ಇಂದಿನಿಂದ ಕಿರಿಯರ ಏಷ್ಯಾಕಪ್ ಕ್ರಿಕೆಟ್, ಭಾರತಕ್ಕೆ ಯುಎಇ ಮೊದಲ ಎದುರಾಳಿ

under 19 asia cup web
Published on

ದುಬೈ: ಮುಂದಿನ ವರ್ಷದ ಕಿರಿಯರ ವಿಶ್ವಕಪ್ ಸಿದ್ಧತೆಯ ದೃಷ್ಟಿಯಿಂದ ಮಹತ್ವದ್ದಾಗಿರುವ 19 ವಯೋಮಿತಿಯ ಏಷ್ಯಾಕಪ್ ಏಕದಿನ ಕ್ರಿಕೆಟ್ ಟೂರ್ನಿ ಗುರುವಾರ ಆರಂಭಗೊಳ್ಳಲಿದ್ದು, ಯಶ್ ಧುಲ್ ಸಾರಥ್ಯದ ಭಾರತ ತಂಡ ಆತಿಥೇಯ ಯುಎಇ ವಿರುದ್ಧ ಮೊದಲ ಪಂದ್ಯ ಆಡಲಿದೆ.

ಭಾರತ ತಂಡ ಬಳಿಕ ಡಿಸೆಂಬರ್ 25ರಂದು ಪಾಕಿಸ್ತಾನ ಮತ್ತು ಡಿಸೆಂಬರ್ 27ರಂದು ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ. ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ ಮತ್ತು ಕುವೈಟ್ ತಂಡಗಳು ಬಿ ಗುಂಪಿನಲ್ಲಿವೆ.

ಗುರುವಾರದ ಮತ್ತೊಂದು ಪಂದ್ಯದಲ್ಲಿ ಹಾಲಿ ಕಿರಿಯರ ವಿಶ್ವಕಪ್ ಚಾಂಪಿಯನ್ ಬಾಂಗ್ಲಾದೇಶ ತಂಡ ನೇಪಾಳವನ್ನು ಎದುರಿಸಲಿದೆ. ಪ್ರತಿ ಗುಂಪಿನ ಅಗ್ರ 2 ತಂಡಗಳು ಸೆಮಿಫೈನಲ್‌ಗೇರಲಿದ್ದು, ಡಿಸೆಂಬರ್ 31ರಂದು ಫೈನಲ್ ಪಂದ್ಯ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net