ಪ್ಯಾರಿಸ್​ ಒಲಿಂಪಿಕ್ಸ್​ ಪುರುಷರ ಹಾಕಿ ಸ್ಪರ್ಧೆಯ ಗ್ರೂಪ್​ ಪ್ರಕಟ; ಕಠಿಣ ಗುಂಪಿನಲ್ಲಿ ಸ್ಥಾನ ಪಡೆದ ಭಾರತ

hockey oly web
Published on

ಲೌಸನ್ನೆ (ಸ್ವಿರ್ಜಲೆಂಡ್​): ಏಷ್ಯನ್​ ಗೇಮ್ಸ್​ ಚಾಂಪಿಯನ್​ ಹಾಗೂ ಟೋಕಿಯೊ ಒಲಿಂಪಿಕ್ಸ್​ ಕಂಚು ವಿಜೇತ ಭಾರತ ತಂಡ ಮುಂಬರುವ ಪ್ಯಾರಿಸ್​ ಒಲಿಂಪಿಕ್ಸ್​ನ ಪುರುಷರ ಹಾಕಿ ಸ್ಪರ್ಧೆಯಲ್ಲಿ ಕಠಿಣ ಬಿ ಗುಂಪಿನಲ್ಲಿ ಸ್ಥಾನ ಪಡೆದಿದೆ. ಹಾಲಿ ಒಲಿಂಪಿಕ್ಸ್​ ಚಾಂಪಿಯನ್​ ಹಾಗೂ ವಿಶ್ವ ನಂ.2 ಬೆಲ್ಜಿಯಂ, ಬಲಿಷ್ಠ ಆಸ್ಟ್ರೆಲಿಯಾ, ರಿಯೋ ಒಲಿಂಪಿಕ್ಸ್​ ಸ್ವರ್ಣ ವಿಜೇತ ಅರ್ಜೆಂಟೀನಾ, ನ್ಯೂಜಿಲೆಂಡ್​ ಮತ್ತು ಐರ್ಲೆಂಡ್​ ಗುಂಪಿನ ಇತರ ತಂಡಗಳಾಗಿವೆ.

8 ಬಾರಿಯ ಒಲಿಂಪಿಕ್ಸ್​ ಚಾಂಪಿಯನ್​ ಭಾರತ ತಂಡ 2021ರಲ್ಲಿ ಟೋಕಿಯೊದಲ್ಲಿ 41 ವರ್ಷಗಳ ಬಳಿಕ ಒಲಿಂಪಿಕ್ಸ್​ ಪದಕ ಗೆದ್ದ ಸಾಧನೆ ಮಾಡಿತ್ತು. ವಿಶ್ವ ರ್ಯಾಂಕಿಂಗ್​ನಲ್ಲಿ ಭಾರತ ಸದ್ಯ 3ನೇ ಸ್ಥಾನದಲ್ಲಿದೆ. ವಿಶ್ವ ನಂ. 1 ನೆದರ್ಲೆಂಡ್​, ಜರ್ಮನಿ, ಬ್ರಿಟನ್​, ಸ್ಪೇನ್​, ಫ್ರಾನ್ಸ್​ ಮತ್ತು ದಣ ಆಫ್ರಿಕಾ ತಂಡಗಳು ಎ ಗುಂಪಿನಲ್ಲಿವೆ. ಮಹಿಳೆಯರ ವಿಭಾಗದ ಗುಂಪುಗಳು ಕೂಡ ಭಾನುವಾರ ಪ್ರಕಟಗೊಂಡಿವೆ. ಆದರೆ ಭಾರತ ಈ ಬಾರಿ ಮಹಿಳಾ ಹಾಕಿ ಸ್ಪರ್ಧೆಯಲ್ಲಿ ಒಲಿಂಪಿಕ್ಸ್​ ಅರ್ಹತೆ ಸಂಪಾದಿಸಲು ವಿಫಲವಾಗಿದೆ.

ಪುರುಷರ ಮತ್ತು ಮಹಿಳಾ ಹಾಕಿ ಸ್ಪರ್ಧೆಯಲ್ಲಿ ತಲಾ 12 ತಂಡಗಳು ಸ್ಪರ್ಧಿಸುತ್ತಿವೆ. ತಲಾ 6 ತಂಡಗಳ 2 ಗುಂಪುಗಳಿಂದ ಅಗ್ರ 4 ತಂಡಗಳು ಕ್ವಾರ್ಟರ್​ಫೈನಲ್​ಗೇರಲಿವೆ. ಪ್ಯಾರಿಸ್​ ಒಲಿಂಪಿಕ್ಸ್​ ಜುಲೈ 26ರಿಂದ ಆಗಸ್ಟ್​ 11ರವರೆಗೆ ನಡೆಯಲಿದ್ದು, ಹಾಕಿ ಸ್ಪರ್ಧೆಗಳು ಜುಲೈ 27ರಿಂದ ಆಗಸ್ಟ್​ 9ರವರೆಗೆ ನಡೆಯಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net