ನಾನು ಹಳೆಯದನ್ನು ಅಷ್ಟಾಗಿ ನೆನಪಿಡುವುದಿಲ್ಲ; ಟೀಮ್​ ಇಂಡಿಯಾ ಕೋಚ್​ ರಾಹುಲ್​ ದ್ರಾವಿಡ್​ ಹೀಗಂದಿದ್ಯಾಕೆ

Rahul Dravid
Published on

ಬಾರ್ಬೋಡಾಸ್​: ಇಲ್ಲಿನ ಕೆನ್ಸಿಂಗ್ಟನ್​ ಓವಲ್​ ಕ್ರೀಡಾಂಗಣದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್​ನ 43ನೇ ಪಂದ್ಯದಲ್ಲಿ ಭಾರತ ಹಾಗೂ ಅಫ್ಘಾನಿಸ್ತಾನ ಮುಖಾಮುಖಿಯಾಗಲಿದ್ದು, ಉಭಯ ತಂಡಗಳು ಎದುರಾಳಿಯನ್ನು ಮಣಿಸಲು ಸಿದ್ಧತೆ ನಡೆಸುತ್ತಿವೆ. ಇನ್ನೂ ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಟೀಮ್​ ಇಂಡಿಯಾ ಕೋಚ್​ ರಾಹುಲ್​ ದ್ರಾವಿಡ್​, ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಗರಂ ಆಗಿದ್ದಾರೆ. ಈ ವಿಡಿಯೋ ಈಗ ಸಖತ್​ ವೈರಲ್​ ಆಗುತ್ತಿದೆ.

ತಮ್ಮ ತಾಳ್ಮೆ ಹಾಗೂ ಶಾಂತ ವರ್ತನೆಯಿಂದಲೇ ಹೆಸರುವಾಸಿಯಾಗಿರುವ ರಾಹುಲ್​ ದ್ರಾವಿದ್​ ಪತ್ರಕರ್ತರೊಬ್ಬರು 1997ರಲ್ಲಿ ಕೆನ್ಸಿಂಗ್ಟನ್​ ಓವಲ್​ ಕ್ರೀಡಾಂಗಣದಲ್ಲಿ ವೆಸ್ಟ್​ ಇಂಡೀಸ್​ ವಿರುದ್ಧ ನಡೆದ ಟೆಸ್ಟ್​ ಪಂದ್ಯದಲ್ಲಿನ ಸೋಲಿನ ಕುರಿತು ಪ್ರಶ್ನಿಸಿದ್ದಾರೆ. ಈ ಪ್ರಶ್ನೆ ಕೇಳುತ್ತಿದ್ದಂತೆ ಕುಪಿತಗೊಂಡ ರಾಹುಲ್​ ದ್ರಾವಿಡ್​ ಖಡಕ್ಕಾಗಿಯೇ ಉತ್ತರ ನೀಡಿದ್ದಾರೆ.

ನೀವು ಆಟಗಾರರಾಗಿ ಈ ಕ್ರೀಡಾಂಗಣದಲ್ಲಿ ಆಡಿರುವ ಅನುಭವ ನಿಮಗಿದೆ. 1997ರಲ್ಲಿ ವೆಸ್ಟ್​ ಇಂಡೀಸ್​ ವಿರುದ್ಧ ನಡೆದ ಟೆಸ್ಟ್​ ಸರಣಿ ನಿಮಗೆ ನೆನಪಿದೆಯೇ ಎಂದು ಕೇಳುವ ಮೂಲಕ ಕಿಚಾಯಿಸಲು ಯತ್ನಿಸಿದರು. ಇದಕ್ಕೆ ಖಡಕ್ಕಾಗಿಯೇ ಉತ್ತರಿಸಿದ ರಾಹುಲ್​, ತುಂಬಾ ಧನ್ಯವಾದಗಳು ಗೆಳೆಯ ನನಗೆ ಸೋಲಿನ ಜೊತೆಗೆ ಯೋಗ್ಯವಾದ ನೆನಪುಗಳು ನನ್ನ ನೆನಪಿನಲ್ಲಿ ಉಳಿದಿದೆ ಎಂದು ಹೇಳಿದರು.

ಬಳಿಕ ನಾನು ಕೆಲ ವಿಷಯಗಳಿಂದ ಬೇಗನೆ ಹೊರಬರುತ್ತೇನೆ. ಅದು ನನ್ನ ವೈಶಿಷ್ಟ್ಯಗಳಲ್ಲಿ ಒಂದು. ಆ ಬಳಿಕ ಕೆಲ ವಿಚಾರಗಳನ್ನು ಹಿಂತಿರುಗಿ ನೋಡುವುದಿಲ್ಲ. ನಾನು ಈಗ ಏನು ಮಾಡುತ್ತಿರುವೆ, ಏನು ಮಾಡಲು ಪ್ರಯತ್ನಿಸಬಹುದು ಎಂಬುದನ್ನಷ್ಟೇ ಯೋಚಿಸುತ್ತೇನೆ. 1997 ರಲ್ಲಿ ಅಥವಾ ಆ ಬಳಿಕ ಏನಾಯಿತು ಎಂಬುದರ ಬಗ್ಗೆ ಚಿಂತಿಸುವುದಿಲ್ಲ ಎಂದು ಖಾರವಾಗಿ ಉತ್ತರಿಸಿದ್ದಾರೆ.

ನಾವು ಅಫ್ಘಾನಿಸ್ತಾನ ತಂಡವನ್ನು ಹಗುರವಾಗಿ ಪರಿಗಣಿಸುವುದಿಲ್ಲ. ಟಿ20 ಸ್ವರೂಪದಲ್ಲಿ ಅಫ್ಘಾನಿಸ್ತಾನ ಅಪಾಯಕಾರಿ ತಂಡವಾಗಿದೆ. ಅವರು ಈ ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ.ಅವರಿಗೆ ಹೆಚ್ಚಿನ ಅಂತಾರಾಷ್ಟ್ರೀಯ ಅನುಭವ ಇಲ್ಲದಿರಬಹುದು, ಆದರೆ ಅವರ ಕೆಲವು ಆಟಗಾರರು ನಮ್ಮ ಆಟಗಾರರನ್ನು ಹೊರತುಪಡಿಸಿ ಐಪಿಎಲ್​ ಸೇರಿದಂತೆ ಹೆಚ್ಚು ಟಿ20 ಲೀಗ್‌ಗಳಲ್ಲಿ ಆಡಿದ್ದಾರೆ. ಅವರನ್ನು ಲಘುವಾಗಿ ಪರಿಗಣಿಸುವಂತಿಲ್ಲಾ ಎಂದು ಟೀಮ್​ ಇಂಡಿಯಾ ಕೋಚ್​ ರಾಹುಲ್​ ದ್ರಾವಿಡ್​ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net