ಡಿಎಲ್ ನಿಯಮದನ್ವಯ 6 ರನ್‌ಗಳಿಂದ ಸೋತ ಭಾರತ ಮಹಿಳಾ ತಂಡ

poonam raut for web
Published on

ಲಖನೌ: ಪ್ರವಾಸಿ ದಕ್ಷಿಣ ಆಫ್ರಿಕಾ ತಂಡಕ್ಕೆ ತಿರುಗೇಟು ನೀಡಿದ ಗುಂಗಿನಲ್ಲಿದ್ದ ಭಾರತ ಮಹಿಳಾ ತಂಡ ಮತ್ತೊಮ್ಮೆ ಮುಗ್ಗರಿಸಿದೆ. ಶುಕ್ರವಾರ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಮಿಥಾಲಿ ರಾಜ್ ಡಕ್‌ವರ್ಥ್ ಲೂಯಿಸ್ ನಿಯಮದನ್ವಯ 6 ರನ್‌ಗಳಿಂದ ಶರಣಾಯಿತು. ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ಭಾರತ 1-2 ರಿಂದ ಹಿನ್ನಡೆ ಅನುಭವಿಸಿತು. ಸರಣಿ ಜಯಿಸಲು ಉಳಿದ ಎರಡೂ ಪಂದ್ಯಗಳಲ್ಲೂ ಭಾರತ ಗೆಲುವಿನ ಒತ್ತಡದಲ್ಲಿದೆ.

ಅಟಲ್ ಬಿಹಾರಿ ವಾಜಪೇಯಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಭಾರತ ತಂಡ, ಪೂನಂ ರಾವತ್ (77ರನ್, 108 ಎಸೆತ, 11 ಬೌಂಡರಿ) ಅರ್ಧಶತಕದಾಟದ ನೆರವಿನಿಂದ ಭಾರತ ತಂಡ 5 ವಿಕೆಟ್‌ಗೆ 248 ರನ್ ಪೇರಿಸಿತು. ಪ್ರತಿಯಾಗಿ ದಕ್ಷಿಣ ಆಫ್ರಿಕಾ ತಂಡ, 46.3 ಓವರ್‌ಗಳಲ್ಲಿ 4 ವಿಕೆಟ್‌ಗೆ 223 ರನ್ ಪೇರಿಸಿದ್ದ ವೇಳೆ ಪಂದ್ಯಕ್ಕೆ ಮಳೆ ಅಡ್ಡಿಯುಂಟು ಮಾಡಿತು. ಈ ವೇಳೆ ದಕ್ಷಿಣ ಆಫ್ರಿಕಾ ತಂಡ ಡಿಎಲ್ ನಿಯಮದನ್ವಯ 6 ರನ್ ಮುನ್ನಡೆ ಸಾಧಿಸಿದ್ದರಿಂದ ವಿಜಯಿ ಎಂದು ಘೋಷಿಸಲಾಯಿತು.

ಭಾರತ ಮಹಿಳಾ ತಂಡ: 5 ವಿಕೆಟ್‌ಗೆ 248 (ಸ್ಮತಿ ಮಂದನಾ 25, ಪೂನಂ ರಾವತ್ 77, ಮಿಥಾಲಿ ರಾಜ್ 36, ಹರ್ಮಾನ್‌ಪ್ರೀತ್ ಕೌರ್ 36, ದೀಪ್ತಿ ಶರ್ಮ 36*, ಶಬ್ನಿಮ್ ಇಸ್ಮಾಯಿಲ್ 46ಕ್ಕೆ 2, ಮಾರಿಜನ್ನೆ ಕಾಪ್ 47ಕ್ಕೆ 1), ದಕ್ಷಿಣ ಆಫ್ರಿಕಾ ತಂಡ: 46.3 ಓವರ್‌ಗಳಲ್ಲಿ 4 ವಿಕೆಟ್‌ಗೆ 223 (ಲಿಜೆಲ್ಲೆ ಲೀ 132*, ಮಿಗ್ನೊನ್ ಡು ಪ್ರೇಜ್ 37, ಜೂಲನ್ ಗೋಸ್ವಾಮಿ 20ಕ್ಕೆ 2, ರಾಜೇಶ್ವರಿ ಗಾಯಕ್ವಾಡ್ 39ಕ್ಕೆ 1, ದೀಪ್ತಿ ಶರ್ಮ 39ಕ್ಕೆ 1).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net