More

    ಮುಂಬೈ ಸಿಟಿ ತಂಡಕ್ಕೆ ಐಎಸ್‌ಎಲ್ ಕಿರೀಟ

    ಫರ್ಟೋಡ: ಕಡೇ ನಿಮಿಷದಲ್ಲಿ ಬಿಪಿನ್ ಸಿಂಗ್ (90ನೇ ನಿಮಿಷ) ಸಿಡಿಸಿದ ಗೋಲಿನ ನೆರವಿನಿಂದ ಮುಂಬೈ ಸಿಟಿ ತಂಡ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಚಾಂಪಿಯನ್‌ಪಟ್ಟ ಅಲಂಕರಿಸಿತು. ಫರ್ಟೋಡ ಸ್ಟೇಡಿಯಂನಲ್ಲಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಮುಂಬೈ ಸಿಟಿ ಎಫ್ ತಂಡ 2-1 ಗೋಲುಗಳಿಂದ ಎಟಿಕೆ ಮೋಹನ್ ಬಾಗನ್ ತಂಡವನ್ನು ಸೋಲಿಸಿತು. ಮೊದಲ ಬಾರಿಗೆ ಮುಂಬೈ ಸಿಟಿ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು.

    ಇದನ್ನೂ ಓದಿ: ವಿಶ್ವೇಶ್ವರಯ್ಯ ಹೆಸರಿನಲ್ಲಿ ದೇಶದಲ್ಲೇ ಮೊದಲ ಏರ್ ಪೋರ್ಟ್​ ರೀತಿ ರೈಲು ನಿಲ್ದಾಣ

    ಪಂದ್ಯ ಮೊದಲಾರ್ಧದಲ್ಲಿ ಉಭಯ ತಂಡಗಳ ತಲಾ 1 ಗೋಲುಗಳಿಸಿ ಸಮಬಲ ಸಾಧಿಸಿದ್ದವು. ಜಿದ್ದಾಜಿದ್ದಿನಿಂದ ಕೂಡಿ ದ್ವಿತೀಯಾರ್ಧದಲ್ಲಿ ಎರಡು ತಂಡಗಳು ಪ್ರಬಲ ಪೈಪೋಟಿ ನಡೆಸಿದವು. ಕಡೇ ನಿಮಿಷದಲ್ಲಿ ಮುಂಬೈ ತಂಡ ಬಿಪಿನ್ ಸಿಂಗ್ ಗೋಲು ಬಾರಿಸುವ ಮೂಲಕ ಎಟಿಕೆ ತಂಡಕ್ಕೆ ಆಘಾತ ನೀಡಿದರು. ಬಳಿಕ 6 ನಿಮಿಷಗಳ ಇಂಜುರಿ ವೇಳೆಯಲ್ಲಿ ಎಟಿಕೆ ತಂಡ ಆಕ್ರಮಣಕಾರಿ ನಿರ್ವಹಣೆ ತೋರಿದರೂ ಮುಂಬೈ ಆಟಗಾರರು ಅವಕಾಶ ನೀಡಲಿಲ್ಲ. ಐಎಸ್‌ಎಲ್‌ನಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದೊಂದಿಗೆ ಪ್ರಶಸ್ತಿ ಜಯಿಸಿದ ಎರಡನೇ ತಂಡ ಎನಿಸಿಕೊಂಡರು. ಇದಕ್ಕೂ ಬೆಂಗಳೂರು ಎಫ್ ಸಿ ಈ ಸಾಧನೆ ಮಾಡಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts