್ವಭಾವಿಯಾಗಿ ಭಾರತ ತಂಡದ ಆಟಗಾರರು ಪ್ರಿಟೋರಿಯಾದ ಟಕ್ಸ್​ ಓವಲ್​ನಲ್ಲಿ ಆಡಿದ ತ್ರಿದಿನ ಅಭ್ಯಾಸ ಪಂದ್ಯದಲ್ಲಿ ಆರಂಭಿಕ ಶುಭಮಾನ್​ ಗಿಲ್​ ಮತ್ತು ಸರ್ಫ್ರಾಜ್​ ಖಾನ್​ ಶತಕ ಸಿಡಿಸಿ ಮಿಂಚಿದ್ದಾರೆ. ರೋಹಿತ್​ ಶರ್ಮ ನೇತೃತ್ವದ ಭಾರತ ತಂಡ ಮತ್ತು ಭಾರತ ಎ ತಂಡಗಳ ನಡುವೆ ನಡೆದ ಪಂದ್ಯದಲ್ಲಿ 3ನೇ ಕ್ರಮಾಂಕದಲ್ಲಿ ಆಡಿದ ಗಿಲ್​, ಪಂದ್ಯದ 2ನೇ ದಿನದಾಟದಲ್ಲಿ ಶತಕ ಸಿಡಿಸಿದರು. ಮತ್ತೋರ್ವ ಆಟಗಾರ ಯಶಸ್ವಿ ಜೈಸ್ವಾಲ್​ ಕೂಡ ಅರ್ಧಶತಕ ಬಾರಿಸಿ ಗಮನಸೆಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net