ನಾವು ಭಾರತವನ್ನು... ಟಿ20 ಪಂದ್ಯದಲ್ಲಿ ಸೋಲುಂಡ ಬೆನ್ನಲ್ಲೇ ಜಪಾನ್​ ಮಾಜಿ ಸಚಿವರಿಂದ ಅಚ್ಚರಿ ಹೇಳಿಕೆ..! India vs Japan

ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧದ 75ನೇ ವಾರ್ಷಿಕೋತ್ಸವದ ಅಂಗವಾಗಿ ಸಾನೋದಲ್ಲಿ ನಿನ್ನೆ (ಸೆ.22) ಏಕೈಕ ಜಪಾನ್-ಭಾರತ ಟಿ20 ಪಂದ್ಯವನ್ನು ಆಯೋಜಿಸಲಾಗಿತ್ತು.
India vs Japan
ಭಾರತದ ವಿರುದ್ಧದ ರೋಚಕ ಪಂದ್ಯದಲ್ಲಿ ಜಪಾನ್ ತಂಡದ ದಿಟ್ಟ ಹೋರಾಟ ಹಾಗೂ ಮೆಚ್ಚುಗೆ ವ್ಯಕ್ತಪಡಿಸಿದ ಮಾಜಿ ವಿದೇಶಾಂಗ ಸಚಿವ ತಾರೋ ಕೋನೋ
Published on

India vs Japan : ಏಷ್ಯನ್ ಗೇಮ್ಸ್‌ಗೂ ಮುನ್ನ ಜಪಾನ್ ಕ್ರಿಕೆಟ್ ತಂಡವು ಭಾರತದ ವಿರುದ್ಧ ಪ್ರದರ್ಶಿಸಿದ ಅತ್ಯುತ್ತಮ ಆಟವನ್ನು ಕಂಡು ಜಪಾನ್‌ನ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ ನಾಯಕ ಹಾಗೂ ಮಾಜಿ ವಿದೇಶಾಂಗ ಸಚಿವ ತಾರೋ ಕೋನೋ ತೀವ್ರ ಅಚ್ಚರಿ ಮತ್ತು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಭಾರತವು ತಮ್ಮ ತಂಡವನ್ನು ಸುಲಭವಾಗಿ ಸೋಲಿಸುತ್ತದೆ ಎಂದು ಭಾವಿಸಿದ್ದೆವು ಆದರೆ, ಜಪಾನ್ ತಂಡವು ಭಾರತಕ್ಕೆ ತೀವ್ರವಾದ ಪೈಪೋಟಿ ನೀಡಿತು ಎಂದು ಕೋನೋ ಅಭಿಪ್ರಾಯಪಟ್ಟಿದ್ದಾರೆ.

ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧದ 75ನೇ ವಾರ್ಷಿಕೋತ್ಸವದ ಅಂಗವಾಗಿ ಸಾನೋದಲ್ಲಿ ನಿನ್ನೆ (ಸೆ.22) ಏಕೈಕ ಜಪಾನ್-ಭಾರತ ಟಿ20 ಪಂದ್ಯವನ್ನು ಆಯೋಜಿಸಲಾಗಿತ್ತು. ಮಳೆಯ ಕಾರಣದಿಂದಾಗಿ ಈ ಪಂದ್ಯವನ್ನು ಐದು ಓವರ್‌ಗಳಿಗೆ ಕಡಿತಗೊಳಿಸಲಾಯಿತು. ಕೊನೆಯ ಎಸೆತದವರೆಗೆ ಭಾರತವನ್ನು ಒತ್ತಡದಲ್ಲಿರಿಸಿದ ಜಪಾನ್ ತಂಡವು ಕೇವಲ ಎರಡು ರನ್‌ಗಳ ಅಂತರದಿಂದ ಮಾತ್ರ ಸೋಲನ್ನುಪ್ಪಿಕೊಂಡಿತು.

Also Read
ಜಪಾನ್ ವಿರುದ್ಧದ ರೋಚಕ ಪಂದ್ಯದಲ್ಲಿ ಗೆದ್ದು ಮುಖಭಂಗ ತಪ್ಪಿಸಿಕೊಂಡ ಟೀಮ್ ಇಂಡಿಯಾ! Team India
India vs Japan

