

ಲಖನೌ: ಯುವ ಆಟಗಾರ್ತಿಯರ ವೈಫಲ್ಯದಿಂದಾಗಿ ಮತ್ತೊಮ್ಮೆ ಬೆಲೆತೆತ್ತ ಭಾರತ ಮಹಿಳಾ ತಂಡ 5ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲೂ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡಕ್ಕೆ ಶರಣಾಯಿತು. ಅಟಲ್ ಬಿಹಾರಿ ವಾಜಪೇಯಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮಿಥಾಲಿ ರಾಜ್ ಪಡೆ 5 ವಿಕೆಟ್ಗಳಿಂದ ಶರಣಾಯಿತು. ಈ ಮೂಲಕ ಭಾರತ ಸರಣಿ ಸೋಲಿನ ಅಂತರವನ್ನು 1-4ಕ್ಕೆ ಹಿಗ್ಗಿಸಿಕೊಂಡಿತು. ಇದರಿಂದ ಭಾರತಕ್ಕೆ ಪ್ರಸಕ್ತ ವರ್ಷದ ಏಕದಿನ ವಿಶ್ವಕಪ್ ಟೂರ್ನಿಗೆ ತಂಡದ ಸಂಯೋಜನೆಗೆ ದೊಡ್ಡ ಹಿನ್ನಡೆಯುಂಟಾಗಿದೆ.
ಮೊದಲು ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ, ನಾಯಕಿ ಮಿಥಾಲಿ ರಾಜ್ (79*ರನ್, 104 ಎಸೆತ, 8 ಬೌಂಡರಿ, 1 ಸಿಕ್ಸರ್) ಏಕಾಂಗಿ ನಿರ್ವಹಣೆ ನಡುವೆಯೂ 49.3 ಓವರ್ಗಳಲ್ಲಿ 188 ರನ್ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ದಕ್ಷಿಣ ಆಫ್ರಿಕಾ ತಂಡ 48.2 ಓವರ್ಗಳಲ್ಲಿ 5 ವಿಕೆಟ್ಗೆ 189 ರನ್ಗಳಿಸಿ ಗೆಲುವಿನ ನಗೆ ಬೀರಿತು.
ಭಾರತ ಮಹಿಳಾ ತಂಡ: 49.3 ಓವರ್ ಗಳಲ್ಲಿ 188 (ಮಿಥಾಲಿ ರಾಜ್ 79*, ಹರ್ಮಾನ್ಪ್ರೀತ್ ಕೌರ್ 30, ನಡಿನೆ ಡಿ ಕ್ಲೆರ್ಕ್ 35ಕ್ಕೆ 3, ನೊಡುಮಿಸೊ ಶಾನ್ಗಾಸೆ 43ಕ್ಕೆ 2, ತುಮಿ ಸೆಖುಖುನೆ 26ಕ್ಕೆ 2), ದಕ್ಷಿಣ ಆಫ್ರಿಕಾ ಮಹಿಳಾ ತಂಡ: 48.2 ಓವರ್ಗಳಲ್ಲಿ 5 ವಿಕೆಟ್ಗೆ 189 (ಮಿಗ್ನೊನ್ ಡು ಪ್ರೇಜ್ 57, ಅನ್ನೆಕೆ ಬಾಷ್ 58, ಮಾರಿಜ್ನೆ ಕಾಪ್ 36*, ನಡಿನೆ ಡಿ ಕ್ಲೆರ್ಕ್ 19, ರಾಜೇಶ್ವರಿ ಗಾಯಕ್ವಾಡ್ 13ಕ್ಕೆ 3, ಡಿ.ಹೇಮಲತಾ 44ಕ್ಕೆ 1, ಸಿ ಪ್ರತ್ಯುಷಾ 60ಕ್ಕೆ 1).
ಮುಂದಿನ ಸರಣಿ: ಟಿ20
ಆರಂಭ: ಶನಿವಾರ (ರಾತ್ರಿ 7 ಗಂಟೆಗೆ)
ನೇರ ಪ್ರಸಾರ: ಸ್ಟಾರ್ಸ್ಪೋರ್ಟ್ಸ್-2