

ರಾಯ್‌ಪುರ: ದಿಗ್ಗಜ ಸಚಿನ್ ತೆಂಡುಲ್ಕರ್ (60ರನ್, 37 ಎಸೆತ, 9 ಬೌಂಡರಿ, 1 ಸಿಕ್ಸರ್) ಹಾಗೂ ಯುವರಾಜ್ ಸಿಂಗ್ (52*ರನ್, 22 ಎಸೆತ, 2 ಬೌಂಡರಿ, 6 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ಫಲವಾಗಿ ಭಾರತ ಲೆಜೆಂಡ್ಸ್ ತಂಡ ‘ರಸ್ತೆ ಸುರಕ್ಷತಾ ವರ್ಲ್ಡ್ ಸಿರೀಸ್’ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿತು. ಶಾಹೀದ್ ವೀರ್ ನಾರಾಯಣ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಸಚಿನ್ ತೆಂಡುಲ್ಕರ್ ಸಾರಥ್ಯದ ಭಾರತ ಲೆಜೆಂಡ್ಸ್ ತಂಡ ಲೀಗ್ ಹಂತದ ತನ್ನ ಅಂತಿಮ ಪಂದ್ಯದಲ್ಲಿ 56 ರನ್‌ಗಳಿಂದ ದಕ್ಷಿಣ ಆಫ್ರಿಕಾ ಲೆಜೆಂಡ್ಸ್ ತಂಡವನ್ನು ಸೋಲಿಸಿತು.
ಇದನ್ನೂ ಓದಿ: ಮುಂಬೈ ಸಿಟಿ ತಂಡಕ್ಕೆ ಐಎಸ್ಎಲ್ ಕಿರೀಟ
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಲೆಜೆಂಡ್ಸ್ ತಂಡ 3 ವಿಕೆಟ್‌ಗೆ 204 ರನ್ ಪೇರಿಸಿತು. ಪ್ರತಿಯಾಗಿ ಯೂಸುಫ್ ಠಾಣ್ (34ಕ್ಕೆ 3) ಹಾಗೂ ಯುವರಾಜ್ ಸಿಂಗ್ (18ಕ್ಕೆ 2) ಮಾರಕ ದಾಳಿಗೆ ನಲುಗಿದ ದಕ್ಷಿಣ ಆಫ್ರಿಕಾ ಲೆಜೆಂಡ್ಸ್ ತಂಡ 7 ವಿಕೆಟ್‌ಗೆ 148 ರನ್‌ಗಳಿಸಲಷ್ಟೇ ಶಕ್ತವಾಯಿತು.
ಭಾರತ ಲೆಜೆಂಡ್ಸ್: 3 ವಿಕೆಟ್‌ಗೆ 204 (ವೀರೇಂದ್ರ ಸೆಹ್ವಾಗ್ 6, ಸಚಿನ್ ತೆಂಡುಲ್ಕರ್ 60, ಎಸ್.ಬದ್ರಿನಾಥ್ 42, ಯುವರಾಜ್ ಸಿಂಗ್ 52*, ಯೂಸುಫ್ ಪಠಾಣ್ 23, ಮನ್‌ಪ್ರೀತ್ ಗೂನಿ 16*, ಮಂಡೆ ಜೊಂಡೆಕಿ 35ಕ್ಕೆ 2). ದಕ್ಷಿಣ ಆಫ್ರಿಕಾ ಲೆಜೆಂಡ್ಸ್ : 7 ವಿಕೆಟ್‌ಗೆ 148 (ಮಾರ್ನೆ ವ್ಯಾನ್ 48, ಯೂಸುಫ್ ಪಠಾಣ್ 34ಕ್ಕೆ 3, ಯುವರಾಜ್ ಸಿಂಗ್ 18ಕ್ಕೆ 2).