ಸುಮ್ಮನೆ ಓವರ್​ಹೈಪ್ ಕೊಡಲಾಗುತ್ತಿದೆ... ಭಾರತ-ಪಾಕ್ ಪಂದ್ಯದ ಕುರಿತು Harbhajan Singh ಹೇಳಿಕೆ ವೈರಲ್​

India Pakistan
Published on

ನವದೆಹಲಿ: ಫೆಬ್ರವರಿ 23ಕ್ಕೆ ಭಾರತ ಹಾಗೂ ಪಾಕಿಸ್ತಾನ ನಡುವಿನ ಚಾಂಪಿಯನ್ಸ್ ಟ್ರೋಫಿ ಪಂದ್ಯ ನಡೆಯಲಿದ್ದು, ಈ ಹೈವೋಲ್ಟೇಜ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿದೆ. ಈಗಾಗಲೇ ಪಂದ್ಯದ ಟಿಕೆಟ್ಗಳು ಕಡಲೇಪುರಿಯಂತೆ ಮಾರಾಟವಾಗಿದ್ದು, ಪ್ರತಿಬಾರಿಯೂ ಉಭಯ ದೇಶಗಳ ನಡುವೆ ಪಂದ್ಯ ನಡೆದಾಗ ದಾಖಲೆ ಬರೆದಿದೆ.

ಸಹಜವೆಂಬಂತೆ ಭಾರತ ಹಾಗೂ ಪಾಕ್ ನಡುವಿನ ಪಂದ್ಯದ ವಿಚಾರವಾಗಿ ಮಾಜಿ ಹಾಗೂ ಹಾಲಿ ಆಟಗಾರರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಅದೇ ರೀತಿ ಇದೀಗ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ಕುರಿತು ಟೀಮ್ ಇಂಡಿಯಾದ ಲೆಜೆಂಡರಿ ಆಟಗಾರ ಹರ್ಭಜನ್​ ಸಿಂಗ್ ಮಾತನಾಡಿದ್ದು, ಓವರ್ ಆಗಿ ಹೈಪ್ ಕೊಡಲಾಗುತ್ತಿದೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ಧಾರೆ.

ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಈ ಬಗ್ಗೆ ಮಾತನಾಡಿರುವ ಹರ್ಭಜನ್ ಸಿಂಗ್ (Harbhajan Singh)​, ನಾವು ಭಾರತ ಹಾಗೂ ಪಾಕಿಸ್ತಾನ ನಡುವಿನ ಓವರ್​ಹೈಪ್ಡ್​ ಪಂದ್ಯದ ಬಗ್ಗೆ ಚರ್ಚಿಸೋಣ. ಅಲ್ಲಿ ಏನು ಇಲ್ಲದ ಕಾರಣ ಅತಿಯಾಗಿ ಪ್ರಚಾರ ನೀಡಲಾಗುತ್ತಿದೆ. ಟೂರ್ನಿಯಲ್ಲಿ ನೋಡುವುದಾದರೆ ಭಾರತ ಬಲಿಷ್ಠವಾಗಿದ್ದು, ಪಾಕಿಸ್ತಾನ ತಂಡದಲ್ಲಿ ಸ್ಥಿರತೆಯ ಕೊರತೆ ಎದ್ದು ಕಾಣುತ್ತಿದೆ. ಅಂಕಿಅಂಶಗಳನ್ನು ನೋಡುವುದಾದರೆ ನಿಮಗೆ ಸ್ಪಷ್ಟಚಿತ್ರಣ ಸಿಗುತ್ತದೆ ಎಂದು ಹರ್ಭಜನ್ ಸಿಂಗ್ (Harbhajan Singh) ಹೇಳಿದ್ದಾರೆ.

Harbhajan Singh

ಇಂಗ್ಲೆಂಡ್ ವಿರುದ್ಧ ಟಿ20 ಹಾಗೂ ಏಕದಿನ ಸರಣಿ ಗೆಲ್ಲುವ ಮೂಲಕ ಭರ್ಜರಿ ಹುಮ್ಮಸ್ಸಿನಲ್ಲಿ ಟೀಮ್ ಇಂಡಿಯಾ ತನ್ನ ಗೆಲುವಿನ ಓಟವನ್ನು ಚಾಂಪಿಯನ್ಸ್​ ಟ್ರೋಫಿಯಲ್ಲಿ ವಿಸ್ತರಿಸಲು ಮುಂದಾಗಿದೆ. ಭಾರತ ತನ್ನೆಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಲಿದ್ದು, ಈಗಾಗಲೇ ತಾಲೀಮು ಆರಂಭಿಸಿದೆ. ಫೆಬ್ರವರಿ 23ರಂದು ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ನಡೆಯಲಿದ್ದು, ಭಾರತ ಪಾಕಿಸ್ತಾನದ ವಿರುದ್ಧ ಮತ್ತೊಮ್ಮೆ ತನ್ನ ಪ್ರಾಬಲ್ಯವನ್ನು ಮುಂದುವರೆಸಲು ಸಜ್ಜಾಗಿದೆ.

ಚಾಂಪಿಯನ್ಸ್​ ಟ್ರೋಫಿಗೆ ಭಾರತ ತಂಡ 

ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೀ), ಕೆಎಲ್ ರಾಹುಲ್ (ವಿಕೀ), ಹಾರ್ದಿಕ್ ಪಾಂಡ್ಯ, ಅಕ್ಸರ್ ಪಟೇಲ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ , ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net