

ಮಸ್ಕತ್ (ಓಮನ್): ದ್ವೀತಿಯಾರ್ಧದಲ್ಲಿ ತೋರಿದ ಬಲಿಷ್ಠ ನಿರ್ವಹಣೆಯ ಬಲದಿಂದ ಭಾರತ ತಂಡ ಚೊಚ್ಚಲ ಆವೃತ್ತಿಯ ಎ್ಐಎಚ್ ಮಹಿಳಾ ಹಾಕಿ ಫೈವ್ಸ್ ವಿಶ್ವಕಪ್ನಲ್ಲಿ ಫೈನಲ್ ಪ್ರವೇಶಿಸಿದೆ. ಭಾರತ ತಂಡ ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ದಣ ಆಫ್ರಿಕಾ ವಿರುದ್ಧ 6-3 ಗೋಲುಗಳಿಂದ ಗೆಲುವು ದಾಖಲಿಸಿತು. ಭಾರತ ತಂಡ ಶನಿವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ನೆದರ್ಲೆಂಡ್ ಎದುರು ಪ್ರಶಸ್ತಿಗಾಗಿ ಹೋರಾಡಲಿದೆ.
ಉಪಾಂತ್ಯ ಹೋರಾಟದ ಮೊದಲಾರ್ಧದಲ್ಲಿ ಉಭಯ ತಂಡಗಳು 2-2ರಿಂದ ಸಮಬಲ ಸಾಧಿಸಿದವು. ಬಳಿಕ ದ್ವೀತಿಯಾರ್ಧದಲ್ಲಿ 5 ನಿಮಿಷಗಳ ಅಂತರದಲ್ಲಿ 4 ಗೋಲು ಬಾರಿಸುವ ಮೂಲಕ ಭಾರತ ಪ್ರಾಬಲ್ಯ ಸಾಧಿಸಿತು.
ಇದಕ್ಕೆ ಮುನ್ನ ನಡೆದ ಕ್ವಾರ್ಟರ್ಫೈನಲ್ನಲ್ಲಿ ರುತುಜಾ ಪಿಸಲ್ (9, 22, 26, 28ನೇ ನಿಮಿಷ) ಸಿಡಿಸಿದ 4 ಗೋಲುಗಳು ಮತ್ತು ದೀಪಿಕಾ (2, 25, 29ನೇ ನಿಮಿಷ) ಹ್ಯಾಟ್ರಿಕ್ ಗೋಲಿನಿಂದ ಭಾರತ ತಂಡ ನ್ಯೂಜಿಲೆಂಡ್ ಎದುರು 11-1ರಿಂದ ಜಯ ಸಾಧಿಸಿತ್ತು. ನ್ಯೂಜಿಲೆಂಡ್ ತಂಡ ಪಂದ್ಯದ 2ನೇ ನಿಮಿಷದಲ್ಲೇ ಗೋಲು ಬಾರಿಸಿ ಆರಂಭಿಕ ಮುನ್ನಡೆ ಸಾಧಿಸಿತು. ಭಾರತ 15 ಸೆಕೆಂಡ್ ಅಂತರದಲ್ಲೇ ಸಮಬಲದ ಗೋಲು ಬಾರಿಸಿತು. 9ನೇ ನಿಮಿಷದಲ್ಲಿ ಮೊದಲ ಬಾರಿ ಮುನ್ನಡೆ ಸಾಧಿಸಿದ ಭಾರತ, ನಂತರದಲ್ಲಿ ಸಿಡಿಸಿದ ಗೋಲುಗಳ ಅಬ್ಬರಕ್ಕೆ ನ್ಯೂಜಿಲೆಂಡ್ ತಂಡ ಸಂಪೂರ್ಣ ಮಂಕಾಯಿತು. ಭಾರತ ಪರ ಮುಮ್ತಾಜ್ (10, 11) ಮತ್ತು ಮರಿಯಾನಾ (13, 14) ತಲಾ 2 ಗೋಲು ಬಾರಿಸಿದರು.