ಕ್ಷಣಾರ್ಧದಲ್ಲೇ ಮಾರಾಟವಾಯ್ತು ಭಾರತ-ಪಾಕ್​ Champions Trophy ಮ್ಯಾಚ್ ಟಿಕೆಟ್​; ಒಂದು ಟಿಕೆಟ್​ನ ಬೆಲೆ ಇಷ್ಟೊಂದಾ?

India Pakistan
Published on

ದುಬೈ: ಫೆಬವರಿ 19ರಿಂದ ಮಾರ್ಚ್​ 09ರವರೆಗೆ ನಡೆಯಲಿರುವ ಪಾಕಿಸ್ತಾನ ಹಾಗೂ ದುಬೈ (ಭಾರತದ ಪಂದ್ಯಗಳು ಮಾತ್ರ)  ಚಾಂಪಿಯನ್ಸ್ ಟ್ರೋಫಿಗೆ (Champions Trophy) ಈಗಾಗಲೇ ಭರದ ಸಿದ್ಧತೆಗಳು ನಡೆಯುತ್ತಿದ್ದು, ಟೂರ್ನಿ ಅರಂಭಕ್ಕೆ ಕ್ರೀಡಾಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇನ್ನೂ ಫೆಬ್ರವರಿ 23ರಂದು ಟೂರ್ನಿಯ ಹೈವೋಲ್ಟೇಜ್​ ಪಂದ್ಯ ನಡೆಯಲಿದ್ದು, ಈ ಪಂದ್ಯವನ್ನು ವೀಕ್ಷಿಸಲು ಇಡೀ ವಿಶ್ವವೇ ಎದುರು ನೋಡುತ್ತಿದೆ.

ಭಾರತ ಹಾಗೂ ಪಾಕಿಸ್ತಾನ ನಡುವಿನ ಚಾಂಪಿಯನ್ಟ್ ಟ್ರೋಫಿ (Champions Trophy) ಪಂದ್ಯವು ಫೆಬ್ರವರಿ 23ರಂದು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಪಂದ್ಯದ ಟಿಕೆಟ್​ ಕ್ಷಣಾರ್ಧದಲ್ಲಿ ಮಾರಾಟವಾಗುವ ಮೂಲಕ ದಾಖಲೆ ಬರೆದಿದೆ. ಈ ಬಗ್ಗೆ ದುಬೈನಲ್ಲಿ ನೆಲೆಸಿರುವ ಭಾರತದ ಕ್ರಿಕೆಟಿಗರೊಬ್ಬರು ಮಾತನಾಡಿದ್ದು, ದುಬಾರಿ ಬೆಲೆಯ ವಿರುದ್ಧ ಕಿಡಿಕಾರಿದ್ದಾರೆ.

Champions Trophy

ಈ ಬಗ್ಗೆ ಮಾತನಾಡಿರುವ ಸುಧಾಶ್ರೀ ಎಂಬುವವರು, ನಾನು ಎಂದಿನಂತೆ ಈ ಬಾರಿಯು ಉದ್ದನೆಯ ಕ್ಯೂ ಇರುತ್ತದೆ ಎಂದು ಭಾವಿಸಿದ್ದೆ. ಆದರೆ, ಟಿಕೆಟ್​ಗಳು ಕ್ಷಣಮಾತ್ರದಲ್ಲಿ ಮಾರಾಟವಾದವು. ನಾನು ಟಿಕೆಟ್​ ಖರೀದಿಸಲು ಮುಂದಾದಾಗ ದುಬಾರಿ ಬೆಲೆಯ ಎರಡು ಕ್ಯಾಟಗರಿಗಳು ಮಾತ್ರ ಉಳಿದಿದ್ದವು. Dh2,000 (ಅಂದಾಜು Rs 47,434) ಪ್ಲಾಟಿನಂ ಮತ್ತು Dh5,000 (ಅಂದಾಜು Rs. 1.8 ಲಕ್ಷ) ಗ್ರ್ಯಾಂಡ್ ಸೇರಿದಂತೆ ಎಲ್ಲಾ ವಿಭಾಗಗಳಲ್ಲಿ ಮಾರಾಟವಾಗಿದ್ದವು ಎಂದು ಹೇಳಿದ್ದಾರೆ. 

ಐಸಿಸಿ ಹಾಗೂ ಏಷ್ಯಾಕಪ್​ನಂತಹ ಟೂರ್ನಿಗಳಲ್ಲಿ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾದಾಗಲೂ ಟಿಆರ್​ಪಿ ಹಾಗೂ ವೀಕ್ಷಣೆಯ ವಿಚಾರದಲ್ಲಿ ದಾಖಲೆ ಬರೆದಿದೆ. ಟಿ20 ವಿಶ್ವಕಪ್​ ಬಳಿಕ ಉಭಯ ತಂಡಗಳು ಚಾಂಪಿಯನ್ಸ್ ಟ್ರೋಫಿಯಲ್ಲಿ (Champions Trophy) ಮುಖಾಮುಖಿಯಾಗುತ್ತಿದ್ದು, ಹೈವೋಲ್ಟೇಜ್​ ಪಂದ್ಯವನ್ನು ವೀಕ್ಷಿಸಲು ಕ್ರೀಡಾಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net