

India: ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ 15 ಆಟಗಾರರ ಒಳಗೊಂಡ ಭಾರತ ತಂಡ ಗುರುವಾರ (ಸೆಪ್ಟೆಂಬರ್,24)ರಂದು ಪ್ರಕಟವಾಗಿದೆ. ಅಲ್ಲದೆ, ಟೆಸ್ಟ್ ತಂಡದಲ್ಲಿ ಸ್ಪರ್ಧೆಯಲ್ಲಿದ್ದ ಶ್ರೇಯಸ್ ಅಯ್ಯರ್ಗೆ ಬೆನ್ನು ನೋವು ಕಾಣಿಸಿಕೊಂಡ ಕಾರಣ ಹೊರಗುಳಿದಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.
ಈ ವಿಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಪಾದದ ಗಾಯದಿಂದಾಗಿ ರಿಷಭ್ ಪಂತ್ ಹೊರಗುಳಿಯಬೇಕಾಯಿತು. ಪಂತ್ ಅನುಪಸ್ಥಿತಿಯಲ್ಲಿ ರವೀಂದ್ರ ಜಡೇಜಾರನ್ನು ಹೊಸ ಉಪನಾಯಕನನ್ನಾಗಿ ಘೋಷಿಸಲಾಗಿದೆ.
ರಿಷಬ್ ಪಂತ್ ಗಾಯದ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್, ರಿಷಭ್ ಪಂತ್ ಈ ಸರಣಿಗೆ ಇನ್ನೂ ಚೇತರಿಸಿಕೊಂಡಿಲ್ಲ. ಮುಂದಿನ ಸರಣಿಗೆ ರಿಷಬ್ ಚೇತರಿಸಿಕೊಳ್ಳುತ್ತಾರೆ ಎಂದು ನಾವು ಆಶಿಸುತ್ತೇವೆ. ಇದಕ್ಕಾಗಿಯೇ ನಾವು ಜಡೇಜಾರನ್ನು ಉಪನಾಯಕನನ್ನಾಗಿ ಆಯ್ಕೆ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಕರುಣ್ ನಾಯರ್ನನ್ನು ಟೆಸ್ಟ್ ತಂಡದಿಂದ ಕೈಬಿಡಲಾಗಿದೆ. ಆಂಗ್ಲರ ವಿರುದ್ಧ ನಾಲ್ಕು ಪಂದ್ಯಗಳಲ್ಲಿ ಕೇವಲ 205 ರನ್ ಗಳಿಸಲಾಷ್ಟೇ ಶಕ್ತರಾದರು. ಕರುಣ್ ಅನುಪಸ್ಥಿತಿಯಲ್ಲಿ, ಇಂಗ್ಲೆಂಡ್ ಸರಣಿಯಿಂದ ಕೈಬಿಡಲಾದ ದೇವದತ್ ಪಡಿಕ್ಕಲ್ರನ್ನು ಆಯ್ಕೆ ಮಾಡಲಾಗಿದೆ.
ಈ ಬಗ್ಗೆ ಮಾತನಾಡಿದ ಅಜಿತ್ ಅಗರ್ಕರ್, ನಾನೂ ಕರುಣ್ ಬಗ್ಗೆ ಹೇಳಬೇಕೆಂದರೆ, ನಾಯರ್ ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಆದರೆ, ಈ ಪಂದ್ಯಗಳ್ಲಿ ಪಡಿಕ್ಕಲ್ ಸ್ವಲ್ಪ ಉತ್ತಮವಾಗಿ ಆಡುತ್ತಾರೆ ಎಂದು ನಾವು ನಿರೀಕ್ಷೀಸಿದ್ದೇವೆ. ನಾವು ಎಲ್ಲರಿಗೂ 15 ರಿಂದ 20 ಟೆಸ್ಟ್ ಪಂದ್ಯಗಳನ್ನು ನೀಡಬೇಕು. ಆದರೆ, ಪಡಿಕ್ಕಲ್ ಟೆಸ್ಟ್ ತಂಡದಲ್ಲಿದ್ದಾರೆ. ಅಲ್ಲದೆ, ಆಸ್ಟ್ರೇಲಿಯಾದಲ್ಲಿ ಟೆಸ್ಟ್ ತಂಡದಲ್ಲಿದ್ದರು. ಪಡಿಕ್ಕಲ್ ಧರ್ಮಶಾಲಾದಲ್ಲಿ ಇಂಗ್ಲೆಂಡ್ ವಿರುದ್ಧ ಆಡಿದ್ದರು, ಅಲ್ಲಿ ಅರ್ಧಶತಕ ಗಳಿಸಿದರು. ಭಾರತ ಎ ತಂಡದೊಂದಿಗೆ ಉತ್ತಮ ಫಾರ್ಮ್ ತೋರಿಸಿದ್ದಾರೆ. ಹೌದು, ಇಂಗ್ಲೆಂಡ್ ಪ್ರವಾಸದಲ್ಲಿ ಕರುಣ್ರಿಂದ ಸ್ವಲ್ಪ ಹೆಚ್ಚಿನದನ್ನು ನಿರೀಕ್ಷಿಸಲಾಗಿದೆ ಎಂದು ಅಗರ್ಕರ್ ಹೇಳಿದರು.
ವಿಡೀಸ್ ವಿರುದ್ಧದ ಸರಣಿಗೆ ಭಾರತ ತಂಡ
ಶುಭಮನ್ ಗಿಲ್ (ಸಿ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್ , ದೇವದತ್ ಪಡಿಕ್ಕಲ್, ಧ್ರುವ ಜುರೆಲ್, ರವೀಂದ್ರ ಜಡೇಜಾ (ವಿಸಿ), ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬುಮ್ರಾ , ಅಕ್ಷರ್ ಪಟೇಲ್, ನಿತೀಶ್ ಕುಮಾರ್ ರೆಡ್ಡಿ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ , ಕುಲದೀಪ್ ಯಾದವ್ (ಏಜೆನ್ಸೀಸ್)