ಸಾನೋದ ನಿಧಾನಗತಿಯ ಪಿಚ್‌ನಲ್ಲಿ ಜಪಾನ್ ಬೌಲರ್‌ಗಳು ಭಾರತೀಯ ಬ್ಯಾಟ್ಸ್‌ಮನ್‌ಗಳ ವಿರುದ್ಧ ಉತ್ತಮ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದರು. ಜಪಾನ್ ಬೌಲಿಂಗ್ ದಾಳಿಯ ಮುಂದೆ ಭಾರತವು ನಿಗದಿತ ಐದು ಓವರ್‌ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು ಕೇವಲ 32 ರನ್‌ಗಳನ್ನು ಮಾತ್ರ ಗಳಿಸಲು ಶಕ್ತವಾಯಿತು. ಭಾರತದ ಪರವಾಗಿ ಶ್ರೇಯಸ್ ಅಯ್ಯರ್ ಅತಿ ಹೆಚ್ಚು (16) ರನ್ ಗಳಿಸಿದರೆ, ಜಪಾನ್ ಪರವಾಗಿ ಚಾರ್ಲಿ ಹರಾ-ಹಿಂಜೆ ಎರಡು ವಿಕೆಟ್ ಹಾಗೂ ಇಬ್ರಾಹಿಂ ತಕಾಹಶಿ ಒಂದು ವಿಕೆಟ್ ಪಡೆದರು.

33 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಜಪಾನ್ ತಂಡವು ಆರಂಭದಲ್ಲಿ ಏಳು ರನ್‌ಗಳೊಳಗೆ ಎರಡು ವಿಕೆಟ್ ಕಳೆದುಕೊಂಡಿತು. ನಂತರ ಜೊತೆಗೂಡಿದ ಕೆಂಡಾಲ್ ಕಡೋವಾಕಿ-ಪ್ಲೆಮಿಂಗ್ ಮತ್ತು ಬೆಂಜಮಿನ್ ಇಟೊ-ಡೇವಿಸ್ ಇನ್ನಿಂಗ್ಸ್ ಮುನ್ನಡೆಸಿದರೂ, ವಾಷಿಂಗ್ಟನ್ ಸುಂದರ್ ಬೌಲಿಂಗ್‌ನಲ್ಲಿ ಆ ಜೊತೆಯಾಟ ಮುರಿಯಿತು. ಅಂತಿಮ ಓವರ್‌ನಲ್ಲಿ ಜಪಾನ್ ಜಯಗಳಿಸಲು ಎಂಟು ರನ್‌ಗಳ ಅವಶ್ಯಕತೆಯಿತ್ತು ಆದರೆ, ಅಕ್ಷರ್ ಪಟೇಲ್ ಅವರ ಅತ್ಯುತ್ತಮ ಬೌಲಿಂಗ್ ದಾಳಿಯಿಂದಾಗಿ ಜಪಾನ್ ಮೂರು ವಿಕೆಟ್‌ಗೆ 30 ರನ್ ಗಳಿಸಿ ಕೇವಲ ಎರಡು ರನ್‌ಗಳಿಂದ ಸೋಲುಂಡಿತು.

Also Read
ಸೋತಿದ್ದಲ್ಲ ಬೇಜಾರು... ಟೀಮ್ ಇಂಡಿಯಾ ಗೆಲುವಿನ ಬೆನ್ನಲ್ಲೇ ಜಪಾನ್​ ಕ್ಯಾಪ್ಟನ್ ಅಚ್ಚರಿ ಹೇಳಿಕೆ​ | Vaibhav Sooryavanshi
India vs Japan

ಭವಿಷ್ಯದಲ್ಲಿ ಜಪಾನ್‌ನಲ್ಲಿ ಕ್ರಿಕೆಟ್ ಕ್ರೀಡೆಯು ಮತ್ತಷ್ಟು ಜನಪ್ರಿಯತೆ ಪಡೆಯಲಿದೆ ಎಂದು ತಾರೋ ಕೋನೋ ಆಶಾವಾದ ವ್ಯಕ್ತಪಡಿಸಿದ್ದಾರೆ. ಕ್ರಿಕೆಟ್ ಒಲಿಂಪಿಕ್ಸ್‌ನ ಭಾಗವಾಗಿರುವುದರಿಂದ ಮುಂದಿನ ದಿನಗಳಲ್ಲಿ ಜಪಾನ್ ತಂಡಕ್ಕೂ ಒಲಿಂಪಿಕ್ಸ್‌ನಲ್ಲಿ ಉತ್ತಮ ಅವಕಾಶವಿರುವ ಭರವಸೆ ಮೂಡಿದೆ ಎಂದು ಕೋನೋ ತಿಳಿಸಿದ್ದಾರೆ. ಭಾರತದ ಬೌಲಿಂಗ್ ವಿಭಾಗದಲ್ಲಿ ವಾಷಿಂಗ್ಟನ್ ಸುಂದರ್ ಎರಡು ವಿಕೆಟ್ ಪಡೆದು ಮಿಂಚಿದರು, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net