ಏಷ್ಯಾಕಪ್​ನಿಂದ ಪಾಕ್​ ಹೊರಬಿದ್ದ ಬೆನ್ನಲ್ಲೇ ಭಾರತಕ್ಕೆ ಭರ್ಜರಿ ಲಾಭ! ಏಕದಿನ ರ್ಯಾಂಕಿಂಗ್​ನಲ್ಲಿ ಬಡ್ತಿ…

india rank web
Published on

ದುಬೈ: ಪಾಕಿಸ್ತಾನ ತಂಡ ಏಷ್ಯಾಕಪ್​ ಟೂರ್ನಿಯ ಸೂಪರ್-4 ಹಂತದ ನಿರ್ಣಾಯಕ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಸೋಲು ಅನುಭವಿಸಿರುವುದರಿಂದ ಭಾರತ ತಂಡ ಐಸಿಸಿ ಏಕದಿನ ರ್ಯಾಂಕಿಂಗ್​ನಲ್ಲಿ ಲಾಭ ಪಡೆದಿದೆ. ಸೋಲಿನಿಂದಾಗಿ ಪಾಕಿಸ್ತಾನ ತಂಡ ವಿಶ್ವ ನಂ. 1 ಪಟ್ಟದಿಂದ 3ನೇ ಸ್ಥಾನಕ್ಕೆ ಕುಸಿದಿದ್ದರೆ, ಭಾರತ ತಂಡ 3ರಿಂದ 2ನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ಆಸ್ಟ್ರೆಲಿಯಾ ತಂಡ ಮತ್ತೆ ಅಗ್ರಸ್ಥಾನಕ್ಕೇರಿದೆ.

ಪಾಕ್​ ತಂಡದ ಅಂಕ ಈಗ 115ಕ್ಕೆ ಇಳಿಕೆಯಾಗಿದ್ದರೆ, ಭಾರತ 116 ಅಂಕ ಮತ್ತು ಆಸೀಸ್​ 118 ಅಂಕದೊಂದಿಗೆ ಮೊದಲೆರಡು ಸ್ಥಾನದಲ್ಲಿವೆ. ಪಾಕಿಸ್ತಾನಕ್ಕೆ ಇನ್ನು ವಿಶ್ವಕಪ್​ವರೆಗೆ ಯಾವುದೇ ಪಂದ್ಯವಿಲ್ಲ. ಹೀಗಾಗಿ ಭಾರತ&ಆಸೀಸ್​ ತಂಡಗಳಿಗೆ ಈಗ ವಿಶ್ವ ನಂ. 1 ತಂಡವಾಗಿ ವಿಶ್ವಕಪ್​ನಲ್ಲಿ ಅಭಿಯಾನ ಆರಂಭಿಸುವ ಅವಕಾಶ ಹೆಚ್ಚಿದೆ.

ದಣ ಆಫ್ರಿಕಾ ವಿರುದ್ಧದ ಕೊನೇ 2 ಏಕದಿನ ಪಂದ್ಯಗಳಲ್ಲಿ ಆಸೀಸ್​ ಒಂದರಲ್ಲಿ ಸೋತರೂ, ಭಾರತ ತಂಡ ಫೈನಲ್​ ಪಂದ್ಯದಲ್ಲಿ ಲಂಕಾವನ್ನು ಮಣಿಸಿ ಏಷ್ಯಾಕಪ್​ನೊಂದಿಗೆ ವಿಶ್ವ ನಂ. 1 ಪಟ್ಟವನ್ನೂ ಒಲಿಸಿಕೊಳ್ಳಬಹುದಾಗಿದೆ. ಒಂದು ವೇಳೆ ಫೈನಲ್​ ಸೋತರೂ, ಆಸೀಸ್​ ವಿರುದ್ಧದ ತವರಿನ ಸರಣಿಯಲ್ಲಿ ಗೆದ್ದರೂ ಭಾರತ ನಂ. 1 ಪಟ್ಟಕ್ಕೇರಬಹುದಾಗಿದೆ. ಆಸೀಸ್​ ವಿಶ್ವಕಪ್​ವರೆಗೂ ವಿಶ್ವ ನಂ. 1 ಪಟ್ಟ ಉಳಿಸಿಕೊಳ್ಳಲು ದಕ್ಷಿಣ ಆಫ್ರಿಕಾ ವಿರುದ್ಧ ಕೊನೇ 2 ಪಂದ್ಯಗಳಲ್ಲಿ ಒಂದಾದರೂ ಗೆಲ್ಲಬೇಕು ಮತ್ತು ಭಾರತ ವಿರುದ್ಧ ಸರಣಿ ಗೆಲ್ಲಬೇಕಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಕೊನೇ 2 ಪಂದ್ಯಗಳಲ್ಲಿ ಆಸೀಸ್​ ಸೋತರೆ ಮತ್ತು ಭಾರತ ತಂಡ ಏಷ್ಯಾಕಪ್​ ಫೈನಲ್​ ಹಾಗೂ ಆಸೀಸ್​ ವಿರುದ್ಧದ ಏಕದಿನ ಸರಣಿ ಸೋತರೆ ಪಾಕಿಸ್ತಾನವೂ ವಿಶ್ವಕಪ್​ಗೆ ಮುನ್ನ ಮತ್ತೆ ನಂ. 1 ಪಟ್ಟಕ್ಕೇರಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net